‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಪ್ರೋಮೋ ರಿಲೀಸ್; ಅಲ್ಲಿಯೂ ಕಾಫಿ ನಾಡು ಚಂದು ಫ್ಯಾನ್ಸ್ ಹಾವಳಿ
‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿ ಸೀಸನ್ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಒಟಿಟಿ ಸೀಸನ್ ಶೀಘ್ರವೇ ಪೂರ್ಣಗೊಳ್ಳುತ್ತಿದೆ. ಅದಾದ ಬಳಿಕ ಟಿವಿ ಸೀಸನ್ ಶುರು ಆಗಲಿದೆ. ಒಟಿಟಿಯ ಕೆಲ ಸ್ಪರ್ಧಿಗಳು ದೊಡ್ಮನೆಗೆ ಕಾಲಿಡಲಿದ್ದಾರೆ. ಆ ಬಗ್ಗೆ ಈ ಮೊದಲೇ ಘೋಷಣೆ ಆಗಿದೆ. ಯಾರ್ಯಾರು ಒಟಿಟಿಯಿಂದ ಟಿವಿ ಸೀಸನ್ಗೆ ಹೋಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕೂ ಮೊದಲು ‘ಬಿಗ್ ಬಾಸ್’ (Bigg Boss) ಟಿವಿ ಸೀಸನ್ನ ಪ್ರೋಮೋ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಲ್ಲದೆ ಕಲರ್ಸ್ ಕನ್ನಡದ ಎದುರು ಹೊಸ ಬೇಡಿಕೆ ಒಂದನ್ನು ಇಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್ನಲ್ಲಿ ಸದ್ಯ 9 ಸ್ಪರ್ಧಿಗಳು ಇದ್ದಾರೆ. ಇವರ ಪೈಕಿ ಮೂವರು ಟಿವಿ ಸೀಸನ್ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ. ಅವರು ಯಾರು ಎಂಬುದು ಸದ್ಯದ ಕುತೂಹಲ. ಈಗ ಎಲ್ಲರೂ ಕಾಫಿ ನಾಡು ಚಂದುಗೆ ಅವಕಾಶ ನೀಡಿ ಎಂಬ ಕೋರಿಕೆ ಇಟ್ಟಿದ್ದಾರೆ.
‘ಬಿಗ್ ಬಾಸ್’ಗೆ ಚಂದು ಕಾಲಿಡಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಈಡೇರಿಲ್ಲ. ಚಂದು ಒಟಿಟಿ ಸೀಸನ್ಗೆ ಬಂದಿಲ್ಲ. ಈ ಕಾರಣಕ್ಕೆ ಅವರು ಸೀಸನ್ 9ರಲ್ಲಿ ಕಾಣಿಸಿಕೊಳ್ಳಲಿ ಎಂಬುದು ಅನೇಕರ ಕೋರಿಕೆ. ರಿಲೀಸ್ ಆದ ಹೊಸ ಪ್ರೋಮೋಗೆ ಅನೇಕರು ಈ ಬಗ್ಗೆ ಕಮೆಂಟ್ ಹಾಕಿದ್ದಾರೆ. ಈ ಮೂಲಕ ವೈರಲ್ ಯುವಕನ ಪರವಾಗಿ ನಿಂತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಇರೋದು 9 ಜನ, ಆಗಿದೆ ಎರಡು ಗುಂಪು, ಭುಗಿಲೆದ್ದ ಅಸಮಾಧಾನ
‘ಎಲ್ಲಾ ರಿಯಾಲಿಟಿ ಶೋಗಳ ಬಿಗ್‍ಬಾಸ್. ಬರ್ತಿದೆ ಸೀಸನ್ ಒಂಭತ್ತು’ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಬಾರಿ ಬಿಗ್ ಬಾಸ್ನ ಕಣ್ಣಿನ ಬಣ್ಣ ಹೊಸ ರೀತಿಯಲ್ಲಿ ಮೂಡಿ ಬಂದಿದೆ. ಹಳೆ ಸೀಸನ್ಗಳ ಲೋಗೋಗಿಂತ ಈ ಲೋಗೋ ಭಿನ್ನವಾಗಿದೆ.
View this post on Instagram
ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಕಾರಣಕ್ಕೆ ಅವರು ಟಿವಿ ಸೀಸನ್ಗೆ ಬರಲಿ ಎಂದು ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ. ಅವರು ಹೆಚ್ಚು ವೋಟ್ ಪಡೆದು ಬಿಗ್ ಬಾಸ್ ಟಿವಿ ಸೀಸನ್ಗೆ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.
Published On - 6:30 am, Thu, 8 September 22