ತಾನೇ ತೋಡಿದ ಖೆಡ್ಡಾಗೆ ಬಿದ್ದ ಸಾನಿಯಾ; ಸೊಂಟ, ಹಣೆಗೆ ಬಿತ್ತು ಗಂಭೀರ ಪೆಟ್ಟು

ಮತ್ತೊಂದೆಡೆ ರತ್ನಮಾಲಾಳನ್ನು ಕೆಳಗೆ ಬೀಳಿಸೋಕೆ ಹೋಗಿ ಸಾನಿಯಾ ಗಂಭೀರ ಪೆಟ್ಟು ಮಾಡಿಕೊಂಡಿದ್ದಾಳೆ. ಹೌದು, ಅಮ್ಮಮ್ಮ ಮೊಬೈಲ್​ ಕರೆಯಲ್ಲಿ ಬ್ಯುಸಿ ಇದ್ದಳು. ಆಕೆ ಮೆಟ್ಟಿಲು ಇಳಿದು ಬರುವಾಗ ಎಣ್ಣೆ ಹಾಕಿ ಆಕೆಯನ್ನು ಬೀಳಿಸಬೇಕು ಎಂಬುದು ಆಕೆಯ ಆಲೋಚನೆ ಆಗಿತ್ತು.

ತಾನೇ ತೋಡಿದ ಖೆಡ್ಡಾಗೆ ಬಿದ್ದ ಸಾನಿಯಾ; ಸೊಂಟ, ಹಣೆಗೆ ಬಿತ್ತು ಗಂಭೀರ ಪೆಟ್ಟು
ರತ್ನಮಾಲಾ-ಸಾನಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 21, 2022 | 8:55 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ರತ್ನಮಾಲಾ ಪ್ರಮುಖಳು. ಇಡೀ ಧಾರಾವಾಹಿಗೆ ಅವಳ ಪಾತ್ರವೇ ಹೈಲೈಟ್. ಸಾನಿಯಾ ಮಾಡೋ ಪ್ರತಿ ಪ್ಲ್ಯಾನ್​ನ ಫ್ಲಾಪ್ ಮಾಡಿಸುವ ಕೆಲಸ ರತ್ನಮಾಲಾ ಮಾಡುತ್ತಲೇ ಬರ್ತಿದ್ದಾಳೆ. ಇನ್ನು ಸಾನಿಯಾ ಮಾಡುವ ಕೆಲ ಕೆಟ್ಟ ಕೆಲಸವನ್ನು ನೋಡಿದ್ದೂ ನೋಡದಂತೆ ಇರ್ತಾಳೆ ರತ್ನಮಾಲಾ. ಅತ್ತು-ಕರೆದು ತೀಡಿದ್ದಕ್ಕೆ ಸಾನಿಯಾಗೆ ಎಂಡಿ ಪಟ್ಟ ನೀಡಿದ್ಲು ರತ್ನಮಾಲಾ. ಸಾನಿಯಾ ತನ್ನನ್ನು ಕೊಲ್ಲೋಕೆ ಪ್ಲ್ಯಾನ್ ರೂಪಿಸಿರುವ ವಿಚಾರ ಗೊತ್ತಿದ್ದ ಹೊರತಾಗಿಯೂ ಸುಮ್ಮನೆ ಇದ್ದಾಳೆ ರತ್ನಮಾಲಾ. ಈಗ ಆಕೆಯನ್ನು ಕೆಲಸದಿಂದ ತೆಗೆಯೋಕೆ ರತ್ನಮಾಲಾ (Ratnamala) ನಿರ್ಧಾರ ಮಾಡಿದಂತಿದೆ. ಈ ಮಧ್ಯೆ ಸಾನಿಯಾಗೆ ತಾನೇ ಮಾಡಿದ ಪ್ಲ್ಯಾನ್ ಮುಳುವಾಗಿದೆ.

ಹರ್ಷನನ್ನು ಭುವಿ ಮದುವೆ ಆಗಿದ್ದಾಳೆ. ಇವರ ಮದುವೆ ಬಗ್ಗೆ ಸಾನಿಯಾಗೆ ಎಲ್ಲಿಲ್ಲದ ಅಸಮಾಧಾನ. ರತ್ನಮಾಲಾ ಸಂಸ್ಥೆಗೆ ಭುವಿ ಎಂಡಿ ಎಂಬ ವಿಚಾರವನ್ನು ರತ್ನಮಾಲಾ ಈ ಮೊದಲೇ ಘೋಷಣೆ ಮಾಡಿದ್ದಳು. ಇದನ್ನು ಸಾನಿಯಾ ಕದ್ದು ಕೇಳಿದ್ದಾಳೆ. ಆಗಿನಿಂದ ಆಕೆಯ ತಲೆಯಲ್ಲಿ ಬೇರೆಯದೇ ಆಲೋಚ್ನೆ ಓಡ್ತಿದೆ. ಹೇಗಾದ್ರೂ ಮಾಡಿ ತನ್ನ ಎಂಡಿ ಸ್ಥಾನ ಉಳಿಸಿಕೊಳ್ಳೇಬೇಕು ಎಂಬ ಹಠಕ್ಕೆ ಬಿದ್ದಿದ್ದಾಳೆ. ಮತ್ತೊಂದೆಡೆ ಸಾನಿಯಾ ಎಂಡಿ ಪಟ್ಟ ಹೋಗೋದು ಖಚಿತವಾದಂತಿದೆ.

