BBK: ‘ಬಿಗ್ ಬಾಸ್​ನಲ್ಲಿ ರೂಪೇಶ್​, ಸೋಮಣ್ಣ, ರಾಕೇಶ್​ ಟಾಪ್​ 3 ಆಗ್ತಾರೆ’: ಭವಿಷ್ಯ ನುಡಿದ ಅಕ್ಷತಾ ಕುಕ್ಕಿ

Bigg Boss Kannada OTT: ‘ಬಿಗ್​ ಬಾಸ್ ಕನ್ನಡ ಒಟಿಟಿ’​ ಪಯಣದ ಅನುಭವವನ್ನು ಅಕ್ಷತಾ ಕುಕ್ಕಿ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾ ಪ್ರಾಜೆಕ್ಟ್​ಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: Madan Kumar

Sep 05, 2022 | 10:53 PM

ನಾಲ್ಕನೇ ವಾರದಲ್ಲಿ ನಟಿ ಅಕ್ಷತಾ ಕುಕ್ಕಿ (Akshata Kuki) ಅವರು ಎಲಿಮಿನೇಟ್​ ಆಗಿದ್ದಾರೆ. ‘ಬಿಗ್​ ಬಾಸ್ ಕನ್ನಡ​ ಒಟಿಟಿ’ (Bigg Boss Kannada OTT) ಶೋನಲ್ಲಿ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡರು. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಸದ್ಯ 9 ಜನರ ನಡುವೆ ಬಿಗ್​ ಬಾಸ್​ ಆಟ ಮುಂದುವರಿದಿದೆ. ಅವರ ಪೈಕಿ ರಾಕೇಶ್​ ಅಡಿಗ, ಸೋಮಣ್ಣ ಮಾಚಿಮಾಡ, ರೂಪೇಶ್​ ಶೆಟ್ಟಿ (Roopesh Shetty) ಅವರು ಟಾಪ್​ 3 ಸ್ಥಾನಕ್ಕೆ ಹೋಗುತ್ತಾರೆ ಎಂದು ಅಕ್ಷತಾ ಕುಕ್ಕಿ ಭವಿಷ್ಯ ನುಡಿದಿದ್ದಾರೆ. ನಾಲ್ಕು ವಾರಗಳ ಬಿಗ್​ ಬಾಸ್​ ಪಯಣದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಮುಂಬರುವ ಸಿನಿಮಾ ಪ್ರಾಜೆಕ್ಟ್​ಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Follow us on

Click on your DTH Provider to Add TV9 Kannada