‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?

ಪರಮೇಶ್ವರ್​ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದಾರೆ. ಅವರು ಮನೆಯನ್ನು ನೋಡುತ್ತಿರುವ ರೀತಿಯಲ್ಲಿ ಫೋಟೋ ಇದೆ. ‘ಬಹುತೇಕ ಸಿದ್ಧತೆ ನಡೆದಿದೆ’ ಎಂದು ಪರಮೇಶ್ವರ್​ ಅವರು ಇದಕ್ಕೆ ಕ್ಯಾಪ್ಶನ್ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?
ಪರಮೇಶ್ವರ್ ಗುಂಡ್ಕಲ್
TV9kannada Web Team

| Edited By: Rajesh Duggumane

Sep 22, 2022 | 4:04 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada Season 9) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಶನಿವಾರದಿಂದ (ಸೆಪ್ಟೆಂಬರ್ 24) ಬಿಗ್ ಬಾಸ್ ಟಿವಿ ಸೀಸನ್​ಗೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್ (Sudeep) ಅವರು ಎಂದಿನ ಹುಮ್ಮಸ್ಸಿನಲ್ಲಿ ಸ್ಪರ್ಧಿಗಳಿಗೆ ಆಹ್ವಾನ ನೀಡಲಿದ್ದಾರೆ. ಈ ಬಾರಿ ಟಿವಿ ಸೀಸನ್​ನಲ್ಲಿ ಹಲವು ವಿಶೇಷತೆ ಇರಲಿದೆ. ಆದರೆ, ಬಿಗ್ ಬಾಸ್ ಮನೆಗೆ ಹೆಚ್ಚಿನ ಬದಲಾವಣೆ ಏನನ್ನೂ ಮಾಡುತ್ತಿಲ್ಲ ಎನ್ನಲಾಗಿದೆ. ಕಲರ್ಸ್ ಕನ್ನಡ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್’ ಟಿವಿ ಸೀಸನ್ ಆರಂಭಕ್ಕೂ ಮೊದಲು ಒಟಿಟಿ ಸೀಸನ್ ಆರಂಭಿಸಲಾಗಿತ್ತು. 42 ದಿನಗಳ ಕಾಲ ಬಿಗ್ ಬಾಸ್​ ಮನೆಯಲ್ಲಿ ಹಣಾಹಣಿ ಏರ್ಪಟ್ಟಿತ್ತು. 16 ಸ್ಪರ್ಧಿಗಳ ಪೈಕಿ 4 ಸ್ಪರ್ಧಿಗಳು ಒಟಿಟಿಯಿಂದ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್​ಗೆ ಹೋಗುತ್ತಿದ್ದಾರೆ. ಹಳೆಯ ಸೀಸನ್​ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಸೇರಿ ಐವರು ಎಂಟ್ರಿ ಕೊಡುತ್ತಿದ್ದಾರೆ. ಈ 9 ಸ್ಪರ್ಧಿಗಳ ಜತೆ ಮತ್ತೆ 9 ಸ್ಪರ್ಧಿಗಳು ನವೀನರು.

ಪರಮೇಶ್ವರ್​ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದಾರೆ. ಅವರು ಮನೆಯನ್ನು ನೋಡುತ್ತಿರುವ ರೀತಿಯಲ್ಲಿ ಫೋಟೋ ಇದೆ. ‘ಬಹುತೇಕ ಸಿದ್ಧತೆ ನಡೆದಿದೆ’ ಎಂದು ಪರಮೇಶ್ವರ್​ ಅವರು ಇದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋದಲ್ಲಿ ಮನೆ ಈ ಮೊದಲು ಇದ್ದಂತೇ ಇದೆ. ಇದು ಕೆಲವರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್​ 9’ಕ್ಕೆ ಕಾಲಿಡುವುದಕ್ಕೂ ಮುನ್ನ ಕೇರಳ ಟ್ರಿಪ್ ಮಾಡಿದ ನಟಿ ಅನುಪಮಾ ಗೌಡ

ಒಟಿಟಿ ಸೀಸನ್​​ನಿಂದ ಟಿವಿ ಸೀಸನ್​ಗೆ ಇರೋದು ಒಂದು ವಾರದ ಗ್ಯಾಪ್ ಮಾತ್ರ. ಈ ಸಂದರ್ಭದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೆಚ್ಚಿನ ಚೇಂಜಸ್ ಮಾಡಿಲ್ಲ ಎನ್ನಲಾಗುತ್ತಿದೆ. ಟಿವಿ ಸೀಸನ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 24ರಂದು ಸಂಜೆ ಆರು ಗಂಟೆಗೆ ಆರಂಭ ಆಗಲಿದೆ. ನಂತರ ನಿತ್ಯ ರಾತ್ರಿ 9.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರ ಕಾಣಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada