ಮತ್ತೆ ಕೋರ್ಟ್​ ಕಥೆ ಹಿಡಿದು ಬಂದ ಟಿಎನ್​ ಸೀತಾರಾಮ್​; ಈ ಬಾರಿ ಸೀರಿಯಲ್​ ಅಲ್ಲ, ವೆಬ್​ ಸಿರೀಸ್​

ಟಿ.ಎನ್​. ಸೀತಾರಾಮ್​ ಅವರು ಹೊಸ ವೆಬ್​ ಸರಣಿಯ ಬಗ್ಗೆ ಪ್ರಾಥಮಿಕ ಮಾಹಿತಿ​ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳಿಂದ ಪಾಸಿಟಿವ್​ ಕಮೆಂಟ್​ಗಳು ಬಂದಿವೆ. ಆದಷ್ಟು ಬೇಗ ಈ ವೆಬ್​ ಸಿರೀಸ್​ ಶುರುವಾಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಮತ್ತೆ ಕೋರ್ಟ್​ ಕಥೆ ಹಿಡಿದು ಬಂದ ಟಿಎನ್​ ಸೀತಾರಾಮ್​; ಈ ಬಾರಿ ಸೀರಿಯಲ್​ ಅಲ್ಲ, ವೆಬ್​ ಸಿರೀಸ್​
ಟಿಎನ್ ಸೀತಾರಾಮ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 26, 2021 | 8:14 AM

ನಟ, ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರು ಕಿರುತೆರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮಾಯಾಮೃಗ, ಮುಕ್ತ, ಮನ್ವಂತರ ಮುಂತಾದ ಧಾರಾವಾಹಿಗಳಿಂದ ಅವರು ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​​ ಮಾಡಲು ಮುಂದಾಗಿದ್ದಾರೆ. ಅದರ ಝಲಕ್​ ಹೇಗಿರಲಿದೆ ಎಂಬುದನ್ನು ಕೂಡ ಸೀತಾರಾಮ್​ ಬಹಿರಂಗಪಡಿಸಿದ್ದಾರೆ. ಭೂಮಿಕಾ ಟಾಕೀಸ್​ ಯೂಟ್ಯೂಬ್​ ಮೂಲಕ ಅವರ ಈ ಹೊಸ ವೆಬ್​ ಸರಣಿ ಪ್ರಸಾರ ಆಗಲಿದೆ.

ಸೀತಾರಾಮ್​ ನಿರ್ದೇಶನದ ಜನಪ್ರಿಯ ಧಾರಾವಾಹಿ ‘ಮಾಯಾಮೃಗ’ ಈಗಾಗಲೇ ‘ಭೂಮಿಕಾ ಟಾಕೀಸ್​’ ಯೂಟ್ಯೂಬ್ ಚಾನೆಲ್​ ಮೂಲಕ ಮರುಪ್ರಸಾರ ಆಗುತ್ತಿದೆ. ಅದೇ ಚಾನೆಲ್​ನಲ್ಲಿ ‘ಮಾಯಾ ಮರ್ಡರ್​ ಕೇಸ್​’ ಎಂಬ ಹೊಸ ವೆಬ್​ ಸರಣಿ ಪ್ರಸಾರ ಆಗಲಿದ್ದು, ಅದಕ್ಕೆ ಸೀತಾರಾಮ್​ ನಿರ್ದೇಶನ ಮಾಡಲಿದ್ದಾರೆ. ಅದರ ಟೀಸರ್​ ಬಿಡುಗಡೆ ಆಗಿದ್ದು, ಕಥೆಯ ಎಳೆ ಏನು ಎಂಬುದನ್ನು ಸೀತಾರಾಮ್​ ಬಿಟ್ಟುಕೊಟ್ಟಿದ್ದಾರೆ.

ಹೆಸರೇ ಸೂಚಿಸುವಂತೆ ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆ. ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ವೆಬ್​ ಸಿರೀಸ್​ ಸಾಗಲಿದೆ. ಇದು ಕುತೂಹಲಕಾರಿ ಕೋರ್ಟ್​ ರೂಮ್​ ಕಥೆ ಆಗಿರಲಿದೆ ಎಂದು ಟೀಸರ್​ನಲ್ಲಿ ತಿಳಿಸಲಾಗಿದೆ. ವಕೀಲನ ಪಾತ್ರದಲ್ಲಿ ಟಿಎನ್​ ಸೀತಾರಾಮ್​ ಕಾಣಿಸಿಕೊಳ್ಳಲಿದ್ದಾರೆ. ‘ಇದು ಗೆಲ್ಲಲು ಸಾಧ್ಯವಾಗದ ಕೇಸ್​’ ಎಂಬ ಕ್ಯಾಪ್ಷನ್​ ಕೂಡ ಈ ಟೀಸರ್​ನಲ್ಲಿ ಗಮನ ಸೆಳೆಯುತ್ತಿದೆ.

‘ಮಯಾ ಮರ್ಡರ್​ ಕೇಸ್​’ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಸೀತಾರಾಮ್​ ಅವರೇ ನಿಭಾಯಿಸುತ್ತಿದ್ದಾರೆ. ಹಾಗಾಗಿ ಈ ವೆಬ್​ ಸಿರೀಸ್​ ಮೇಲೆ ಕುತೂಹಲ ಮೂಡಿದೆ. ಯಾವಾಗ ಶೂಟಿಂಗ್​ ಶುರು ಆಗಲಿದೆ? ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ? ಯಾವಾಗ ಪ್ರಸಾರ ಆರಂಭ ಆಗಲಿದೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

ಸೀತಾರಾಮ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ಟೀಸರ್​ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳಿಂದ ಪಾಸಿಟಿವ್​ ಕಮೆಂಟ್​ಗಳು ಬಂದಿವೆ. ಆದಷ್ಟು ಬೇಗ ಈ ವೆಬ್​ ಸಿರೀಸ್​ ಶುರುವಾಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಭೂಮಿಕಾ ಟಾಕೀಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಸಾರ ಆಗುತ್ತಿರುವ ‘ಮಾಯಾಮೃಗ’ ಧಾರಾವಾಹಿ ಉತ್ತಮ ವೀವ್ಸ್​ ಪಡೆದುಕೊಳ್ಳುತ್ತಿದೆ. ಈಗಾಗಲೇ 150 ಎಪಿಸೋಡ್​ಗಳನ್ನು ಪೂರೈಸಿದೆ.

ಇದನ್ನೂ ಓದಿ:

23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Bajrang Dal: ‘ಆಶ್ರಮ್​’ ತಂಡದ ಮೇಲೆ ಭಜರಂಗ ದಳದ ದಾಳಿ; ಸಿಬ್ಬಂದಿಗೆ ಥಳಿತ, ಪ್ರಕಾಶ್​ ಝಾ ಮೇಲೆ ಹಲ್ಲೆ