‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಅವರು ಹೊರಗುಳಿದರು. ಈ ಕಾರಣಕ್ಕೆ ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್​ ಅವರನ್ನು ಕರೆತರಲಾಗಿದೆ. ಹೀಗಾಗಿ ಕಥೆಗೆ ಟ್ವಿಸ್ಟ್ ಕೊಡಲಾಗಿದೆ.

‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
ಜೊತೆ ಜೊತೆಯಲಿ
TV9kannada Web Team

| Edited By: Rajesh Duggumane

Sep 21, 2022 | 9:54 AM

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆರ್ಯವರ್ಧನ್​ಗೆ ಕಾರು ಅಪಘಾತ ಆಗಿದೆ. ಮನೆಯವರ ಪಾಲಿಗೆ ಆರ್ಯವರ್ಧನ್ ಸತ್ತಿದ್ದಾನೆ. ಆದರೆ, ಆಸಲಿಗೆ ಆರ್ಯವರ್ಧನ್​ ಸತ್ತಿಲ್ಲ. ಆತ ಬದುಕಿದ್ದಾನೆ. ಮುಖ ಸಂಪೂರ್ಣ ಜಜ್ಜಿ ಹೋಗಿರುವುದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡ್ಲಾಗಿದೆ. ಇದರ ಜತೆಗೆ ತಲೆಗೆ ಏಟು ಬಿದ್ದಿರುವುದರಿಂದ ಹಳೆ ನೆನಪು ಎಲ್ಲವೂ ಮರೆತೇ ಹೋಗಿದೆ. ಈ ಮಧ್ಯೆ ಅನು ಸಿರಿಮನೆ ಒಂದು ಹೊಸ ಶಪಥ ಮಾಡಿದ್ದಾಳೆ. ಆರ್ಯವರ್ಧನ್​ ಹಾಗೂ ತನ್ನನ್ನು ದೂರ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಅನು ನಿರ್ಧರಿಸಿದ್ದಾಳೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಅವರು ಹೊರಗುಳಿದರು. ಈ ಕಾರಣಕ್ಕೆ ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್​ ಅವರನ್ನು ಕರೆತರಲಾಗಿದೆ. ಹೀಗಾಗಿ ಕಥೆಗೆ ಟ್ವಿಸ್ಟ್ ಕೊಡಲಾಗಿದೆ. ಆರ್ಯವರ್ಧನ್​​ಗೆ ಅಪಘಾತ ಆದಂತೆ, ಆತನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ತೋರಿಸಲಾಗಿದೆ. ಇದರ ಜತೆಗೆ ಹರೀಶ್ ರಾಜ್ ಅವರನ್ನು ಪರಿಚಯಿಸಲಾಗಿದೆ.

ಸದ್ಯ ಆರ್ಯವರ್ಧನ್ (ಹರೀಶ್ ರಾಜ್​) ಆಸ್ಪತ್ರೆಯಲ್ಲೇ ಇದ್ದಾನೆ. ಆತನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಆಗಿರುವುದು ಹಾಗೂ ಜ್ಞಾಪಕ ಬಂದಿರುವ ವಿಚಾರವನ್ನು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಕಾರು ಅಪಘಾತದ ಹಿಂದೆ ಯಾರಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ವಿಚಾರ ರಿವೀಲ್ ಮಾಡದಂತೆ ಪೊಲೀಸರು ವೈದ್ಯರ ಬಳಿ ಕೋರಿದ್ದಾರೆ.

