Kantara: ಕುಟುಂಬ ಸಮೇತ ‘ಕಾಂತಾರ’ ನೋಡಲಿರುವ ವೀರೇಂದ್ರ ಹೆಗ್ಗಡೆ; ಮುಖ್ಯವಾಗಲಿದೆ ಇವರ ಅಭಿಪ್ರಾಯ

Veerendra Heggade | Rishab Shetty: ಹಲವು ಕಾರಣದಿಂದ ‘ಕಾಂತಾರ’ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ಈ ಸಿನಿಮಾ ನೋಡಿದ ಬಳಿಕ ಏನು ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಎಲ್ಲರೂ ಕಾದಿದ್ದಾರೆ.

Kantara: ಕುಟುಂಬ ಸಮೇತ ‘ಕಾಂತಾರ’ ನೋಡಲಿರುವ ವೀರೇಂದ್ರ ಹೆಗ್ಗಡೆ; ಮುಖ್ಯವಾಗಲಿದೆ ಇವರ ಅಭಿಪ್ರಾಯ
ವೀರೇಂದ್ರ ಹೆಗ್ಗಡೆ, ಕಾಂತಾರ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 21, 2022 | 2:58 PM

ಎಲ್ಲ ಕ್ಷೇತ್ರದವರನ್ನೂ ‘ಕಾಂತಾರ’ (Kantara) ಸಿನಿಮಾ ಆಕರ್ಷಿಸಿದೆ. ಪರಭಾಷೆ ಮಂದಿ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಆಯಾಮಗಳಿಂದ ಈ ಸಿನಿಮಾವನ್ನು ನೋಡಲಾಗುತ್ತಿದೆ. ಪ್ರಭಾಸ್​, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್​ ಸೇರಿದಂತೆ ಹಲವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾಗಿದೆ. ಈಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ (Veerendra Heggade) ಅವರು ಕೂಡ ‘ಕಾಂತಾರ’ ನೋಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಇಂದು (ಅ.21) ಸಂಜೆ 7 ಗಂಟೆಗೆ ಮಂಗಳೂರಿನ ಪ್ರಭಾತ್​ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಯಾವ ರೀತಿಯ ಅಭಿಪ್ರಾಯ ತಿಳಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ. ರಿಷಬ್​ ಶೆಟ್ಟಿ (Rishab Shetty) ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಇತ್ತೀಚೆಗೆ ‘ಕಾಂತಾರ’ ಸಿನಿಮಾ ಬಗ್ಗೆ ಬೇರೊಂದು ರೀತಿಯ ಚರ್ಚೆ ಶುರುವಾಗಿತ್ತು. ಈ ಚಿತ್ರದಲ್ಲಿ ತೋರಿಸಲಾದ ಭೂತಕೋಲವು ಹಿಂದು ಧರ್ಮಕ್ಕೆ ಸೇರಿದ್ದಲ್ಲ ಎಂದು ‘ಆ ದಿನಗಳು’ ಚೇತನ್​ ಅವರು ತಕರಾರು ತೆಗೆದಿದ್ದರು. ಆ ಕುರಿತು ಪರ-ವಿರೋಧದ ಚರ್ಚೆ ಹುಟ್ಟಿಕೊಂಡಿತ್ತು. ದೈವ ನರ್ತಕರು, ಧಾರ್ಮಿಕ ಮುಖಂಡರು, ಭಕ್ತರು ಸೇರಿದಂತೆ ಅನೇಕರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರು ತಿಳಿಸಲಿರುವ ಅಭಿಪ್ರಾಯ ತುಂಬ ಮುಖ್ಯವಾಗಲಿದೆ.

ತುಳುನಾಡಿನ ಸಂಸ್ಕೃತಿಯನ್ನು ‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಭೂತಾರಾಧನೆಗೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಹಲವು ದೃಶ್ಯಗಳಿವೆ. ಈ ಸನ್ನಿವೇಶಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ ಇದು ಹಿಂದು ಧರ್ಮದ ಆಚರಣೆ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್​ ಅಂಹಿಸಾ ಅವರು ಚರ್ಚೆ ಹುಟ್ಟುಹಾಕಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಸಿನಿಮಾ ನೋಡಿದ ಬಳಿಕ ಏನು ಹೇಳಲಿದ್ದಾರೆ ಎಂಬುದರ ಮೇಲೆ ಈ ಚರ್ಚೆಗೆ ಹೊಸ ಆಯಾಮ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ
Image
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Image
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಪರಭಾಷೆಗೂ ಡಬ್​ ಆಗಿ ಬಿಡುಗಡೆ ಆಗಿದ್ದು, ಭರ್ಜರಿ ಕಲೆಕ್ಷನ್​ ಆಗುತ್ತಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಸಖತ್​ ಲಾಭ ಆಗಿದೆ. ರಿಷಬ್​ ಶೆಟ್ಟಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಪರಭಾಷೆಯಿಂದಲೂ ಅವರಿಗೆ ಆಫರ್​ಗಳು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Fri, 21 October 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್