ಸಾನಿಯಾ ವಿಚಾರವಾಗಿ ರತ್ನಮಾಲಾ ಜತೆ ಭುವಿ ಮಾತನಾಡಿದ್ದಾಳೆ. ‘ಸಾನಿಯಾ ಕೂಡ ನಿಮ್ಮ ಸೊಸೆ. ಆದರೆ, ನನಗೆ ಕೊಟ್ಟಷ್ಟು ಪ್ರಾಮುಖ್ಯತೆ ಅವರಿಗೆ ನೀವು ಕೊಡ್ತಿಲ್ಲವಲ್ಲ’ ಎಂಬ ಮಾತನ್ನು ರತ್ನಮಾಲಾ ಎದುರು ಪ್ರಸ್ತಾಪ ಮಾಡಿದ್ದಾಳೆ ಭುವಿ. ಇದನ್ನು ಕೇಳುತ್ತಿದ್ದಂತೆ ರತ್ನಮಾಲಾ ಸಖತ್ ಗಂಭೀರಳಾಗಿದ್ದಾಳೆ. ‘ನಾನು ಸಂಸ್ಥೆಯನ್ನು ಮಗುವಿನಂತೆ ಕಟ್ಟು ಬೆಳ್ಸಿದ್ದೀನಿ. ಅದನ್ನ ಯಾರ್ಯಾದೋ ಕೈಗೆ ಕೊಡೋಕೆ ನಂಗೆ ಇಷ್ಟ ಇಲ್ಲ. ಈ ಕಾರಣಕ್ಕೆ ಸಾನಿಯಾನ ಕೆಲಸದಿಂದ ತೆಗೆಯೋಕೆ ಸಿದ್ಧತೆ ನಡೆದಿದೆ’ ಎಂಬ ಮಾತನ್ನು ರತ್ನಮಾಲಾ ಹೇಳಿದ್ದಾಳೆ. ಈ ಮಾತು ಕೇಳಿ ಭುವಿ ಶಾಕ್ ಆದಳು. ಆದರೆ, ರತ್ನಮಾಲಾ ಯಾವುದೇ ಚಿಂತೆ ಇಲ್ಲದೆ ನಿದ್ರಿಸಿದಳು.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಮತ್ತೊಂದೆಡೆ ರತ್ನಮಾಲಾಳನ್ನು ಕೆಳಗೆ ಬೀಳಿಸೋಕೆ ಹೋಗಿ ಸಾನಿಯಾ ಗಂಭೀರ ಪೆಟ್ಟು ಮಾಡಿಕೊಂಡಿದ್ದಾಳೆ. ಹೌದು, ಅಮ್ಮಮ್ಮ ಮೊಬೈಲ್​ ಕರೆಯಲ್ಲಿ ಬ್ಯುಸಿ ಇದ್ದಳು. ಆಕೆ ಮೆಟ್ಟಿಲು ಇಳಿದು ಬರುವಾಗ ಎಣ್ಣೆ ಹಾಕಿ ಆಕೆಯನ್ನು ಬೀಳಿಸಬೇಕು ಎಂಬುದು ಆಕೆಯ ಆಲೋಚನೆ ಆಗಿತ್ತು. ಆದರೆ, ಈ ಪ್ಲ್ಯಾನ್ ಉಲ್ಟಾ ಹೊಡೆದಿದೆ. ಎಣ್ಣೆ ಹಾಕಿದ ಜಾಗದಲ್ಲಿ ತಾನೇ ಓಡಿ ಹೋಗಿದ್ದರಿಂದ ಆಕೆ ಕಾಲು ಜಾರಿ ಬಿದ್ದಿದ್ದಾಳೆ. ಇದರಿಂದ ಆಕೆಯ ಹಣೆಗೆ ತೀವ್ರವಾಗಿ ಪೆಟ್ಟಾಗಿದೆ. ಒಟ್ಟಿನಲ್ಲಿ ತಾನೇ ತೋಡಿದ ಹೊಂಡದಲ್ಲಿ ಆಕೆ ಬಿದ್ದಿದ್ದಾಳೆ. ಈ ಕಾರಣದಿಂದ ಆಕೆ ಆಸ್ಪತ್ರೆ ಸೇರೋದು ಪಕ್ಕಾ ಆಗಿದೆ. ಧಾರಾವಾಹಿ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಈಗ ಹೆಚ್ಚು ಕಾಣಿಸಿಕೊಳ್ಳದೇ ಇರಲು ಇದೇ ಕಾರಣ

‘ಕನ್ನಡತಿ’ ಧಾರಾವಾಹಿ ಈಗಾಗಲೇ 700 ಶೋಗಳನ್ನು ಪೂರ್ಣಗೊಳಿಸಿದೆ. ಮುಂದಿನ ದಿನಗಳಲ್ಲಿ ಭುವಿ ಕೈಗೆ ಅಧಿಕಾರ ಹಸ್ತಾಂತರ ಆಗಬಹುದು. ಆಗ, ಸಾನಿಯಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡ್ಬೇಕಿದೆ.

ಶ್ರೀಲಕ್ಷ್ಮಿ ಎಚ್.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