Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ

TV9kannada Web Team

TV9kannada Web Team | Edited By: Madan Kumar

Updated on: Oct 16, 2022 | 2:47 PM

Kantara | Rishab Shetty: ನಟಿ ಅನುಷ್ಕಾ ಶೆಟ್ಟಿ ಅವರು ‘ಕಾಂತಾರ’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕನ್ನಡದ ಚಿತ್ರಕ್ಕೆ ಈ ಪರಿ ಬೆಂಬಲ ಸೂಚಿಸಿದ್ದಕ್ಕೆ ಅವರಿಗೆ ಅಭಿಮಾನಿಗಳು ಭೇಷ್​ ಎಂದಿ​ದ್ದಾರೆ.

Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
ಅನುಷ್ಕಾ ಶೆಟ್ಟಿ, ರಿಷಬ್ ಶೆಟ್ಟಿ

ಕನ್ನಡದ ‘ಕಾಂತಾರ’ (Kantara) ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ನೋಡಿದ ಎಲ್ಲರೂ ವಾವ್​ ಎನ್ನುತ್ತಿದ್ದಾರೆ. ಮೊದಲು ಕನ್ನಡದಲ್ಲಿ ರಿಲೀಸ್​ ಆಗಿದ್ದ ಈ ಚಿತ್ರ ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿಯೂ ತೆರೆಕಂಡಿತು. ಪರಭಾಷೆಯ ಅನೇಕ ಸ್ಟಾರ್​ ಕಲಾವಿದರು ‘ಕಾಂತಾರ’ ನೋಡಿ ಮೆಚ್ಚಿಕೊಂಡಿದ್ದಾರೆ. ಟಾಲಿವುಡ್​ನಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಅವರಿಗೂ ಈ ಚಿತ್ರ ಸಖತ್​ ಇಷ್ಟ ಆಗಿದೆ. ಸಿನಿಮಾ ನೋಡಿದ ಬಳಿಕ ಅವರು ಅಭಿಪ್ರಾಯ ತಿಳಿಸಿದ್ದಾರೆ. ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷವಾಗಿ ರಿಷಬ್​ ಶೆಟ್ಟಿ (Rishab Shetty) ಪ್ರತಿಭೆಗೆ ಅನುಷ್ಕಾ ಭೇಷ್​ ಎಂದಿದ್ದಾರೆ. ಇದರಿಂದ ‘ಕಾಂತಾರ’ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ.

ತಾಜಾ ಸುದ್ದಿ

‘ಕಾಂತಾರ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದೆ. ದೇಶಾದ್ಯಂತ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಎಲ್ಲ ಪ್ರೇಕ್ಷಕರಿಗೂ ತಲುಪಿಸುವ ಕಾರ್ಯ ಆಗಿದೆ. ಸೆಲೆಬ್ರಿಟಿಗಳು ಕೂಡ ಈ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್​ ಅವರು ಎರಡು ಸಲ ಸಿನಿಮಾ ನೋಡಿದ್ದಾಗಿ ಹೇಳಿದರು. ಅದರ ಬೆನ್ನಲ್ಲೇ ಅನುಷ್ಕಾ ಶೆಟ್ಟಿ ಕಡೆಯಿಂದ ಮೆಚ್ಚುಗೆಯ ಮಾತು ಕೇಳಿಬಂದಿದೆ.

ಇದನ್ನೂ ಓದಿ: Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

‘ಕಾಂತಾರ ಸಿನಿಮಾ ನೋಡಿದೆ. ಪೂರ್ತಿಯಾಗಿ ಈ ಚಿತ್ರ ನನಗೆ ಇಷ್ಟ ಆಯ್ತು. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ಅಭಿನಂದನೆಗಳು. ಈ ಅನುಭವ ನೀಡಿದ್ದಕ್ಕಾಗಿ ಧನ್ಯವಾದಗಳು. ರಿಷಬ್​ ಶೆಟ್ಟಿ ನೀವು ಅಮೇಜಿಂಗ್​. ಎಲ್ಲವೂ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ’ ಎಂದು ಅನುಷ್ಕಾ ಶೆಟ್ಟಿ ಹೊಗಳಿದ್ದಾರೆ. ಕನ್ನಡದ ಸಿನಿಮಾಗೆ ಈ ಪರಿ ಬೆಂಬಲ ಸೂಚಿಸಿದ್ದಕ್ಕೆ ಅವರಿಗೆ ಅಭಿಮಾನಿಗಳು ಭೇಷ್​ ಎಂದಿ​ದ್ದಾರೆ.

ಈ ಸಿನಿಮಾದಲ್ಲಿ ರಿಷಬ್​ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಕಿಶೋರ್ ಮುಂತಾದ ಪಾತ್ರಗಳು ಕೂಡ ಹೈಲೈಟ್​ ಆಗಿವೆ. ಎಲ್ಲರಿಗೂ ಈ ಚಿತ್ರದಿಂದ ಒಳ್ಳೆಯ ಮೈಲೇಜ್​ ಸಿಕ್ಕಿದೆ. ಅಜನೀಶ್​ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಸೂಪರ್​ ಹಿಟ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada