AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘8 ವರ್ಷದವನಿದ್ದಾಗ ನನ್ನ ಅಂಕಲ್ ಹಲವು ಬಾರಿ ರೇಪ್ ಮಾಡಿದ್ದರು’; ‘ಬಿಗ್ ಬಾಸ್​’ ಪುರುಷ ಸ್ಪರ್ಧಿಯ ಕಣ್ಣೀರ ಕಥೆ

ಬಿಗ್ ಬಾಸ್​ಗೆ ಕಾಲಿಟ್ಟ ಸಂದರ್ಭದಲ್ಲೂ ರೋಹಿತ್ ಅವರು ಈ ರೀತಿಯ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದರು.  

‘8 ವರ್ಷದವನಿದ್ದಾಗ ನನ್ನ ಅಂಕಲ್ ಹಲವು ಬಾರಿ ರೇಪ್ ಮಾಡಿದ್ದರು’; ‘ಬಿಗ್ ಬಾಸ್​’ ಪುರುಷ ಸ್ಪರ್ಧಿಯ ಕಣ್ಣೀರ ಕಥೆ
ರೋಹಿತ್ ವರ್ಮಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 09, 2022 | 4:27 PM

Share

ಕೆಲವರು ಸೆಲೆಬ್ರಿಟಿಗಳು ಆಗುವುದಕ್ಕೂ ಮೊದಲು ಹಲವು ಕಷ್ಟಗಳನ್ನು ಎದುರಿಸಿರುತ್ತಾರೆ. ಕೆಲವರು ದೌರ್ಜನ್ಯಕ್ಕೆ ಒಳಗಾದ ಉದಾಹರಣೆಯೂ ಇದೆ. ಬಿಗ್ ಬಾಸ್​ನ (Bigg Boss) ಮಾಜಿ ಸ್ಪರ್ಧಿ ಹಾಗೂ ಸೆಲೆಬ್ರಿಟಿ ಡಿಸೈನರ್ ರೋಹಿತ್ ವರ್ಮಾ (Rohit Verma) ಅವರು ತಮ್ಮ ಬಾಳಲ್ಲಿ ನಡೆದ ಕಹಿ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಆರ್​ಜೆ ಸಿದ್ದಾರ್ಥ್ ಕಣನ್ ಅವರ ಚ್ಯಾಟ್ ಶೋನಲ್ಲಿ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ ರೋಹಿತ್. 8 ವರ್ಷದವನಿದ್ದಾಗ ಅಂಕಲ್​ನಿಂದಲೇ ರೇಪ್ ಆಗಿತ್ತು ಎಂಬ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

‘ನಾನು ಒಳ್ಳೆಯ ಕುಟುಂಬದಿಂದ ಬಂದವನು. ಆದರೆ, ನನ್ನ ಕುಟುಂಬ ಸದಸ್ಯರು ಹಳೆಯ ಆಲೋಚನೆಗಳನ್ನು ಹೊಂದಿದ್ದರು. ನಾನು ಚಿಕ್ಕವನಿದ್ದಾಗ ನನ್ನ ಅಂಕಲ್​​ನಿಂದಲೇ ಲೈಂಗಿಕವಾಗಿ ಕಿರುಕುಳ ಅನುಭವಿಸಿದ್ದೆ. ನಾನು ಹಲವು ಬಾರಿ ರೇಪ್​ಗೆ ಒಳಗಾಗಿದ್ದೆ. ಆಗ ನನಗೆ ಕೇವಲ 8 ವರ್ಷ ವಯಸ್ಸು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

‘ಬಿಸಿಯಾದ ವ್ಯಾಕ್ಸ್​​ ಅನ್ನು ನನ್ನ ದೇಹದಮೇಲೆ ಹಾಕಲಾಗುತ್ತಿತ್ತು. ನಾನಾ ರೀತಿಯಲ್ಲಿ ಹಿಂಸೆ ನೀಡಲಾಗುತ್ತಿತ್ತು. ನಾಲ್ಕು ವರ್ಷಗಳ ಕಾಲ ಇದು ನಡೆದೇ ಇತ್ತು. ಈ ಬಗ್ಗೆ ನನ್ನ ಕುಟುಂಬದವರಿಗೇ ಹೇಳಲೇ ಇಲ್ಲ’ ಎಂದಿದ್ದಾರೆ ಅವರು. ಬಿಗ್ ಬಾಸ್​ಗೆ ಕಾಲಿಟ್ಟ ಸಂದರ್ಭದಲ್ಲೂ ರೋಹಿತ್ ಅವರು ಈ ರೀತಿಯ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದರು.

‘ನಾನು ಮುಂಬೈನಲ್ಲಿ ಹುಡುಗಿ ಡ್ರೆಸ್ ಹಾಕಿಕೊಂಡು ಸುತ್ತಾಡಿದ್ದೇನೆ. ವೇಶ್ಯೆ ಆಗಿ ನಾನು ಕೆಲಸ ಮಾಡಿದ್ದೆ. ಜನರು ಕರೆದುಕೊಂಡು ಹೋಗುತ್ತಿದ್ದರು. ಆಗ ನಾನು ಕೆಲವು ಬ್ಯಾಗ್‌ಗಳನ್ನು ಖರೀದಿಸಿದ್ದೆ. ಹಣದ ಅಗತ್ಯವಿದ್ದುದರಿಂದ ನಾನು ಆ ರೀತಿ ಮಾಡಿದೆ. ಆ ಬಗ್ಗೆ ವಿಷಾದಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್​ 9’ರ ಪ್ರೋಮೋ ರಿಲೀಸ್; ಅಲ್ಲಿಯೂ ಕಾಫಿ ನಾಡು ಚಂದು ಫ್ಯಾನ್ಸ್ ಹಾವಳಿ 

ರೋಹಿತ್ ಅವರು ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಹೀರೋ, ಹೀರೋಯಿನ್​ಗೆ ಉಡುಗೆಯನ್ನು ಡಿಸೈನ್ ಮಾಡಿದ್ದಾರೆ. ‘ಹಿಂದಿ ಬಿಗ್ ಬಾಸ್​ 3’ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ‘ಫ್ಯಾಷನ್​’ (2008), ‘ಸ್ಟೈಲ್ ಸ್ಟ್ರಿಪ್’ (2010​) ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾಗಳಿಗೆ ಅವರು ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.