Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?

ಸಾನಿಯಾಳನ್ನು ರತ್ನಮಾಲಾ ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದಳು. ಇಷ್ಟೆಲ್ಲ ಘಟನೆ ನಡೆಯೋಕೆ, ಅವಮಾನ ಆಗೋಕೆ ರತ್ನಮಾಲಾನೇ ಕಾರಣ ಎಂಬ ಅಭಿಪ್ರಾಯ ಸಾನಿಯಾದ್ದು. ಈ ಕಾರಣಕ್ಕೆ ಮನೆಗೆ ಬಂದ ಸಾನಿಯಾ ರತ್ನಮಾಲಾ ವಿರುದ್ಧ ಸಿಡಿದೇಳಬಹುದು.

ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
ಸಾನಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 23, 2022 | 7:30 AM

ಕನ್ನಡತಿ (Kannadathi Serial) ಧಾರಾವಾಹಿಯಲ್ಲಿ ರತ್ನಮಾಲಾ (Ratnamala) ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂಡಿ ಆಗಿದ್ದಾಳೆ. ಈ ಎಂಡಿ ಮಟ್ಟವನ್ನು ಆಕೆ ಪಡೆದುಕೊಂಡಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣಕ್ಕೆ ಆಕೆಗೆ ಯಾರೂ ಹೆಚ್ಚಿನ ಗೌರವ ಕೊಡುತ್ತಿಲ್ಲ. ಎಲ್ಲರೂ ಆಕೆಯನ್ನು ನಿಕೃಷ್ಟವಾಗಿ ನೋಡುತ್ತಾರೆ. ಈ ವಿಚಾರ ಸಾನಿಯಾಗೂ ಗೊತ್ತಿದೆ. ಆದರೆ, ಏನೂ ಮಾಡಲಾಗದ ಸ್ಥಿತಿಯಲ್ಲಿ ಅವಳಿದ್ದಾಳೆ. ಇತ್ತೀಚೆಗಂತೂ ಸಾನಿಯಾ (Saniya) ಸ್ಥಿತಿ ಹಲ್ಲು ಕಿತ್ತ ಹಾವಿನಂತೆ ಆಗಿದೆ. ಈ ಮಧ್ಯೆ ಸಾನಿಯಾ ತೀವ್ರ ಅವಮಾನ ಎದುರಿಸುವಂತಾಗಿದೆ. ಏಕವಚನದಲ್ಲಿ ಬೈಸಿಕೊಂಡಿದ್ದಾಳೆ. ಆಸ್ಪತ್ರೆಯಲ್ಲೇ ಮಲಗಿ ರಾತ್ರಿ ಕಳೆದಿದ್ದಾಳೆ. ಕೊನೆಗೆ ಆಟೋ ಡ್ರೈವರ್​ನಿಂದಲೂ ಸಾನಿಯಾ ಅವಮಾನ ಎದುರಿಸುವಂತಾಗಿದೆ.

ರತ್ನಮಾಲಾಳನ್ನು ನೆಲಕ್ಕೆ ಬೀಳಿಸೋದು ಸಾನಿಯಾ ಪ್ಲ್ಯಾನ್ ಆಗಿತ್ತು. ಆದರೆ, ತಾನೇ ತೋಡಿದ ಹೊಂಡದಲ್ಲಿ ಸಾನಿಯಾ ಬಿದ್ದಿದ್ದಳು. ನೆಲದಮೇಲೆ ಚೆಲ್ಲಿದ ಎಣ್ಣೆಗೆ ಕಾಲು ತಾಕಿ ಅವಳೇ ಬಿದ್ದಳು. ತಲೆಗೆ ಏಟು ಬಿದ್ದಿತ್ತು. ಈ ಕಾರಣಕ್ಕೆ ರತ್ನಮಾಲಾ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಆದರೆ, ಆಕೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಅರ್ಧದಲ್ಲೇ ಮನೆಗೆ ಬಂದಿದ್ದಾಳೆ ರತ್ನಮಾಲಾ. ಮೊಬೈಲ್​ ಅನ್ನು ಸಾನಿಯಾ ಮನೆಯಲ್ಲೇ ಬಿಟ್ಟಿದ್ದರಿಂದ ಆಸ್ಪತ್ರೆಯಲ್ಲಿ ಆಕೆ ಒಂಟಿಯಾಗಿ ಉಳಿಯುವ ಪರಿಸ್ಥಿತಿ ಬಂತು.

