‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ ಕಪ್​ನಲ್ಲಿ ಪುನೀತ್ ರಾಜ್​ಕುಮಾರ್; ಫಿನಾಲೆ ಗೆದ್ದವರಿಗೆ ಸಿಗಲಿದೆ ವಿಶೇಷ ಬಹುಮಾನ

ಅನೇಕ ರಿಯಾಲಿಟಿ ಶೋಗಳಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೂ ಪುನೀತ್ ಅವರನ್ನು ನೆನೆಯಲಾಗಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ ಕಪ್​ನಲ್ಲಿ ಪುನೀತ್ ರಾಜ್​ಕುಮಾರ್; ಫಿನಾಲೆ ಗೆದ್ದವರಿಗೆ ಸಿಗಲಿದೆ ವಿಶೇಷ ಬಹುಮಾನ
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ 6’ ಕಪ್​ನಲ್ಲಿ ಪುನೀತ್ ರಾಜ್​ಕುಮಾರ್
TV9kannada Web Team

| Edited By: Rajesh Duggumane

Sep 21, 2022 | 6:30 AM

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ ಆರನೇ ಸೀಸನ್ ಸಾಕಷ್ಟು ಮನರಂಜನೆ ನೀಡಿದೆ. ಈ ಬಾರಿ ಶಿವರಾಜ್​ಕುಮಾರ್ (Shivarajkumar) ಅವರು ಈ ಶೋಗೆ ಜಡ್ಜ್​ ಆಗಿ ಬಂದಿದ್ದರು. ಈ ಕಾರಣದಿಂದಲೂ ಶೋಗೆ ಹೊಸ ಕಳೆ ಬಂದಿತ್ತು. ಆರಂಭವಾದ ಶೋಗಳು ಒಂದಲ್ಲಾ ಒಂದು ದಿನ ಪೂರ್ಣಗೊಳ್ಳಲೇಬೇಕು. ಅದೇ ರೀತಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ (Dance Karnataka Dance 6) ಮುಗಿಯುವ ಹಂತಕ್ಕೆ ಬಂದಿದೆ. ಇದೇ ಶನಿವಾರ ಫಿನಾಲೆ ನಡೆಯಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಈ ಸೀಸನ್ ಗೆದ್ದವರಿಗೆ ಅಪ್ಪು ಮೂರ್ತಿಯ ಕಪ್ ಸಿಗಲಿದೆ.

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ವರ್ಷ ಕಳೆಯುತ್ತಾ ಬಂದಿದೆ. ಆದರೂ ಅವರಿಲ್ಲ ಎಂಬ ನೋವು ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಹೀಗಾಗಿ, ಎಲ್ಲ ಕಡೆಗಳಲ್ಲಿ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಅನೇಕ ರಿಯಾಲಿಟಿ ಶೋಗಳಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೂ ಪುನೀತ್ ಅವರನ್ನು ನೆನೆಯಲಾಗಿದೆ.

ಪುನೀತ್​ ರಾಜ್​ಕುಮಾರ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರು. ಅವರು ಸ್ಟೆಪ್ ಹಾಕುತ್ತಿದ್ದ ರೀತಿ ಅನೇಕರಿಗೆ ಇಷ್ಟವಾಗಿತ್ತು. ಈ ಕಾರಣಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ರ ವಿಜೇತರಿಗೆ ಅಪ್ಪು ಇರುವ ಟ್ರೋಫಿ ಸಿಗಲಿದೆ. ಶಿವರಾಜ್​ಕುಮಾರ್ ಅವರು ಈ ಟ್ರೋಫಿಯನ್ನು ಈ ಮೊದಲು ಅನಾವರಣ ಮಾಡಿದ್ದರು. ಫಿನಾಲೆಗೂ ಮುನ್ನ ಮತ್ತೊಮ್ಮೆ ಈ ಟ್ರೋಫಿಯನ್ನು ತೋರಿಸಲಾಗಿದೆ.

ಸೆಪ್ಟೆಂಬರ್ 21, ಬುಧವಾರ ಸಂಜೆ 5.30ಕ್ಕೆ  ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ಫಿನಾಲೆ ನಡೆಯಲಿದೆ. ಶನಿವಾರ ಇದು ಟಿವಿಯಲ್ಲಿ ಪ್ರಸಾರ ಕಾಣಲಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ ಸೀಸನ್​ 6 ಗ್ರ್ಯಾಂಡ್ ಫಿನಾಲೆ. ಪವರ್ ಸ್ಟಾರ್ ಟ್ರೋಫಿ ಗೆದ್ದು ಹೃದಯ ತುಂಬಿಕೊಳ್ಳೋಕೆ ಡ್ಯಾನ್ಸ್ ಪ್ರತಿಭೆಗಳ ರೋಚಕ ಹಣಾಹಣಿ. ಇದೇ ಶನಿವಾರ ಸಂಜೆ 6ಕ್ಕೆ’ ಎಂದು ಜೀ ಕನ್ನಡ ವಾಹಿನಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ: Shiva 143: ‘ಇವನು ಜೂನಿಯರ್​ ಶಿವಣ್ಣ ಆಗೋದು ಬೇಡ’; ಧೀರೇನ್​ ನಟನೆಗೆ ಶಿವರಾಜ್​ಕುಮಾರ್​ ಪ್ರತಿಕ್ರಿಯೆ

ಇದನ್ನೂ ಓದಿ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ನಿಂದ’ ಸಾಕಷ್ಟು ಡ್ಯಾನ್ಸರ್​ಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಪಡಿಸಲು ಅವಕಾಶ ಸಿಕ್ಕಿದೆ. ಈ ವೇದಿಕೆ ಮೇಲೆ ಸಾಕಷ್ಟು ಮಂದಿ ತಮ್ಮ ಕಲೆಯನ್ನು ತೋರಿಸುತ್ತಿದ್ದಾರೆ. ಶಿವರಾಜ್​ಕುಮಾರ್ ಅವರು ಈ ರಿಯಾಲಿಟಿ ಶೋಗೆ ಜಡ್ಜ್ ಆಗಿರುವುದು ಹೊಸ ಹುರುಪು ಸಿಕ್ಕಂತೆ ಆಗಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada