ಒಟಿಟಿ ರಿಲೀಸ್ಗೆ ರೆಡಿ ಆಯ್ತು ರಶ್ಮಿಕಾ ನಟನೆಯ ಸೂಪರ್ ಹಿಟ್ ಸಿನಿಮಾ; ಆದರೂ ಫ್ಯಾನ್ಸ್ಗೆ ಬೇಸರ
ರಶ್ಮಿಕಾ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ‘ಸೀತಾ ರಾಮಂ’ ಸಿನಿಮಾ ಆಗಸ್ಟ್ 5ರಂದು ತೆರೆಗೆ ಬಂತು. ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಭಾರತದ ಖ್ಯಾತ ಹೀರೋಯಿನ್ಗಳ ಪೈಕಿ ರಶ್ಮಿಕಾ ಹೆಸರು ಮುಂಚೂಣಿಯಲ್ಲಿ ಇದೆ. ಬಾಲಿವುಡ್ (Bollywood), ಕಾಲಿವುಡ್, ಟಾಲಿವುಡ್ನಲ್ಲಿ ಅವರು ಬ್ಯುಸಿ ಇದ್ದಾರೆ. ಹಲವು ಸ್ಟಾರ್ಗಳ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರ ಸೂಪರ್ ಹಿಟ್ ಸಿನಿಮಾ ಒಟಿಟಿಗೆ ಲಗ್ಗೆ ಇಡೋಕೆ ಸಜ್ಜಾಗಿದೆ. ಈ ವಿಚಾರ ಫ್ಯಾನ್ಸ್ಗೆ ಕೊಂಚ ಬೇಸರ ಉಂಟು ಮಾಡಿದೆ. ಅದಕ್ಕೆ ಅವರ ಅಭಿಮಾನಿಗಳು ಕಾರಣವನ್ನೂ ನೀಡಿದ್ದಾರೆ.
ರಶ್ಮಿಕಾ, ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ‘ಸೀತಾ ರಾಮಂ’ ಸಿನಿಮಾ ಆಗಸ್ಟ್ 5ರಂದು ತೆರೆಗೆ ಬಂತು. ಹನು ರಾಘವಪುಡಿ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. 30 ಕೋಟಿ ರೂಪಾಯಿ ಬಜೆಟ್ನಲ್ಲಿ ರೆಡಿ ಆದ ಈ ಚಿತ್ರ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವುದು ಸಿನಿಮಾದ ಹೆಚ್ಚುಗಾರಿಕೆ. ಈ ಚಿತ್ರದಿಂದ ರಶ್ಮಿಕಾ ಫ್ಯಾನ್ಸ್ ಖುಷಿಯಾಗಿದ್ದಾರೆ. ಥಿಯೇಟರ್ನಲ್ಲಿ ಸಿನಿಮಾ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ಮಾಡುತ್ತಿರುವಾಗಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಸೆಪ್ಟೆಂಬರ್ 9ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ‘ಸೀತಾ ರಾಮಂ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದ ನಂತರ ಒಟಿಟಿಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.
‘ಸೀತಾ ರಾಮಂ’ ಸಿನಿಮಾದ ಕಥೆ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ರಶ್ಮಿಕಾ ಮಂದಣ್ಣ ಅವರು ಒಂದು ಕಾಲಘಟ್ಟದಲ್ಲಿದ್ದರೆ, ದುಲ್ಕರ್ ಹಾಗೂ ಮೃಣಾಲ್ ಪಾತ್ರಗಳ ಕಥೆ ರೆಟ್ರೋ ಶೈಲಿಯ ಕಥೆಯಲ್ಲಿ ಸಾಗುತ್ತದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ಒಂದು ವರ್ಗದವರಿಗೆ ಖುಷಿ ನೀಡಿದೆ.
ಇದನ್ನೂ ಓದಿ: 50 ಕೋಟಿ ರೂಪಾಯಿ ಗಳಿಸಿದ ರಶ್ಮಿಕಾ ಮಂದಣ್ಣ ಸಿನಿಮಾ; ‘ಸೀತಾ ರಾಮಂ’ ಸೂಪರ್ ಹಿಟ್
ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಗುಡ್ಬೈ’ ಚಿತ್ರ ರಿಲೀಸ್ಗೆ ರೆಡಿ ಇದೆ. ಇದಲ್ಲದೆ, ಇನ್ನೂ ಹಲವು ಬಾಲಿವುಡ್ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:36 pm, Tue, 6 September 22