ಸಾನಿಯಾ ಬಳಿ ಹಣ ಇರಲಿಲ್ಲ. ಯುಪಿಐ ಪೇಮೆಂಟ್ ಮಾಡೋಣ ಎಂದರೆ ಮೊಬೈಲ್ ಕೂಡ ಇರಲಿಲ್ಲ. ಹಾಗಿದ್ದರೂ ಕೂಡ ಸಾನಿಯಾ ಆಸ್ಪತ್ರೆಯ ಸಿಬ್ಬಂದಿ ಜತೆ ಜೋರು ಧ್ವನಿಯಲ್ಲಿ ಮಾತನಾಡಿದ್ದಾಳೆ. ಅವಳ ಧಿಮಾಕಿನ ಮಾತನ್ನು ಕಂಡು ಅಲ್ಲಿನ ಸಿಬ್ಬಂದಿ ಬೇಸರಗೊಂಡರು. ಜತೆಗೆ ಇವಳಿಗೆ ಪಾಠ ಕಲಿಸಬೇಕು ಎಂಬ ಹಠಕ್ಕೆ ಬಿದ್ದರು.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

‘ನಾನು ಯಾರು ಅನ್ನೋದು ಗೊತ್ತಾ? ನಾನು ಮನಸ್ಸು ಮಾಡಿದರೆ ಈ ಆಸ್ಪತ್ರೆಯನ್ನು ಖರೀದಿ ಮಾಡಿಬಿಡುತ್ತೇನೆ. ನನ್ನ ಜತೆ ನೀವು ಈ ರೀತಿ ಮಾತಾಡ್ತೀರಲ್ಲ’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಆವಾಜ್ ಹಾಕಿದಳು ಸಾನಿಯಾ. ಆದರೆ, ಸಾನಿಯಾ ಮಾತನ್ನು ಕೇಳುವ ತಾಳ್ಮೆ ಅಲ್ಲಿ ಯಾರಿಗೂ ಇರಲಿಲ್ಲ. ಆಸ್ಪತ್ರೆಯ ಲ್ಯಾಂಡ್​ಲೈನ್​ನಿಂದ ಮನೆಗೆ ಕರೆ ಮಾಡುವ ಅವಕಾಶವನ್ನೂ ಅವಳಿಗೆ ಆಸ್ಪತ್ರೆ ಸಿಬ್ಬಂದಿ ನೀಡಲಿಲ್ಲ. ಹೀಗಾಗಿ ರಾತ್ರಿ ಇಡೀ ಸಾನಿಯಾ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ.

ಇದನ್ನೂ ಓದಿ: ತಾನೇ ತೋಡಿದ ಖೆಡ್ಡಾಗೆ ಬಿದ್ದ ಸಾನಿಯಾ; ಸೊಂಟ, ಹಣೆಗೆ ಬಿತ್ತು ಗಂಭೀರ ಪೆಟ್ಟು

ತಾನು ಧರಿಸಿದ್ದ ಉಂಗುರವನ್ನು ಬೆಳಗ್ಗೆ ಆಸ್ಪತ್ರೆಯಲ್ಲೇ ಅಡವಿಟ್ಟು ಸಾನಿಯಾ ಆಟೋ ಏರಿ ಮನೆಗೆ ಬಂದಿದ್ದಾಳೆ. ಆಟೋ ಡ್ರೈವರ್ ಹಣ ನೀಡುವಂತೆ ಕೇಳಿದ್ದಾನೆ. ಅಲ್ಲಿಯೇ ಬಂದ ಪತಿಯಿಂದ ಪರ್ಸ್ ತೆಗೆದುಕೊಂಡ ಸಾನಿಯಾ ಅದರಿಂದ ಹಣ ತೆಗೆದಿದ್ದಾಳೆ. ‘ಎಷ್ಟು ದುಡ್ಡು ಆಯ್ತು ಅಂತ ಹೇಳು ಕೊಡ್ತೀನಿ. ಒಂದು ಸಾವಿರವೋ ಎರಡು ಸಾವಿರವೋ’ ಎಂದು ಕೇಳುತ್ತಾ ಹಣವನ್ನು ಆಟೋಡ್ರೈವರ್ ಮೇಲೆ ಬೀಸಾಡಿದ್ದಾಳೆ. ಇದಕ್ಕೆ ಸಿಟ್ಟಾದ ಆಟೋ ಚಾಲಕ ಬಿದ್ದ ಹಣವನ್ನು ಎತ್ತಿಕೊಂಡು ಸಾನಿಯಾಗೆ ಬೈದು ಹೋಗಿದ್ದಾನೆ.

ಸಾನಿಯಾಳನ್ನು ರತ್ನಮಾಲಾ ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದಳು. ಇಷ್ಟೆಲ್ಲ ಘಟನೆ ನಡೆಯೋಕೆ, ಅವಮಾನ ಆಗೋಕೆ ರತ್ನಮಾಲಾನೇ ಕಾರಣ ಎಂಬ ಅಭಿಪ್ರಾಯ ಸಾನಿಯಾದ್ದು. ಈ ಕಾರಣಕ್ಕೆ ಮನೆಗೆ ಬಂದ ಸಾನಿಯಾ ರತ್ನಮಾಲಾ ವಿರುದ್ಧ ಸಿಡಿದೇಳಬಹುದು. ಇದಕ್ಕೆ ರತ್ನಮಾಲಾ ಯಾವ ರೀತಿ ಪ್ರತಿಕ್ರಿಯಿಸುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ. ತನ್ನ ಮರೆವಿನಿಂದ ಈ ರೀತಿ ಆಯಿತು ಎಂಬುದು ರತ್ನಮಾಲಾಗೆ ಗೊತ್ತಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.