ಮತ್ತೊಂದೆಡೆ ಆರ್ಯವರ್ಧನ್ ಬದುಕಿದ್ದಾನೆ ಎಂಬ ವಿಚಾರ ಅನುಗೆ ತಿಳಿದಿಲ್ಲ. ಹೀಗಾಗಿ ಗಂಡನನ್ನು ಕಳೆದುಕೊಂಡು ಆಕೆ ಕಣ್ಣೀರು ಹಾಕುತ್ತಿದ್ದಾಳೆ. ಪತಿಯ ಅಂತ್ಯ ಸಂಸ್ಕಾರ ಮಾಡಿ ಬಂದ ನೋವಿನಲ್ಲಿದ್ದ ಆಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ‘ಆರ್ಯವರ್ಧನ್ ಕೊಲೆ ಮಾಡಲು ಅನು ಸಂಚು ರೂಪಿಸಿದ್ದಳು’ ಎಂದು ದೂರು ದಾಖಲಾದ ಕಾರಣ ಆಕೆಯನ್ನು ಬಂಧಿಸಲಾಗಿತ್ತು. ತಕ್ಷಣವೇ ಜಾಮೀನು ಸಿಕ್ಕಿದ್ದರಿಂದ ಆಕೆಯನ್ನು ಬಿಡುಗಡೆ ಮಾಡಲಾಯಿತು.

ಅನು ಸಿರಿಮನೆ ಈಗ ಮತ್ತೆ ಮರಳಿ ಮನೆಗೆ ಬಂದಿದ್ದಾಳೆ. ಆಕೆಗೆ ಆರ್ಯವರ್ಧನ್ ಸತ್ತಿದ್ದಾನೆ ಎಂಬ ವಿಚಾರವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಕೊಲೆಯ ಹಿಂದೆ ಯಾರದ್ದೋ ಕೈವಾಡ ಇದೆ ಎಂಬುದು ಆಕೆಗೆ ಪದೇಪದೇ ಅನ್ನಿಸುತ್ತಲೇ ಇದೆ. ಹೀಗಾಗಿ ಮನೆ ಒಳಗೆ ಬರುವಾಗ ಆಕೆ ಒಂದು ಶಪಥ ಮಾಡಿಯೇ ಬಂದಿದ್ದಾಳೆ. ‘ಆರ್ಯವರ್ಧನ್ ಇಲ್ಲ ಎಂಬುದನ್ನು ಒಪ್ಪಿಕೊಂಡು ನಾನು ಈ ಮನೆಯ ಒಳಗೆ ಬರುತ್ತಿಲ್ಲ. ಅವರು ಸದಾ ನನ್ನ ಜತೆ ಇರ್ತಾರೆ. ನನ್ನ ಹಾಗೂ ಆರ್ಯವರ್ಧನ್ ಅವರನ್ನು ದೂರ ಮಾಡಲು ನೋಡಿದ ಹಾಗೂ ನನ್ನ ಈ ಸ್ಥಿತಿಗೆ ಕಾರಣವಾದವರನ್ನು ಸುಮ್ಮನೆ ಬಿಡಲ್ಲ’ ಎಂದು ಶಪಥ ಮಾಡಿದ್ದಾಳೆ ಅನು ಸಿರಿಮನೆ.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ

ಮತ್ತೊಂದು ಕಡೆ ಮೀರಾ ಹೆಗಡೆ ಎಲ್ಲರನ್ನೂ ಸಮಾಧಾನ ಮಾಡುವಲ್ಲಿ ತೊಡಗಿದ್ದಾಳೆ. ಅನು ತಂದೆ-ತಾಯಿ ಸುಬ್ಬು ಹಾಗೂ ಪುಷ್ಪಾ ಅವರು ಆಕ್ರಂದನ ಮುಗಿಲುಮುಟ್ಟಿದೆ. ‘ಈ ಮದುವೆಗೆ ಒಪ್ಪಲೇ ಬಾರದಿತ್ತು’ ಎಂಬ ಮಾತನ್ನು ಪದೇಪದೇ ಹೇಳಿಕೊಳ್ಳುತ್ತಾ ಸುಬ್ಬು ಕಣ್ಣೀರು ಹಾಕುತ್ತಿದ್ದಾನೆ. ಆರ್ಯವರ್ಧನ್ ಬದುಕಿದ್ದಾನೆ ಎಂಬ ವಿಚಾರ ಗೊತ್ತಾದರೆ ಇವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಶ್ರೀಲಕ್ಷ್ಮಿ ಎಚ್.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada