ರಾಜನಂದಿನಿ ನಿವಾಸಕ್ಕೆ ಮರಳಿದ ಹೊಸ ಆರ್ಯವರ್ಧನ್; ನಿಜವಾಯ್ತು ಅನು ಊಹೆ
ಆರ್ಯವರ್ಧನ್ ಮೃತಪಟ್ಟ ನಂತರದಲ್ಲಿ ಅನು ತೀವ್ರವಾಗಿ ಕುಸಿದು ಹೋಗುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಆಕೆ ಧೈರ್ಯ ತೆಗೆದುಕೊಂಡಿದ್ದಾಳೆ.
‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಹೊಸಹೊಸ ಟ್ವಿಸ್ಟ್ಗಳನ್ನು ತೆಗೆದುಕೊಂಡು ಸಾಗುತ್ತಿದೆ. ಈ ತಿರುವುಗಳನ್ನು ಪ್ರೇಕ್ಷಕರಿಗೆ ಅರಗಿಸಿಕೊಳ್ಳೋಕೆ ಕೊಂಚ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗದ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅನಿರುದ್ಧ್ ಜತ್ಕರ್ (Aniruddha Jatkar) ಅವರು ಧಾರಾವಾಹಿಯಿಂದ ಹೊರ ನಡೆಯಬೇಕಾದ ಪರಿಸ್ಥಿತಿ ಬಂದೊದಗಿದ ಹಿನ್ನೆಲೆಯಲ್ಲಿ ಧಾರಾವಾಹಿಗೆ ಟ್ವಿಸ್ಟ್ ನೀಡಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆರ್ಯವರ್ಧನ್ಗೆ ಅಪಘಾತವಾದಂತೆ ತೋರಿಸಲಾಗಿದೆ. ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಆತ ಬದುಕಿದ್ದಾನೆ. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ನಡೆದಿರುವುದರಿಂದ ಹೊಸ ಆರ್ಯವರ್ಧನ್ (ಹರೀಶ್ ರಾಜ್) ಎಂಟ್ರಿ ಆಗಿದೆ.
ಆರ್ಯವರ್ಧನ್ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಆತನ ಅಂತ್ಯಸಂಸ್ಕಾರ ಕೂಡ ಮಾಡಲಾಗಿದೆ. ಈ ಕಾರಣದಿಂದ ರಾಜನಂದಿನಿ ವಿಲಾಸದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂಬುದನ್ನು ಅನು ಬಳಿ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮನೆಯಲ್ಲಿ ಆರ್ಯವರ್ಧನ್ ಫೋಟೋಗೆ ಹಾಕಿದ್ದ ಹಾರವನ್ನು ಅನು ತೆಗೆದಿದ್ದಾಳೆ. ದೇವರಿಗೆ ದೀಪ ಹಚ್ಚಿದ್ದಾಳೆ.
ಆರ್ಯವರ್ಧನ್ ಮೃತಪಟ್ಟ ನಂತರದಲ್ಲಿ ಅನು ತೀವ್ರವಾಗಿ ಕುಸಿದು ಹೋಗುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಆಕೆ ಧೈರ್ಯ ತೆಗೆದುಕೊಂಡಿದ್ದಾಳೆ. ಹುಟ್ಟುತ್ತಿರುವ ಮಗುವಿಗೋಸ್ಕರ ಆಕೆ ಎಲ್ಲವನ್ನೂ ಎದುರಿಸಲು ರೆಡಿ ಆಗಿದ್ದಾಳೆ. ‘ರಾಜನಂದಿನಿ ಇಲ್ಲದೆ ಆರ್ಯ ಸರ್ 20 ವರ್ಷ ಇದ್ದರು. ಬಹುಶಃ ನಾನು ಆ ರೀತಿಯೇ ಬದುಕಬೇಕು ಎಂದು ದೇವರು ಬಯಸಿದಂತಿದೆ. ನಾನು ಬದುಕಿ ತೋರಿಸುತ್ತೇನೆ. ಆರ್ಯ ಸರ್ ಹೇಗೆ ಬದುಕಬೇಕು ಎಂಬುದು ಹೇಳಿಕೊಟ್ಟು ಹೋಗಿದ್ದಾರೆ. ನಾನು ಹುಟ್ಟುವ ಮಗುವಿಗೋಸ್ಕರ ಬದುಕುತ್ತೇನೆ’ ಎಂದಿದ್ದಾಳೆ ಅನು. ಅನು ಧೈರ್ಯವನ್ನು ಕಂಡು ಮನೆ ಮಂದಿಗೂ ಖುಷಿ ಆಗಿದೆ. ಈ ಮಧ್ಯೆ ಕಥೆಗೆ ದೊಡ್ಡ ಟ್ವಿಸ್ಟ್ ಸಿಗುವ ಸೂಚನೆ ಸಿಕ್ಕಿದೆ.
ಆರ್ಯವರ್ಧನ್ಗೆ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆತನ ಮುಖ ಬದಲಾಗಿದೆ. ಹೊಸ ಆರ್ಯವರ್ಧನ್ಗೆ ಜ್ಞಾನ ಬಂದಿದೆ. ಆದರೆ, ನೆನಪು ಆತನಲ್ಲಿ ಉಳಿದಿಲ್ಲ. ಈಗ ರಾಜನಂದಿನಿ ನಿವಾಸಕ್ಕೆ ಹೊಸ ಆರ್ಯವರ್ಧನ್ನನ್ನು ಕರೆದು ತರಲಾಗುತ್ತಿದೆ. ಆತನ ಬಳಿ ಯಾವುದೇ ನೆನಪು ಉಳಿದುಕೊಂಡಿಲ್ಲ. ಮುಖ ಕೂಡ ಬದಲಾಗಿದೆ. ಹೀಗಾಗಿ ಈತನೇ ಆರ್ಯವರ್ಧನ್ ಎಂದು ಹೇಳಿದರೆ ಇದನ್ನು ನಂಬೋದು ಅಷ್ಟು ಸುಲಭವಲ್ಲ.
ಇದನ್ನೂ ಓದಿ: ‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್ಗೋಸ್ಕರ ಅನಿರುದ್ಧ್ ಭಾವನಾತ್ಮಕ ಪೋಸ್ಟ್
ಮಾನ್ಸಿ ಹಾಗೂ ಆರ್ಯವರ್ಧನ್ ಮ್ಯಾನೇಜರ್ ಮೀರಾ ಹೆಗಡೆಗೆ ಅನು ಮೇಲೆ ಅನುಮಾನ ಶುರುವಾಗಿದೆ. ಆರ್ಯವರ್ಧನ್ನನ್ನು ಕೊಲ್ಲಿಸೋಕೆ ಅನು ಪ್ಲ್ಯಾನ್ ರೂಪಿಸಿದ್ದಾಳೆ ಎಂಬುದು ಮಾನ್ಸಿ ಅನುಮಾನ. ಈ ಸಂದರ್ಭದಲ್ಲಿ ಬೇರೆಯಾರೋ ಬಂದು ತಾನೇ ಆರ್ಯವರ್ಧನ್ ಎಂದು ಹೇಳಿದರೆ ಮನೆಯವರಿಗೆ ನಂಬೋಕೆ ಕಷ್ಟ ಆಗಬಹುದು. ಅನು ಮೇಲೆ ಮೂಡಿರುವ ಅನುಮಾನ ಮತ್ತಷ್ಟು ಹೆಚ್ಚಬಹುದು. ಆರ್ಯವರ್ಧನ್ ಬದುಕಿದ್ದಾನೆ ಎಂಬ ಸತ್ಯವನ್ನು ಮನೆ ಮಂದಿ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.