‘ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ…’: ಅನೂಪ್ ಭಂಡಾರಿ ಸ್ಪಷ್ಟನೆ

TV9kannada Web Team

TV9kannada Web Team | Edited By: Rajesh Duggumane

Updated on: Aug 22, 2022 | 8:44 PM

ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಹೊರಗೆ ಇಡುವ ನಿರ್ಧಾರಕ್ಕೆ ಬರಲಾಗಿದೆ. ಈ ಕಾರಣದಿಂದ ಆರ್ಯವರ್ಧನ್​ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆ ನಡೆಯತ್ತಿದೆ

‘ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ...’: ಅನೂಪ್ ಭಂಡಾರಿ ಸ್ಪಷ್ಟನೆ
ಅನಿರುದ್ಧ್​-ಅನೂಪ್

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಅನಿರುದ್ಧ್​ ಅವರು ಆರ್ಯವರ್ಧನ್​ ಪಾತ್ರ ನಿರ್ವಹಿಸುತ್ತಿದ್ದರು. ಆದರೆ, ಧಾರಾವಾಹಿ ತಂಡ ಹಾಗೂ ಅನಿರುದ್ಧ್ ನಡುವೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ. ಈ ಮಧ್ಯೆ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ನಿರ್ದೇಶಕ ಅನೂಪ್ ಭಂಡಾರಿ ಅವರಿಗೂ ಆಫರ್ ಹೋಗಿತ್ತು ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಅನೂಪ್​ ಭಂಡಾರಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಾಯಕನ ಪಾತ್ರ ಮಾಡುತ್ತಿದ್ದ ಅನಿರುದ್ಧ್​ ಹಾಗೂ ನಿರ್ಮಾಪಕ ಆರೂರು ಜಗದೀಶ್ ಮಧ್ಯೆ ವೈಮನಸ್ಸು ಮೂಡಿತ್ತು. ‘ಟಿಆರ್​ಪಿ ಕುಸಿಯಲು ಅನಿರುದ್ಧ್ ಕಾರಣ’ ಎಂದು ಜಗದೀಶ್ ಆರೋಪಿಸಿದ್ದರು. ಇದೇ ರೀತಿಯ ಹಲವು ವಿಚಾರ ಇಟ್ಟುಕೊಂಡು ಅನಿರುದ್ಧ್​ ವಿರುದ್ಧ ನಿರ್ಮಾಪಕರ ಸಂಘಕ್ಕೆ ಜಗದೀಶ್ ದೂರು ನೀಡಿದ್ದರು. ದೂರು ಆಧರಿಸಿ ಅನಿರುದ್ಧ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎರಡು ವರ್ಷಗಳ ಕಾಲ ಅವರನ್ನು ಕಿರುತೆರೆಯಿಂದ ಹೊರಗೆ ಇಡುವ ನಿರ್ಧಾರಕ್ಕೆ ಬರಲಾಗಿದೆ. ಈ ಕಾರಣದಿಂದ ಆರ್ಯವರ್ಧನ್​ ಪಾತ್ರಕ್ಕೆ ಹೊಸ ಕಲಾವಿದರ ಆಯ್ಕೆ ನಡೆಯತ್ತಿದೆ.

ತಾಜಾ ಸುದ್ದಿ

ಸೀರಿಯಲ್​ ಟೀಂನಿಂದ ಅನೂಪ್ ಭಂಡಾರಿ ಅವರಿಗೆ ಆಫರ್ ಹೋಗಿತ್ತು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ಅನೂಪ್ ಭಂಡಾರಿ ಅವರು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ‘ಧಾರಾವಾಹಿ ತಂಡದವರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆಫರ್ ತಿರಸ್ಕರಿಸಿದ್ದೇನೆ. ಸದ್ಯ ಮುಂದಿನ ಸಿನಿಮಾ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಸದ್ಯದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ’ ಎಂದು ಅನೂಪ್ ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.

ಆರ್ಯವರ್ಧನ್ ಪಾತ್ರಕ್ಕೂ ಅನೂಪ್ ಭಂಡಾರಿಗೂ ಹೋಲಿಕೆ ಇದೆ. ಇಬ್ಬರ ನಡುವೆ ಸಾಮ್ಯತೆ ಇರುವ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆಗಿತ್ತು. ಈ ಕಾರಣಕ್ಕೆ ಅನೂಪ್​ಗೆ ಆಫರ್ ಹೋಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಸಿಕ್ಕ ಸಂಬಳದ ಬಗ್ಗೆ ನೇರವಾಗಿ ಮಾತನಾಡಿದ ಅನಿರುದ್ಧ್​

ಇದನ್ನೂ ಓದಿ

ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಯಶಸ್ಸು ಕಂಡಿತು. ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಅವರು ಮತ್ತೊಂದು ಸಿನಿಮಾ ಘೋಷಿಸಲು ರೆಡಿ ಆಗಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada