AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bajrang Dal: ‘ಆಶ್ರಮ್​’ ತಂಡದ ಮೇಲೆ ಭಜರಂಗ ದಳದ ದಾಳಿ; ಸಿಬ್ಬಂದಿಗೆ ಥಳಿತ, ಪ್ರಕಾಶ್​ ಝಾ ಮೇಲೆ ಹಲ್ಲೆ

Ashram 3: ಭೊಪಾಲ್​ನಲ್ಲಿ ‘ಆಶ್ರಮ್​ 3’ ಶೂಟಿಂಗ್ ನಡೆಯುತ್ತಿತ್ತು. ಹಳೇ ಜೈಲಿನಲ್ಲಿ ಕೆಲವು ಸೆಟ್​ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಬಂದ ಭಜರಂಗ ದಳದ ಕಾರ್ಯಕರ್ತರು ವೆಬ್​ ಸಿರೀಸ್​ ತಂಡದವರನ್ನು ಮನಬಂದಂತೆ ಥಳಿಸಿದ್ದಾರೆ.

Bajrang Dal: ‘ಆಶ್ರಮ್​’ ತಂಡದ ಮೇಲೆ ಭಜರಂಗ ದಳದ ದಾಳಿ; ಸಿಬ್ಬಂದಿಗೆ ಥಳಿತ, ಪ್ರಕಾಶ್​ ಝಾ ಮೇಲೆ ಹಲ್ಲೆ
‘ಆಶ್ರಮ್’ ತಂಡದ ಮೇಲೆ ಭಜರಂಗ ದಳದ ದಾಳಿ
TV9 Web
| Edited By: |

Updated on: Oct 25, 2021 | 8:11 AM

Share

ಬಾಲಿವುಡ್​ ನಿರ್ದೇಶಕ ಪ್ರಕಾಶ್​ ಝಾ ಮಾಡುವ ಸಿನಿಮಾಗಳು ಒಂದಿಲ್ಲೊಂದು ರೀತಿಯಲ್ಲಿ ವಿವಾದ ಮಾಡಿಕೊಳ್ಳುತ್ತವೆ. ಈಗ ಅವರು ವೆಬ್​ ಸಿರೀಸ್​ ಲೋಕದಲ್ಲಿ ಸಕ್ರಿಯರಾಗಿದ್ದು, ಅಲ್ಲಿಯೂ ಕಿರಿಕ್​ ಆಗಿದೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಶ್ರಮ್​ 3’ ವೆಬ್​ ಸರಣಿಯ ಶೀರ್ಷಿಕೆ ಮತ್ತು ಕಥೆ ಬಗ್ಗೆ ಭಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶೂಟಿಂಗ್​ ಸ್ಥಳಕ್ಕೆ ನುಗ್ಗಿ ಹಲ್ಲೆ ಕೂಡ ಮಾಡಿದ್ದಾರೆ. ನಾಯಕ ಬಾಬಿ ಡಿಯೋಲ್​​ ಮೇಲೆ ಹಲ್ಲೆ ಮಾಡುವ ಉದ್ದೇಶದೊಂದಿಗೆ ಈ ದಾಳಿ ನಡೆದಿದೆ. ಆದರೆ ಅವರ ಕೈಗೆ ಬಾಬಿ ಡಿಯೋಲ್​ ಸಿಕ್ಕಿಲ್ಲ.

ಭೊಪಾಲ್​ನಲ್ಲಿ ‘ಆಶ್ರಮ್​ 3’ ಶೂಟಿಂಗ್ ನಡೆಯುತ್ತಿತ್ತು. ಹಳೇ ಜೈಲಿನಲ್ಲಿ ಕೆಲವು ಸೆಟ್​ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಬಂದ ಭಜರಂಗ ದಳದ ಕಾರ್ಯಕರ್ತರು ವೆಬ್​ ಸಿರೀಸ್​ ತಂಡದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ. ಶೂಟಿಂಗ್​ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿಯಲಾಗಿದೆ. ‘ಬಾಬಿ ಡಿಯೋಲ್​ ಎಲ್ಲಿ’ ಎಂದು ಅವರೆಲ್ಲ ಕೂಗುತ್ತಿದ್ದರು ಎಂದು ವರದಿ ಆಗಿದೆ.

‘ಈ ವೆಬ್​ ಸರಣಿಗೆ ಆಶ್ರಮ್​ ಎಂದು ಹೆಸರಿಟ್ಟು, ಆಶ್ರಮದ ಗುರುಗಳು ಮಹಿಳೆಯರನ್ನು ಶೋಷಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಚರ್ಚ್​ ಅಥವಾ ಮದರಾಸ ಬಗ್ಗೆ ಇದೇ ರೀತಿ ತೋರಿಸುವ ಧೈರ್ಯ ಇವರಲ್ಲಿ ಇದೆಯೇ? ‘ಆಶ್ರಮ್​ 1’ ಮತ್ತು ‘ಆಶ್ರಮ್​ 2’ ಬಳಿಕ ಈಗ ‘ಆಶ್ರಮ್​ 3’ ಮಾಡುತ್ತಿದ್ದಾರೆ. ಇದನ್ನು ಚಿತ್ರೀಕರಿಸಲು ನಾವು ಬಿಡಲ್ಲ. ಸದ್ಯಕ್ಕೆ ಪ್ರಕಾಶ್​ ಝಾ ಮುಖಕ್ಕೆ ಮಸಿ ಬಳಿದಿದ್ದೇವೆ. ಬಾಬಿ ಡಿಯೋಲ್​ಗಾಗಿ ಹುಡುಕುತ್ತಿದ್ದೇವೆ. ತಮ್ಮ ಸಹೋದರ ಸನ್ನಿ ಡಿಯೋಲ್​ ಅವರನ್ನು ನೋಡಿ ಬಾಬಿ ಡಿಯೋಲ್​ ಕಲಿಯಬೇಕು. ಅವರು ಎಂಥೆಂಥ ದೇಶಭಕ್ತಿ ಸಿನಿಮಾ ಮಾಡಿದ್ದಾರೆ’ ಎಂದು ಭಜರಂಗ ದಳದ ಮುಖಂಡ ಸುಶೀಲ್​ ಹೇಳಿದ್ದಾರೆ.

ನಿರ್ದೇಶಕ ಪ್ರಕಾಶ್​ ಝಾ ಅವರು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ. ಆದರೂ ಕೂಡ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ವೆಬ್​ ಸರಣಿ ತಂಡದವರಿಗೆ ಪೂರ್ತಿ ಭದ್ರತೆ ನೀಡಿ, ಶೂಟಿಂಗ್​ಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಭಜರಂಗ ದಳದವರು ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

ಜೈಲಲ್ಲಿ ರಾಮ-ಸೀತೆಯ ಪುಸ್ತಕ ಓದುತ್ತಿರುವ ಆರ್ಯನ್​ ಖಾನ್​; ಜಾಮೀನು ಸಿಗದೇ ಸ್ಟಾರ್​ ಪುತ್ರ ಕಂಗಾಲು

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್