ಸೋನು ಶ್ರೀನಿವಾಸ್​ ಗೌಡ, ಜಯಶ್ರೀಗೆ ಒಟ್ಟೊಟ್ಟಿಗೆ ಕಿಸ್ ಮಾಡಿದ ರಾಕೇಶ್ ಅಡಿಗ

ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ್ ಗೌಡ ಬೆಡ್​ಮೇಲೆ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಸೋನು ಕಿಸ್ ಮಾಡುವಂತೆ ರಾಕೇಶ್ ಬಳಿ ಕೇಳಿಕೊಂಡರು. ಅವರು ಒಂದೇ ಒಂದು ಕ್ಷಣವೂ ಯೋಚಿಸದೇ ಸೋನು ಕೆನ್ನೆಗೆ ಮುತ್ತಿಟ್ಟರು.

ಸೋನು ಶ್ರೀನಿವಾಸ್​ ಗೌಡ, ಜಯಶ್ರೀಗೆ ಒಟ್ಟೊಟ್ಟಿಗೆ ಕಿಸ್ ಮಾಡಿದ ರಾಕೇಶ್ ಅಡಿಗ
ಜಯಶ್ರೀ-ರಾಕೇಶ್-ಸೋನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 07, 2022 | 5:16 PM

ರಾಕೇಶ್ ಅಡಿಗ (Rakesh Adiga)  ಅವರು ಬಿಗ್ ಬಾಸ್ ಮನೆಯಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ವಿವಾದ ಹಾಗೂ ಜಗಳಗಳಿಂದ ಆದಷ್ಟು ದೂರವೇ ಇರೋಕೆ ಪ್ರಯತ್ನಿಸುತ್ತಾರೆ. ಇದು ಮನೆಯವರ ಗಮನಕ್ಕೂ ಬಂದಿದೆ. ಅವರು ಯಾವಾಗಲೂ ಸಿಟ್ಟೇ ಮಾಡಿಕೊಂಡಿಲ್ಲ ಎಂಬ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂತು. ರಾಕೇಶ್ (Rakesh Adiga) ನಿತ್ಯ ಧ್ಯಾನ ಮಾಡುತ್ತಾರೆ. ಈ ಕಾರಣದಿಂದಲೂ ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆ ಅಚ್ಚರಿ ಮೂಡಿಸಿದೆ. ರಾಕೇಶ್ ಅಡಿಗ ಒಟ್ಟೊಟ್ಟಿಗೆ ಇಬ್ಬರಿಗೆ ಕಿಸ್ ಮಾಡಿದ್ದಾರೆ.

ರಾಕೇಶ್ ಅಡಿಗ ಅವರು ಕೆಲವೊಮ್ಮೆ ಫ್ಲರ್ಟ್ ಮಾಡುತ್ತಾ ಸಮಯ ಕಳೆಯುತ್ತಾರೆ. ಆದರೆ, ಗಂಭೀರ ವಿಚಾರ ಬಂದಾಗ ಅವರು ತುಂಬಾನೇ ಸೀರಿಯಸ್ ಸ್ವರೂಪ ಪಡೆದುಕೊಳ್ಳುತ್ತಾರೆ. ಸೋನು ಶ್ರೀನಿವಾಸ್ ಗೌಡ ವಿಚಾರದಲ್ಲಿ ಅವರು ಇವೆರಡನ್ನೂ ಮಾಡುತ್ತಾರೆ. ಸೋನು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್ ಇದೆ. ಸೋನು ಕೂಡ ರಾಕೇಶ್ ಜತೆ ಹೆಚ್ಚು ಕ್ಲೋಸ್ ಆಗಿರಲು ಪ್ರಯತ್ನಿಸುತ್ತಾರೆ. ಸೆಪ್ಟೆಂಬರ್ 9ರ ಎಪಿಸೋಡ್​ನಲ್ಲೂ ಇದೇ ಆಗಿದೆ.

ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ್ ಗೌಡ ಬೆಡ್​ಮೇಲೆ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಸೋನು ಕಿಸ್ ಮಾಡುವಂತೆ ರಾಕೇಶ್ ಬಳಿ ಕೇಳಿಕೊಂಡರು. ಅವರು ಒಂದೇ ಒಂದು ಕ್ಷಣವೂ ಯೋಚಿಸದೇ ಸೋನು ಕೆನ್ನೆಗೆ ಮುತ್ತಿಟ್ಟರು. ಅಲ್ಲಿಯೇ ಇದ್ದ ಜಯಶ್ರೀ ಆರಾಧ್ಯ ಇದನ್ನು ನೋಡಿ ನಕ್ಕರು. ಜತೆಗೆ ತಮಗೆ ಕಿಸ್ ಮಾಡುವಂತೆ ಕೋರಿದರು.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

‘ರಾಕೇಶ್ ನನಗೂ ಕಿಸ್ ಮಾಡು. ಅವಳ ರಿಯಾಕ್ಷನ್ ಹೇಗಿರುತ್ತದೆ ಅನ್ನೋದನ್ನು ನೋಡಬೇಕು’ ಎಂದರು ಜಯಶ್ರೀ. ಜಯಶ್ರೀ ಇದ್ದ ಜಾಗಕ್ಕೆ ತೆರಳಿದ ರಾಕೇಶ್ ಅವರು ಜಯಶ್ರೀಗೆ ಕಿಸ್ ಮಾಡಿಯೇ ಬಿಟ್ಟರು. ಇದನ್ನು ನೋಡಿ ಸೋನು ಕೊಂಚ ಹೊಟ್ಟೆ ಉರಿದುಕೊಂಡರು. ಇದನ್ನು ತೋರಿಸಿದರು ಕೂಡ. ಈ ವಿಚಾರ ನೋಡಿ ರಾಕೇಶ್ ಹಾಗೂ ಜಯಶ್ರೀ ನಕ್ಕರು. ಇಬ್ಬರಿಗೂ ಒಟ್ಟೊಟ್ಟಿಗೆ ಕಿಸ್ ಮಾಡಿದ್ದನ್ನು ನೋಡಿ ವೀಕ್ಷಕರು ಅಚ್ಚರಿ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಹೊಸ ಸೀಸನ್​ ನಡೆಸಿಕೊಡಲು ಕಮಲ್ ಹಾಸನ್ ರೆಡಿ; ಈ ಬಾರಿ ಹೇಗಿರಲಿದೆ ದೊಡ್ಮನೆ ಸೆಟ್​?

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಹೆಚ್ಚಿದೆ. 9 ಸ್ಪರ್ಧಿಗಳು ಉಳಿದುಕೊಂಡಿದ್ದು, ರೂಪೇಶ್, ಸಾನ್ಯಾ ಹಾಗೂ ರಾಕೇಶ್ ಫಿನಾಲೇ ವೀಕ್ ತಲುಪಿದ್ದಾರೆ. ಉಳಿದ ಆರು ಮಂದಿ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಈ ವಾರ ಕೆಲವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಪಕ್ಕಾ ಆಗಿದೆ.

Published On - 6:30 am, Wed, 7 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