ಕಮಲಮ್ಮನ ವಠಾರಕ್ಕೆ ಬಂದ ಆರ್ಯವರ್ಧನ್; ನೆನಪಾಯಿತು ಹಳೆಯ ದಿನಗಳು
ಆಸ್ಪತ್ರೆಯಲ್ಲಿ ವೈದ್ಯರು ಕೌನ್ಸಲಿಂಗ್ ಮಾಡುವಾಗ ಎಂಗೇಜ್ಮೆಂಟ್ ಆದ ಕ್ಷಣ, ಯಾರನ್ನೋ ಅತಿಯಾಗಿ ತಾನು ಪ್ರೀತಿಸುತ್ತಿದ್ದೆ ಎಂಬ ನೆನಪು ಸಂಜುಗೆ ಕಾಡಿದೆ. ಇದು ನೆನಪಾದ ತಕ್ಷಣ ಆತನಲ್ಲಿ ಸಂತಸ ಮನೆ ಮಾಡಿದೆ.
‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಯಾರೂ ಊಹಿಸದ ಟ್ವಿಸ್ಟ್ ಎದುರಾಗಿತ್ತು. ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ ಜತ್ಕರ್ ಅವರು ಧಾರಾವಾಹಿಯಿಂದ ಹೊರ ನಡೆಯೋದು ಅನಿವಾರ್ಯ ಆಯ್ತು. ಈ ಕಾರಣಕ್ಕೆ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರ ಮಾಡುತ್ತಿದ್ದಾರೆ. ಪಾತ್ರಧಾರಿ ಬದಲಾದ ಕಾರಣ ಧಾರಾವಾಹಿಗೆ ಟ್ವಿಸ್ಟ್ ನೀಡೋದು ಅನಿವಾರ್ಯ ಆಗಿತ್ತು. ಹೀಗಾಗಿ, ಆರ್ಯವರ್ಧನ್ಗೆ (Aryavardhan) ಅಪಘಾತ ಆದಂತೆ, ಆತನಿಗೆ ನೆನಪು ಮರೆತಂತೆ, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ತೋರಿಸಲಾಗಿದೆ. ಹೊಸ ಆರ್ಯವರ್ಧನ್ ಅನ್ನು ಸಂಜು ಆಗಿ ತೋರಿಸಲಾಗಿದೆ. ಈಗ ಸಂಜುಗೆ ನಿಧಾನವಾಗಿ ಹಳೆಯ ನೆನಪುಗಳು ಬರುತ್ತಿವೆ. ಆತ ನಿಧಾನವಾಗಿ ಆರ್ಯವರ್ಧನ್ ಆಗಿ ಬದಲಾಗುತ್ತಿದ್ದಾನೆ.
ಆಸ್ಪತ್ರೆಗೆ ಒಂಟಿಯಾಗಿ ತೆರಳಿರುವ ಸಂಜು:
ಸಂಜುಗೆ ಕೌನ್ಸಲಿಂಗ್ ನಡೆಯುತ್ತಿದೆ. ಆತ ಆಸ್ಪತ್ರೆಗೆ ತೆರಳಬೇಕಿತ್ತು. ಕಾರಿನ ವ್ಯವಸ್ಥೆ ಮಾಡಿದರೂ ರಾಜ ನಂದಿನಿ ವಿಲಾಸದಿಂದ ಆತ ಒಂಟಿಯಾಗಿ ಆಸ್ಪತ್ರೆಗೆ ತೆರಳಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ಕೌನ್ಸಲಿಂಗ್ ಮಾಡುವಾಗ ಎಂಗೇಜ್ಮೆಂಟ್ ಆದ ಕ್ಷಣ, ಯಾರನ್ನೋ ಅತಿಯಾಗಿ ತಾನು ಪ್ರೀತಿಸುತ್ತಿದ್ದೆ ಎಂಬ ನೆನಪು ಸಂಜುಗೆ ಕಾಡಿದೆ. ಇದು ನೆನಪಾದ ತಕ್ಷಣ ಆತನಲ್ಲಿ ಸಂತಸ ಮನೆ ಮಾಡಿದೆ. ಖುಷಿಯಿಂದ ವೈದ್ಯರ ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾನೆ. ಸಂಜು ಮುಖದಲ್ಲಿ ಸಂತಸ ಕಂಡು ವೈದ್ಯರು ಅಚ್ಚರಿ ಹೊರ ಹಾಕಿದ್ದಾರೆ.
ಅನು ಮನೆ ಬಳಿ ಬಂದ ಸಂಜು:
ಸಂಜು ಆಸ್ಪತ್ರೆಯಿಂದ ಮರಳಿ ಬರುವಾಗ ಅನು ಸಿರಿಮನೆಯ ಕಮಲಮ್ಮನ ವಠಾರದ ಬಳಿಯೇ ಬಂದಿದ್ದಾನೆ. ಮನೆ ನೋಡುತ್ತಿದ್ದಂತೆ ಆತನಿಗೆ ಹಳೆಯ ನೆನಪು ಕಾಡಿದೆ. ಈ ಮನೆಯಲ್ಲಿ ಯಾರೋ ಆಪ್ತರು ಇದ್ದಾರೆ ಎಂದು ಸಂಜುಗೆ ಭಾಸವಾಗಿದೆ. ಹೀಗಾಗಿ, ಮುಖ್ಯದ್ವಾರ ತೆಗೆದು ಸಂಜು ಮನೆ ಒಳಗೆ ಬಂದಿದ್ದಾನೆ. ಯಾರೋ ಆತನನ್ನು ಕರೆದಂತೆ ಭಾಸವಾಗುತ್ತಲೇ ಇತ್ತು. ಹಳೆಯ ನೆನಪುಗಳು ಆತನಿಗೆ ಅತಿಯಾಗಿ ಕಾಡುತ್ತಿವೆ.
