ಮೌನಕ್ಕೆ ಶರಣಾದ ಅನು ಸಿರಿಮನೆ; ಮನದಲ್ಲಿ ಹುಟ್ಟಿದೆ ದ್ವೇಷದ ಬೆಂಕಿ?

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಮೌನಕ್ಕೆ ಶರಣಾಗಿದ್ದಾಳೆ. ಆರ್ಯವರ್ಧನ್ ನಿಧನ ಹೊಂದಿದ್ದಾನೆ ಎಂದು ಭಾವಿಸಿರುವ ಆಕೆ ಕಣ್ಣೀರು ಹಾಕುತ್ತಿದ್ದಾಳೆ.

ಮೌನಕ್ಕೆ ಶರಣಾದ ಅನು ಸಿರಿಮನೆ; ಮನದಲ್ಲಿ ಹುಟ್ಟಿದೆ ದ್ವೇಷದ ಬೆಂಕಿ?
ಅನು
TV9kannada Web Team

| Edited By: Rajesh Duggumane

Sep 22, 2022 | 9:14 AM

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ನೀಡಿರುವ ದೊಡ್ಡ ಟ್ವಿಸ್ಟ್​ನಿಂದ ವೀಕ್ಷಕರ ವಲಯ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್​ ಜತ್ಕರ್ ಬದಲು ನಟ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ. ಆರ್ಯವರ್ಧನ್ (Aryavardhan)​ ಅಪಘಾತಕ್ಕೆ ಒಳಗಾಗಿರುವುದರಿಂದ ತಲೆಗೆ ಏಟು ಬಿದ್ದಿದೆ. ಹೀಗಾಗಿ ನೆನಪು ಮಾಸಿದೆ. ಇನ್ನು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಅನಿರುದ್ಧ್​ ಬದಲು ಹರೀಶ್ ರಾಜ್ ತೋರಿಸಲಾಗುತ್ತಿದೆ. ಈ ಮಧ್ಯೆ ಅನು ಮನೆಯಲ್ಲಿ ಎಲ್ಲರೂ ಕಣ್ಣೀರು ಹರಿಸುತ್ತಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಮೌನಕ್ಕೆ ಶರಣಾಗಿದ್ದಾಳೆ. ಆರ್ಯವರ್ಧನ್ ನಿಧನ ಹೊಂದಿದ್ದಾನೆ ಎಂದು ಭಾವಿಸಿರುವ ಆಕೆ ಕಣ್ಣೀರು ಹಾಕುತ್ತಿದ್ದಾಳೆ. ಆಕೆಯನ್ನು ಕರೆದುಕೊಂಡು ಹೋಗಲು ಸುಬ್ಬು ಹಾಗೂ ಪುಷ್ಪ ನಿರ್ಧರಿಸಿದ್ದಾರೆ. ‘ಅನು ಬಾರಮ್ಮ ಮನೆಗೆ ಹೋಗೋಣ. ಇಲ್ಲಿದ್ದುಕೊಂಡು ಕಣ್ಣೀರು ಹಾಕುವುದನ್ನು ನಮ್ಮಿಂದ ನೋಡೋಕೆ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗೆ ಬಂದು ಹಾಯಾಗಿ ಇರಮ್ಮ’ ಎಂದು ಕೋರಿದ್ದಾನೆ ಸುಬ್ಬು. ಆದರೆ, ಇದಕ್ಕೆ ಅನು ಉತ್ತರಿಸದೆ ರೂಂಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.

