Lakshana: ಶ್ವೇತಾಳ ಸಹಾಯದಿಂದ ಪೋಲಿಸರಿಂದ ತಪ್ಪಿಸಿಕೊಂಡ ಮೌರ್ಯ ಸೀಕ್ರೆಟ್ ವಿಲನ್‌ನ ಕೈಯಲ್ಲಿ ಸೆರೆ

ಮಿಲ್ಲಿಯ ತಾಯಿ ಮೌರ್ಯನ್ನು ಯಾಕೆ? ಕಿಡ್ನಾಪ್ ಮಾಡಿದ್ದಾಳೆ, ಆ ಮೌರ್ಯನಿಗೆ ಹೇಗೆಲ್ಲಾ ಕಿರುಕುಳ ಕೊಡುತ್ತಾಳೆ. ಆಕೆಯ ಉದ್ದೇಶ ಏನು, ಸಿ.ಎಸ್ ಮೇಲೆ ಅವಳಿಗೆ ಏಕೆ ದ್ವೇಷ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

Lakshana: ಶ್ವೇತಾಳ ಸಹಾಯದಿಂದ ಪೋಲಿಸರಿಂದ ತಪ್ಪಿಸಿಕೊಂಡ ಮೌರ್ಯ ಸೀಕ್ರೆಟ್ ವಿಲನ್‌ನ ಕೈಯಲ್ಲಿ ಸೆರೆ
Lakshana
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 22, 2022 | 11:19 AM

ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಮೂಡಿ ಬರುತ್ತಿರುವ ಲಕ್ಷಣ ಧಾರವಾಹಿಯೂ ರೋಚಕ ತಿರುವುಗಳೊಂದಿಗೆ ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಮೌರ್ಯ ಪೋಲಿಸರಿಂದ ತಪ್ಪಿಸಿಕೊಂಡು ಹೋಗುವಾಗ ಮಿಲ್ಲಿಯ ತಾಯಿ ಅವನನ್ನು ಕಿಡ್ನಾಪ್ ಮಾಡಿದ್ದಾಳೆ. ನಕ್ಷತ್ರಳ ಕಿಡ್ನಾಪ್ ನಾಟಕದಲ್ಲಿ ಹೈ ಡ್ರಾಮಾನೇ ನಡೆದು ಹೋಗಿದೆ. ಭೂಪತಿಯ ಕೈಯಲ್ಲಿ ಸರಿಯಾಗಿ ಲಾಕ್ ಆದ ಮೌರ್ಯನ್ನು ಬಂಧಿಸಲು ಪೋಲಿಸರನ್ನು ಕರೆಸಿದ್ದಾರೆ ಚಂದ್ರ ಶೇಖರ್. ಮೌರ್ಯನನ್ನು ಪೋಲಿಸರು ಬಂಧಿಸಿದರೆ ತನ್ನ ಬಣ್ಣ ಬಯಲಾಗುತ್ತದೆ, ನನಗೂ ಜೈಲೇ ಗತಿ, ಶಕುಂತಳಾ ದೇವಿಯ ಮನೆಯ ಆಡಂಬರದ ಜೀವನ ಕೈ ತಪ್ಪಿ ಹೋಗುತ್ತದೆ ಎಂಬ ಕಾರಣದಿಂದ ಸ್ವತಃ ಶ್ವೇತಾನೇ ಮೌರ್ಯನಿಗೆ ಬುದ್ಧಿವಾದ ಹೇಳುವ ಹಾಗೆ ನಾಟಕ ಮಾಡಿ ಪೋಲಿಸರಿಂದ ತಪ್ಪಿಸಿಕೊಂಡು ಹೋಗಲು ಪ್ಲಾನ್ ಹೇಳುತ್ತಾಳೆ.

ಶ್ವೇತಾ ಹೇಳಿದ ಪ್ಲಾನ್ ಪ್ರಕಾರ ಪೋಲಿಸರು ಬರುವ ವೇಳೆ ಮೌರ್ಯ ಅಲ್ಲೇ ಇದ್ದ ಗ್ಲಾಸ್ ಪೀಸ್ ಒಂದನ್ನು ತೆಗೆದುಕೊಂಡು ಹೋಗಿ ಶ್ವೇತಾಳ ಕತ್ತಿನ ಪಕ್ಕ ಗ್ಲಾಸ್ ಹಿಡಿದು, ನನ್ನನ್ನು ಬಂಧಿಸಿದರೆ ಶ್ವೇತಾಳನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ. ಭೂಪತಿ ಹಾಗೂ ಅವನ ಅಣ್ಣಂದಿರ ಬುದ್ಧಿವಾದಕ್ಕೂ ಡೋಂಟ್ ಕೇರ್ ಎನ್ನದ ಮೌರ್ಯ ಅಲ್ಲೇ ಇದ್ದ ಹಳೆಯ ಕಾರ್ ಹತ್ತಿ ಪರಾರಿಯಾಗುತ್ತಾನೆ. ಹಾಗಾಗಿ ಭೂಪತಿ ಮತ್ತು ಪೋಲಿಸರಿಗೆ ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ.

ಮೌರ್ಯ ವೇಗವಾಗಿ ಕಾರ್ ಓಡಿಸಿಕೊಂಡು ಬರುತ್ತಿದ್ದ ವೇಳೆ ಒಬ್ಬಳು ಮಹಿಳೆ ಲಾರಿಯನ್ನು ಡ್ರೈವ್ ಮಾಡಿಕೊಂಡು ಬಂದು ಕಾರ್‌ಗೆ ಡಿಕ್ಕಿ ಹೊಡಿತ್ತಾಳೆ. ಕಾರ್‌ನಲ್ಲಿದ್ದ ಮೌರ್ಯ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆ ಅವನನ್ನು ಎಳೆದುಕೊಂಡು ಹೋಗಿ ಒಂದು ಅಜ್ಙಾತ ಸ್ಥಳದಲ್ಲಿ ಕೂಡಿ ಹಾಕುತ್ತಾಳೆ. ಆಕೆ ಬೇರೆ ಯಾರಯ ಅಲ್ಲಾ ಮಿಲ್ಲಿಯ ತಾಯಿ. ಆದ್ರೆ ಇಲ್ಲಿಯವರೆಗೂ ಆಕೆಯ ಮುಖವನ್ನು ರಿವೀಲ್ ಮಾಡಿಲ್ಲ. ಇನ್ನೊಂದು ಕಡೆ ತಪ್ಪಿಸಿಕೊಂಡ ಮೌರ್ಯನನ್ನು ಹುಡುಕುತ್ತಾ ಬಂದ ಭೂಪತಿ ಹಾಗೂ ಪೋಲಿಸರಿಗೆ ಮೌರ್ಯನ ಕಾರ್ ಆ್ಯಕ್ಸಿಡೆಂಟ್ ಆಗಿರುವುದು ಗೊತ್ತಾಗುತ್ತದೆ. ಆದರೆ ಆತ ಕಾರ್‌ನಲ್ಲಿ ಇಲ್ಲದ್ದನ್ನು ಕಂಡು ಅವರೆಲ್ಲರೂ ಮೌರ್ಯ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎಂದು ಭಾವಿಸುತ್ತಾರೆ. ಆದರೆ ಅವರಿಗೆ ಮೌರ್ಯ ಕಿಡ್ನಾಪ್ ಆಗಿರುವ ಸಂಗತಿ ತಿಳಿದಿರುವುದಿಲ್ಲ.

ಭೂಪತಿಗೆ ಈ ಕಿಡ್ನಾಪ್ ವಿಷಯ ತಿಳಿದರೆ ಏನಾಗಬಹುದು, ಮಿಲ್ಲಿಯ ತಾಯಿ ಮೌರ್ಯನ್ನು ಯಾತಕ್ಕಾಗಿ ಕಿಡ್ನಾಪ್ ಮಾಡಿದ್ದಾಳೆ, ಆ ಮೌರ್ಯನಿಗೆ ಹೇಗೆಲ್ಲಾ ಕಿರುಕುಳ ಕೊಡುತ್ತಾಳೆ. ಆಕೆಯ ಉದ್ದೇಶ ಏನು, ಸಿ.ಎಸ್ ಮೇಲೆ ಅವಳಿಗೆ ಏಕೆ ದ್ವೇಷ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್ 

Published On - 11:16 am, Thu, 22 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