ಮನೆ ಒಳಗೆ ಮಲಗಿದ್ದಾಳೆ ಅನು ಸಿರಿಮನೆ:
ಅನು ಸಿರಿಮನೆಯನ್ನು ಕೊಲ್ಲಲು ಝೇಂಡೆ ಪ್ಲ್ಯಾನ್ ರೂಪಿಸಿದ್ದ. ಆರ್ಯವರ್ಧನ್ನ ಸಾಯಿಸಲು ಅನು ಪ್ರಯತ್ನಿಸಿದ್ದಳು ಎಂಬ ನಂಬಿಕೆಯಲ್ಲಿ ಆತ ಇದ್ದಾನೆ. ಹೀಗಾಗಿ, ಆರ್ಯವರ್ಧನ್ ಅಸ್ಥಿ ಬಿಡಲು ತೆರಳಿದ ಸಂದರ್ಭದಲ್ಲಿ ಆಕೆಯನ್ನು ನೀರಿಗೆ ಬೀಳಿಸಿ ಹತ್ಯೆ ಮಾಡುವ ಆಲೋಚನೆ ಝೇಂಡೆಯದ್ದಾಗಿತ್ತು. ಆದರೆ, ಈ ಪ್ಲ್ಯಾನ್ ವಿಫಲವಾಯಿತು. ಅನು ನೀರಿಗೆ ಬಿದ್ದಾಗ ಸಂಜು ಹೋಗಿ ಆಕೆಯನ್ನು ಬದುಕಿಸಿದ್ದ.
ನೀರಿಗೆ ಬಿದ್ದ ಅನುನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಕೆಯನ್ನು ವಠಾರಕ್ಕೆ ಕರೆದುಕೊಂಡು ಹೋಗಬೇಕು ಎಂಬುದು ತಾಯಿ ಪುಷ್ಪಾಳ ಆಲೋಚನೆ ಆಗಿತ್ತು. ಆದರೆ, ಅನುನ ಅತ್ತೆ ಇದಕ್ಕೆ ಅವಕಾಶ ನೀಡಿರಲಿಲ್ಲ. ಆಸ್ಪತ್ರೆಯಲ್ಲಿ ಮತ್ತೆ ಈ ಬಗ್ಗೆ ಕೋರಿಕೊಂಡಿದ್ದರಿಂದ ಅನು ಅತ್ತೆಯಿಂದ ಇದಕ್ಕೆ ಅವಕಾಶ ಸಿಕ್ಕಿತ್ತು. ಹೀಗಾಗಿ ಅನು ವಠಾರದಲ್ಲೇ ಇದ್ದಾಳೆ. ಈಗ ಅದೇ ಮನೆಗೆ ಸಂಜು ಬಂದಿದ್ದಾನೆ.
ಇದನ್ನೂ ಓದಿ: ಆರ್ಯವರ್ಧನ್ನಿಂದ ಮರುಜನ್ಮ ಪಡೆದ ಅನು ಸಿರಿಮನೆ; ವಿಫಲವಾಯಿತು ಝೇಂಡೆ ಪ್ಲ್ಯಾನ್
ಸತ್ಯ ಒಪ್ಪೋದು ಬಲು ಕಷ್ಟ:
ಒಂದೊಮ್ಮೆ ಸಂಜುಗೆ ಎಲ್ಲವೂ ನೆನಪಾಗಿ ಅನು ಎದುರು ತಾನೇ ಆರ್ಯವರ್ಧನ್ ಎಂದು ಹೇಳಿಕೊಂಡರೂ ಇದನ್ನು ಒಪ್ಪೋದು ಅನುಗೆ ಕಷ್ಟ ಆಗಬಹುದು. ಆರ್ಯವರ್ಧನ್ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬ ವಿಚಾರ ಆತನ ತಾಯಿ ಪ್ರಿಯಾ ಹಾಗೂ ವೈದ್ಯರು, ಪೊಲೀಸರಿಗೆ ಮಾತ್ರ ಗೊತ್ತಿದೆ. ಇದನ್ನು ಅವರು ರಾಜ ನಂದಿನಿ ನಿವಾಸದವರಿಗೆ ಹೇಳಿದರೂ ಇದನ್ನು ಒಪ್ಪೋಕೆ ಕಷ್ಟ ಆಗಬಹುದು. ಈಗಾಗಲೇ ಹರ್ಷನ ಹೆಂಡತಿ ಮಾನ್ಸಿಗೆ ಈ ಬಗ್ಗೆ ಅನುಮಾನ ಮೂಡಿದೆ. ಸಂಜುನೇ ಆರ್ಯವರ್ಧನ್ ಎಂದರೆ ಆಕೆಯ ಅನುಮಾನ ಹೆಚ್ಚೋದು ನಿಜ.
ಶ್ರೀಲಕ್ಷ್ಮಿ ಎಚ್.