AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್​; ಈ ಬಾರಿ ಟಿ.ಎನ್​. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?

ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಬರೋದು ಸರ್ವೇ ಸಾಮಾನ್ಯ. ದೊಡ್ಡ ಪರದೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್​ಗಳು ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ.

‘ಮಾಯಾಮೃಗ’ ಧಾರಾವಾಹಿಗೆ ಸೀಕ್ವೆಲ್​; ಈ ಬಾರಿ ಟಿ.ಎನ್​. ಸೀತಾರಾಮ್ ಹೇಳ ಹೊರಟಿರುವ ವಿಚಾರಗಳೇನು?
ಮತ್ತೆ ಮಾಯಾಮೃಗ
TV9 Web
| Edited By: |

Updated on: Sep 09, 2022 | 10:28 PM

Share

ಕೆಲ ದಶಕಗಳ ಹಿಂದೆ ಪ್ರಸಾರ ಕಂಡಿದ್ದ ‘ಮಾಯಾಮೃಗ’ ಧಾರಾವಾಹಿ (Mayamruga Serial) ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಟಿ.ಎನ್​. ಸೀತಾರಾಮ್ ಅವರ ನೇತೃತ್ವದಲ್ಲಿ ಮೂಡಿ ಬಂದ ಈ ಧಾರಾವಾಹಿ ವೀಕ್ಷಕರ ಮನಗೆದ್ದಿತ್ತು. ‘ಮಾಯಾಮೃಗ’ದ ಪಾತ್ರಗಳು, ಟೈಟಲ್ ಸಾಂಗ್ ಸೇರಿ ಎಲ್ಲ ವಿಚಾರಗಳು ವೀಕ್ಷಕರಿಗೆ ಹತ್ತಿರ ಆಗಿದ್ದವು. ಈಗ ಈ ಧಾರಾವಾಹಿಗೆ ಸೀಕ್ವೆಲ್ ಬರುತ್ತಿದೆ. ಆ ಬಗ್ಗೆ ಮಾಹಿತಿ ನೀಡೋಕೆ ಟಿ.ಎನ್​. ಸೀತಾರಾಮ್ (TN Seetharam) ಅವರು ಇಂದು (ಸೆಪ್ಟೆಂಬರ್ 9) ಸುದ್ದಿಗೋಷ್ಠಿ ಕರೆದಿದ್ದರು. ಸೀಕ್ವೆಲ್​ನಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಹಿಟ್ ಸಿನಿಮಾಗಳಿಗೆ ಸೀಕ್ವೆಲ್ ಬರೋದು ಸರ್ವೇ ಸಾಮಾನ್ಯ. ದೊಡ್ಡ ಪರದೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್​ಗಳು ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 24 ವರ್ಷಗಳ ಬಳಿಕ ‘ಮಾಯಮೃಗ’ ದಾರಾವಾಹಿಗೆ ಅವರು ಸೀಕ್ವೆಲ್ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇಷ್ಟೊಂದು ದೊಡ್ಡ ಗ್ಯಾಪ್​ ಬಳಿಕ ಬರುತ್ತಿರುವುದಕ್ಕೆ ಚಾಲೆಂಜ್​ಗಳು ಹೆಚ್ಚಿವೆ ಅನ್ನೋದು ಅವರ ಅಭಿಪ್ರಾಯ.

