ಜೀವನದಲ್ಲಿ ಒಂಟಿಯಾದೇ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ ಇಲ್ಲಿದೆ ಸಮಸ್ಯೆಗೆ ಸೂಕ್ತ ಸಲಹೆ
ಜನರು ಸಾಮಾನ್ಯವಾಗಿ ತಮ್ಮ ಯುವ ಮತ್ತು ಮಧ್ಯಮ ಪ್ರೌಢಾವಸ್ಥೆಯಲ್ಲಿ ವೃತ್ತಿಜೀವನ ಹಾಗು ಮನೆ, ಮಡದಿ, ಮಕ್ಕಳು,ಆಸ್ತಿ ಸಂಪತ್ತು ಇದರಲ್ಲೇ ಮುಳುಗಿರುತ್ತಾರೆ. ಆದರೆ ನೀವು ಯಾವತ್ತೂ ಈ ರೀತಿ ಮಾಡದಿರಿ.
ಯಾವುದೇ ಒಬ್ಬ ವ್ಯಕ್ತಿಯೂ ತನ್ನ ವೃತ್ತಿಜೀವನದ ನಿವೃತ್ತಿಯ ನಂತರದ ಜೀವನದಲ್ಲಿ ಅತಿಯಾದ ಯೋಚನೆ, ಮಾನಸಿಕ ಖಿನ್ನತೆಗೆ, ಒಂಟಿ ಎಂಬ ಭಾವನೆಗೆ ಒಳಗಾಗುತ್ತಾನೆ. ಯಾಕೆಂದರೆ ಆತನ ಜೀವನ ಪೂರ್ತಿ ತನ್ನ ಕುಟುಂಬ, ವೃತ್ತಿಜೀವನ, ಮನೆ, ಆಸ್ತಿ ,ಸಂಪತ್ತು ಸಂಪಾದನೆಯಲ್ಲೇ ಮುಳುಗಿ ಹೋಗಿರುತ್ತಾನೆ. ವಿನಃ ತನ್ನ ಆಸೆಗಳೇನು?ಹಾವಸ್ಯಗಳೇನು? ಎಂಬುದರ ಬಗ್ಗೆ ಯೋಚಿಸುವುದಿಲ್ಲ ಎಂದು ಫೋರ್ಟಿಸ್ ನ್ಯಾಷನಲ್ ಮೆಂಟಲ್ ಹೆಲ್ತ್ ನ ನಿರ್ದೇಶಕರಾಗಿರುವ ಡಾ ಸಮೀರ್ ಪಾರಿಖ್ ಹೇಳುತ್ತಾರೆ.
ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ತಮ್ಮ ರೋಗಿಯೊಬ್ಬರು ತನ್ನೊಂದಿಗೆ ಹಂಚಿಕೊಂಡ ಸಮಸ್ಯೆಯ ಕುರಿತು ವಿವರಿಸುತ್ತಾರೆ. ಒಬ್ಬ ವ್ಯಕ್ತಿ ತನ್ನ ವೃತ್ತಿಪರ ಜೀವನದಿಂದ ನಿವೃತ್ತಿ ಹೊಂದಿದ ನಂತರ ಜೀವನವೇ ಶೂನ್ಯ ಎಂದೆನಿಸುತ್ತದೆ ಮತ್ತು ಆತನ ಮಕ್ಕಳು ಅವರ ಜೀವನ ಮತ್ತು ಆದ್ಯತೆಗಳೊಂದಿಗೆ ನಿರತರಾಗಿರುತ್ತಾರೆ. ಅದೇ ಸಮಯದಲ್ಲಿ, ಆರ್ಥಿಕ ಅಭದ್ರತೆಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳು ಸಹ ಕಳವಳಕಾರಿ ವಿಷಯವಾಗಿದೆ. ಇವೆಲ್ಲವುಗಳು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
ಇಂದು ನಮ್ಮ ಜಗತ್ತಿನಲ್ಲಿ ವಾಸ್ತವವಾಗಿ, ವಯಸ್ಸಾದ ಜನಸಂಖ್ಯೆಯ ಏಳು ಪ್ರತಿಶತದಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ವಯೋವೃದ್ಧರ ಸಂಕಟ ಹೆಚ್ಚಾಗಿ ಯಾರ ಗಮನಕ್ಕೆ ಬರುವುದಿಲ್ಲ ಮತ್ತು ಇವರು ಸಾಮಾನ್ಯವಾಗಿ ಇತರ ಯಾವುದೇ ವಯಸ್ಸಿನವರೊಂದಿಗೆ ಸೇರುವುದಿಲ್ಲ. ಅದರ ಜೊತೆಗೆ ದೈಹಿಕ ಆರೋಗ್ಯದ ಪರಿಸ್ಥಿತಿಗಳು ಸರಿಯಿರುವುದಿಲ್ಲ.
ಜನರು ಸಾಮಾನ್ಯವಾಗಿ ತಮ್ಮ ಯುವ ಮತ್ತು ಮಧ್ಯಮ ಪ್ರೌಢಾವಸ್ಥೆಯಲ್ಲಿ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಮತ್ತು ಕುಟುಂಬಗಳನ್ನು ಬೆಳೆಸುವಲ್ಲಿ ಮುಳುಗಿ ಹೋಗಿರುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ಜೀವನಕ್ಕೆ ಬೇಕಾಗುವ ಆರ್ಥಿಕ ಹೂಡಿಕೆಯ ಬಗ್ಗೆ ಯೋಚಿಸುವುದಿಲ್ಲ. ಜೊತೆಗೆ ತಮ್ಮ ಆಸಕ್ತಿಗಳೇನು? ಹವ್ಯಾಸಗಳು? ಯಾವುದರ ಬಗ್ಗೆಯೂ ಗಮನ ಹರಿಸುವುದಿಲ್ಲ. ಪರಿಣಾಮವಾಗಿ, ನಿವೃತ್ತಿಯ ನಂತರದ ಜೀವನವು ಗುರಿಯಿಲ್ಲದ ಮತ್ತು ಪ್ರತ್ಯೇಕತೆಯನ್ನು ಅನುಭವಿಸಬಹುದು.
ನಮ್ಮ ಸ್ವಂತ ಜೀವನಕ್ಕೆ ಹೂಡಿಕೆ ಮಾಡುವುದು ನಮಗೆ ಮುಖ್ಯವಾಗಿದೆ. ನಿವೃತ್ತಿಯ ನಂತರ ನಿಮ್ಮ ಸಂತೋಷ ಮತ್ತು ನಿಮಗೆ ಸಂತೋಷವನ್ನು ನೀಡುವ ಕೆಲಸದ ಆಸಕ್ತಿಗಳನ್ನು ಬೆಳೆಸಿಕೊಳ್ಳಿ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಕ್ರಿಯವಾಗಿರುವ ದಿನಚರಿಯನ್ನು ಬೆಳೆಸಿಕೊಳ್ಳಿ. ಇತ್ತೀಚಿನ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ತಿಳಿದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ. ಹೌದು, ಸಮಯದೊಂದಿಗೆ ಬಹಳಷ್ಟು ಕಳೆದುಹೋಗುತ್ತದೆ – ನಾವು ನಮ್ಮ ನಿಲುವನ್ನು ಕಳೆದುಕೊಳ್ಳಬಹುದು, ನಾವು ನಮ್ಮ ಸ್ನೇಹಿತರನ್ನು ಕಳೆದುಕೊಳ್ಳಬಹುದು. ದೈಹಿಕ ಆರೋಗ್ಯ ಯಾವಾಗಲೂ ನಮ್ಮ ಕಡೆ ಇರದಿರಬಹುದು. ಆದರೆ ಈ ಸಮಯದೊಂದಿಗೆ ಬಹಳಷ್ಟು ಗಳಿಸಿದೆ – ಅನುಭವ, ಪರಾನುಭೂತಿ ಮತ್ತು ಬುದ್ಧಿವಂತಿಕೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:25 am, Wed, 26 October 22