‘ಆಕಾಶ ದೀಪ’ ಧಾರಾವಾಹಿ ನಟಿ ದಿವ್ಯಾ ಹೊರಿಸಿದ ಆರೋಪಕ್ಕೆ ಸ್ಪಷ್ಟನೆ ನೀಡಿದ ಪತಿ ಅಮ್ಜದ್​ ಖಾನ್​

Serial Actor Divya Sridhar: ‘ಕೆಟ್ಟ ಸ್ನೇಹಿತರ ಜತೆ ಸೇರಿ ದಿವ್ಯಾ ಇದನ್ನೆಲ್ಲಾ ಮಾಡುತ್ತಿದ್ದಾಳೆ. ಅಬಾರ್ಷನ್​ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ’ ಎಂದು ಅಮ್ಜದ್​ ಖಾನ್​ ಪ್ರತ್ಯಾರೋಪ ಮಾಡಿದ್ದಾರೆ.

‘ಆಕಾಶ ದೀಪ’ ಧಾರಾವಾಹಿ ನಟಿ ದಿವ್ಯಾ ಹೊರಿಸಿದ ಆರೋಪಕ್ಕೆ ಸ್ಪಷ್ಟನೆ ನೀಡಿದ ಪತಿ ಅಮ್ಜದ್​ ಖಾನ್​
ದಿವ್ಯಾ ಶ್ರೀಧರ್, ಅಮ್ಜದ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 07, 2022 | 12:42 PM

ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್​ (Divya Sridhar) ಹಾಗೂ ನಟ ಅಮ್ಜದ್​ ಖಾನ್​ ಸಂಸಾರದಲ್ಲಿ ಬಿರುಕು ಮೂಡಿದೆ. ಅವರ ದಾಂಪತ್ಯದ ಕಿರಿಕ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಪತಿ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆ ಅಮ್ಜದ್​ ಖಾನ್​ (Amjad Khan) ಸ್ಪಷ್ಟನೆ ನೀಡಿದ್ದಾರೆ. ‘ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ. ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್​ ಮಾಡಿ. ಆಕೆ ಕೆಲವು ಕೆಟ್ಟ ಸ್ನೇಹಿತರ ಜೊತೆ ಸೇರಿ ಇದೆಲ್ಲಾ ಮಾಡ್ತಿದ್ದಾಳೆ. ಅಬಾರ್ಷನ್​ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ. ಏನೇ ಆದ್ರೂ ನನಗೆ ಮಗು ಬೇಕೇ ಬೇಕು. ಕಮಿಷನರ್​ಗೆ ದೂರು ನೀಡಲು ರೆಡಿಯಾಗಿದ್ದೇನೆ’ ಎಂದು ಅಮ್ಜದ್​ ಖಾನ್ ಹೇಳಿದ್ದಾರೆ.

ದಿವ್ಯಾ ಶ್ರೀಧರ್ ಅವರು ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಕಾಶ ದೀಪ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. 2015ರಲ್ಲಿ ಪ್ರಸಾರ ಕಂಡ ತಮಿಳಿನ ‘ಕೆಳದಿ ಕಣ್ಮಣಿ’ ಧಾರಾವಾಹಿಯ ಸಹ ನಟ ಅಮ್ಜದ್ ಖಾನ್​ ಅವರನ್ನು ದಿವ್ಯಾ ಮದುವೆ ಆಗಿದ್ದರು. ಆದರೆ ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ವಿರುದ್ಧ ಹಲ್ಲೆ, ಕಿರುಕುಳ ಆರೋಪವನ್ನು ದಿವ್ಯಾ ಹೊರಿಸಿದ್ದಾರೆ.

ಏನಿದು ಕಿರಿಕ್​?

ಇದನ್ನೂ ಓದಿ
Image
‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್​; ಈ ಬಾರಿ ಟಿ.ಎನ್​. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?
Image
‘ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ…’: ಅನೂಪ್ ಭಂಡಾರಿ ಸ್ಪಷ್ಟನೆ
Image
Anirudh Jatkar: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​
Image
‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್

ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಅವರು 2017ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಲಾಕ್​ಡೌನ್​ ಸಮಯದಲ್ಲಿ ಅಮ್ಜದ್ ಸಂಕಷ್ಟದಲ್ಲಿದ್ದರು. ಈ ವೇಳೆ ದಿವ್ಯಾ ಸಹಾಯ ಮಾಡಿದ್ದರು ಎನ್ನಲಾಗಿದೆ. ಲಾಕ್​ಡೌನ್​ ನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ನಂತರ ಇಬ್ಬರೂ ಚೆನ್ನೈನಲ್ಲಿ ನೆಲೆಸಿದ್ದರು. ಈಗ ಇವರ ಸಂಸಾರದ ಜಗಳ ಬೀದಿಗೆ ಬಂದಿದೆ.

‘ದಿವ್ಯಾ 3 ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಿದ್ದರೂ ಕೂಡ ಅಮ್ಜದ್ ಖಾನ್​ ಅವರು ಹೊಟ್ಟೆಗೆ ಒದ್ದಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ಸದ್ಯ ದಿವ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ಅವರ ಹೇಳಿಕೆ ಪಡೆದಿದ್ದಾರೆ. ಅವರು ಆಸ್ಪತ್ರೆಯಿಂದ ಆಚೆಬಂದ ಮೇಲೆ ಪೊಲೀಸರಿಗೆ ದೂರು ಕೊಡುತ್ತೇವೆ’ ಎಂದು ದಿವ್ಯಾ ಪರ ವಕೀಲರು ಮಾಹಿತಿ ನೀಡಿದ್ದಾರೆ.

‘ನೀನು ಕನ್ನಡದ ನಟಿ. ನಮ್ಮ ರಾಜ್ಯಕ್ಕೆ ಬಂದು ಏನೂ ಮಾಡೋಕೆ ಆಗುವುದಿಲ್ಲ. ಇಲ್ಲಿ ನನ್ನ ಕಡೆಯವರು ತುಂಬಾ ಜನ ಇದ್ದಾರೆ’ ಎಂದು ಅಮ್ಜದ್ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ದಿವ್ಯಾ ಪರ ವಕೀಲರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಎಲ್ಲ ಆರೋಪಗಳನ್ನು ಅಮ್ಜದ್​ ಖಾನ್​ ತಳ್ಳಿ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್