‘ಧಾರಾವಾಹಿಗಳಲ್ಲಿ ಸೀಕ್ವೆಲ್ ಅಪರೂಪ ಮತ್ತು ಕಷ್ಟ. ಸೀಕ್ವೆಲ್ ಮಾಡಿದಾಗ ಸಾಕಷ್ಟು ಚಾಲೆಂಜ್​ಗಳು ಇರುತ್ತವೆ. ಮಾಯಮೃಗಕ್ಕೆ 24 ವರ್ಷ ಆದಮೇಲೆ ಸೀಕ್ವೆಲ್ ಬರುತ್ತಿದೆ. ಇದು ಮನುಷ್ಯನ ವಿಚಾರದಲ್ಲಿ ಎರಡು ತಲೆಮಾರು. 8 ವರ್ಷಕ್ಕೆ ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗುತ್ತದೆ. ಹೀಗಾಗಿ, ವೀಕ್ಷಕರ ವಿಚಾರದಲ್ಲಿ ಮೂರು ತಲೆಮಾರು. ಸಂದೇಶ್​ ಅವರು ಈ ಪ್ರಪೋಸಲ್​ ತಂದಾಗ ನನಗೆ ಭಯ ಆಯ್ತು. ‘ಮಾಯಾಮೃಗ’ಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ ಅನೇಕರು ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲಿ ಇಲ್ಲ’ ಎಂದು ‘ಮಾಯಮೃಗ’ದ ಸೀಕ್ವೆಲ್​ಗೆ ಇರುವ ಚಾಲೆಂಜ್​ಗಳ ಬಗ್ಗೆ ಹೇಳಿದರು ಸೀತಾರಾಮ್.

ಇದನ್ನೂ ಓದಿ
Image
ಆತ್ಮೀಯ ಗೆಳೆಯನ ಕಳೆದುಕೊಂಡ ಟಿ.ಎನ್. ಸೀತಾರಾಮ್​; ಭಾವುಕ ಪೋಸ್ಟ್ ವೈರಲ್
Image
ಸೀರಿಯಲ್​ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು
Image
ಮತ್ತೆ ಕೋರ್ಟ್​ ಕಥೆ ಹಿಡಿದು ಬಂದ ಟಿಎನ್​ ಸೀತಾರಾಮ್​; ಈ ಬಾರಿ ಸೀರಿಯಲ್​ ಅಲ್ಲ, ವೆಬ್​ ಸಿರೀಸ್​
Image
23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

‘ಅವತ್ತಿನ ಕಾಲದಲ್ಲಿ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಅಂದು ಇದ್ದ ಕಾಲದ ಮೂರರಷ್ಟು ವೇಗದಲ್ಲಿ ಈಗ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್​ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್​ನಲ್ಲೇ ದುಡ್ಡು ಕಳಿಸಬಹುದು’ ಎಂದು ಸೀತಾರಾಮ್ ಹೇಳಿದರು. ಈ ಮೂಲಕ ಕಥೆಯಲ್ಲಿ ಹೊಸ ಜಗತ್ತಿನ ಲಿಂಕ್ ಇರುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

‘ಇಂದಿನ ಜಗತ್ತಲ್ಲಿ ನಾವು ಏಕಾಂಗಿ ಆಗುತ್ತಿದ್ದೇವೆ. ಎಲ್ಲರೂ ಮೊಬೈಲ್​ ಇಟ್ಟುಕೊಂಡು ಅವರದ್ದೇ ಜಗತ್ತು ಸೃಷ್ಟಿಸಿಕೊಂಡಿದ್ದಾರೆ. ಮಾತು ಕಡಿಮೆ ಆಗಿದೆ. ಇಂತಹ ಹಲವು ವಿಚಾರಗಳನ್ನು ಇಟ್ಟುಕೊಂಡು ಧಾರಾವಾಹಿ ಮಾಡುತ್ತಿದ್ದೇವೆ. ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ’ ಎಂದಿದ್ದಾರೆ ಸೀತಾರಾಮ್.

ಇದನ್ನೂ ಓದಿ: 23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

‘ಮಾಯಾಮೃಗ’ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ನಟಿಸಲಿದ್ದಾರೆ. ಇದರ ಜತೆಗೆ ಹೊಸ ಜನರೇಷನ್ ಕಥೆ ಹೇಳಲು ಹೊಸ ಪಾತ್ರಗಳು ಸೇರ್ಪಡೆ ಆಗಲಿವೆ. ‘ಮತ್ತೆ ಮಾಯಾಮೃಗ’ ಧಾರಾವಾಹಿಗೆ ಶೂಟಿಂಗ್ ಆರಂಭ ಆಗಿದೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಅಕ್ಟೋಬರ್ 19ರಂದು ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರ ಆರಂಭಿಸಲಿದೆ.