ಅನೈತಿಕ ಸಂಬಂಧದಿಂದ ಹೆಚ್ಚಿತು ಕಿರಿಕ್? ‘ಆಕಾಶ ದೀಪ’ ನಟಿ ದಿವ್ಯಾ ಪತಿ ಅಮ್ಜದ್ ಅರೆಸ್ಟ್​

ಅಕ್ಟೋಬರ್ 14 ರಂದು ಅರ್ಮದ್​ ಅವರನ್ನು ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಯಿತು. ನಂತರ ಅವರನ್ನು ಅಲ್ಲಿಯೇ ಬಂಧಿಸಲಾಗಿದೆ. ಸದ್ಯ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಅನೈತಿಕ ಸಂಬಂಧದಿಂದ ಹೆಚ್ಚಿತು ಕಿರಿಕ್? ‘ಆಕಾಶ ದೀಪ’ ನಟಿ ದಿವ್ಯಾ ಪತಿ ಅಮ್ಜದ್ ಅರೆಸ್ಟ್​
ದಿವ್ಯಾ ಶ್ರೀಧರ್-ಅಮ್ಜದ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 15, 2022 | 7:41 PM

ಕನ್ನಡದ ‘ಆಕಾಶ ದೀಪ’ ಧಾರಾವಾಹಿ (Akasha Deepa) ಮೂಲಕ ಫೇಮಸ್ ಆದ ನಟಿ ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಖಾನ್ ನಡುವಿನ ಕೌಟುಂಬಿಕ ಜಗಳ ಬೀದಿಗೆ ಬಂದಿತ್ತು. ತನಗೆ ಪತಿಯಿಂದ ಕಿರುಕುಳ ಆಗುತ್ತಿದೆ ಎಂದು ನಟಿ ದೂರು ನೀಡಿದ್ದರು. ಈ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ನಟಿ ದೂರು ಕೂಡ ದಾಖಲು ಮಾಡಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಅಮ್ಜದ್ ಖಾನ್​ರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.  ದೂರು ದಾಖಲು ಮಾಡುವ ವೇಳೆ, ನಟಿ ಕಿರುಕುಳದ ಜತೆಗೆ ಅನೈಕ ಸಂಬಂಧದ ವಿಚಾರವನ್ನೂ ಉಲ್ಲೇಖ ಮಾಡಿದ್ದಾರೆ.

ಅಕ್ಟೋಬರ್ 14 ರಂದು ಅರ್ಮದ್​ ಅವರನ್ನು ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಯಿತು. ನಂತರ ಅವರನ್ನು ಅಲ್ಲಿಯೇ ಬಂಧಿಸಲಾಗಿದೆ. ಸದ್ಯ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಹೀಗಿರುವಾಗಲೇ ವಿಡಿಯೋ ಒಂದು ವೈರಲ್ ಆಗಿದೆ. ಅಮ್ಜದ್ ಮತ್ತು ದಿವ್ಯಾ ಜಗಳವಾಡುತ್ತಿರುವ ವಿಡಿಯೋ ಇದಾಗಿದೆ. ತಮ್ಮಿಬ್ಬರ ಮಧ್ಯೆ ಬಂದ ಹುಡುಗಿ ವಿಚಾರದಲ್ಲಿ ದಿವ್ಯಾ ಹಾಗೂ ಅಮ್ಜದ್ ನಡುವೆ ಕಿರಿಕ್ ಆಗಿದೆ. ಇದು ಅಮ್ಜದ್ ಗರ್ಲ್​ಫ್ರೆಂಡ್ ಎನ್ನಲಾಗಿದೆ. ಪತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ಅಮ್ಜದ್ ಕೂಡ ದಿವ್ಯಾ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ‘ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ. ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್​ ಮಾಡಿ. ಆಕೆ ಕೆಲವು ಕೆಟ್ಟ ಸ್ನೇಹಿತರ ಜೊತೆ ಸೇರಿ ಇದೆಲ್ಲಾ ಮಾಡ್ತಿದ್ದಾಳೆ. ಅಬಾರ್ಷನ್​ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ. ಏನೇ ಆದ್ರೂ ನನಗೆ ಮಗು ಬೇಕೇ ಬೇಕು. ಕಮಿಷನರ್​ಗೆ ದೂರು ನೀಡಲು ರೆಡಿಯಾಗಿದ್ದೇನೆ’ ಎಂದು ಅಮ್ಜದ್​ ಖಾನ್ ಈ ಮೊದಲು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ‘ಆಕಾಶ ದೀಪ’ ಧಾರಾವಾಹಿ ನಟಿ ದಿವ್ಯಾ ಹೊರಿಸಿದ ಆರೋಪಕ್ಕೆ ಸ್ಪಷ್ಟನೆ ನೀಡಿದ ಪತಿ ಅಮ್ಜದ್​ ಖಾನ್​

ದಿವ್ಯಾ ಶ್ರೀಧರ್ ಅವರು ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಕಾಶ ದೀಪ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. 2015ರಲ್ಲಿ ಪ್ರಸಾರ ಕಂಡ ತಮಿಳಿನ ‘ಕೆಳದಿ ಕಣ್ಮಣಿ’ ಧಾರಾವಾಹಿಯ ಸಹ ನಟ ಅಮ್ಜದ್ ಖಾನ್​ ಅವರನ್ನು ದಿವ್ಯಾ ಮದುವೆ ಆಗಿದ್ದರು. ಆದರೆ ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Published On - 7:41 pm, Sat, 15 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