ನಡೆದ ಘಟನೆಗಳೆಲ್ಲವೂ ಅನುಗೆ ಶಾಕ್ ನೀಡಿದೆ. ಆರ್ಯವರ್ಧನ್​ಗೆ ಅಪಘಾತ ಆಗಿದ್ದು, ಆತ ನಿಧನ ಹೊಂದಿದ್ದಾನೆ ಎಂದು ಘೋಷಣೆ ಮಾಡಿದ್ದು, ಆತನ ಅಂತ್ಯಸಂಸ್ಕಾರ ಮಾಡಿ ಬಂದಿದ್ದು ಹೀಗೆ ಪ್ರತಿ ಘಟನೆಗಳು ಅವಳನ್ನು ಕಾಡುತ್ತಿದೆ. ಆರ್ಯವರ್ಧನ್​​ನ ಕೊಂದಿದ್ದು ಯಾರು ಎಂಬುದನ್ನು ಆಕೆಗೆ ಕಂಡುಹಿಡಿಯಬೇಕಿದೆ. ಈ ಕಾರಣಕ್ಕೆ ಅವಳು ಮೌನಕ್ಕೆ ಜಾರಿದ್ದಾಳೆ. ಮನಸ್ಸಿನಲ್ಲೇ ಎಲ್ಲವನ್ನೂ ಲೆಕ್ಕಾಚಾರ ಹಾಕುತ್ತಿದ್ದಾಳೆ.

ಆರ್ಯವರ್ಧನ್ ಹಾಗೂ ತನ್ನನ್ನು ಬೇರೆ ಮಾಡುವ ಉದ್ದೇಶದಿಂದಲೇ ಈ ಕೊಲೆ ನಡೆದಿದೆ ಎಂಬುದು ಅನು ಊಹೆ. ಈ ಕಾರಣಕ್ಕೆ ತನ್ನನ್ನು ಈ ಪರಿಸ್ಥಿತಿಗೆ ತಂದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ದಾಳೆ. ಆರ್ಯವರ್ಧನ್​ಗೆ ಅಪಘಾತ ಆಗಿದ್ದು ಹೇಗೆ ಎಂಬುದನ್ನು ಆಕೆ ಹುಡುಕಿ ಹೋಗಬಹುದು.

ಈ ಮಧ್ಯೆ ಮಾನ್ಸಿ ಹಾಗೂ ಮೀರಾಗೆ ಅನು ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಆರ್ಯವರ್ಧನ್​ ಕಂಡರೆ ಅನು ಸಿಟ್ಟಾಗುತ್ತಿದ್ದಳು. ರಾಜನಂದಿನಿ ಬದುಕನ್ನು ಆರ್ಯವರ್ಧನ್ ಕಿತ್ತುಕೊಂಡಿದ್ದಾನೆ ಎಂದು ಆರೋಪ ಮಾಡುತ್ತಿದ್ದಳು. ಇದರ ಮಧ್ಯೆ ತಾನು ಗರ್ಭಿಣಿ ಎಂಬ ಮಾತನ್ನು ಅನು ಹೇಳಿಕೊಂಡಳು. ನಂತರ ಆರ್ಯನ ಜತೆ ಒಳ್ಳೆಯ ರೀತಿಯಲ್ಲಿ ಇರೋಕು ಶುರು ಮಾಡಿದಳು. ಈಗ ಆರ್ಯವರ್ಧನ್ ಸತ್ತಿದ್ದಾನೆ. ಈ ಕಾರಣದಿಂದ ಮಾನ್ಸಿ ಹಾಗೂ ಮೀರಾಗೆ ಅನುಮಾನ ಹುಟ್ಟಿಕೊಂಡಿದೆ. ಇದೆಲ್ಲವೂ ಅನುನ ಪ್ಲ್ಯಾನ್ ಎಂಬುದು ಇವರ ಊಹೆ.

ಇದನ್ನೂ ಓದಿ: ‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ

ಮತ್ತೊಂದು ಕಡೆ ಆರ್ಯವರ್ಧನ್​​ಗೆ ಪ್ರಜ್ಞೆ ಬಂದಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿರುವುದರಿಂದ ಮುಖದಲ್ಲಿ ಬದಲಾವಣೆ ಆಗಿದೆ. ಈ ಕಾರಣಕ್ಕೆ ಇವನೇ ಆರ್ಯವರ್ಧನ್ ಎಂದರೂ ಅನು ಆಗಲಿ, ಮಾನ್ಸಿ ಆಗಲಿ ಅಥವಾ ಮೀರಾ ಆಗಲಿ ಇದನ್ನು ನಂಬೋದು ಅನುಮಾನವೇ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada