Shiva 143: ‘ಇವನು ಜೂನಿಯರ್​ ಶಿವಣ್ಣ ಆಗೋದು ಬೇಡ’; ಧೀರೇನ್​ ನಟನೆಗೆ ಶಿವರಾಜ್​ಕುಮಾರ್​ ಪ್ರತಿಕ್ರಿಯೆ

Dheeren Ramkumar | Shivarajkumar: ಧೀರೇನ್​ ರಾಮ್​ಕುಮಾರ್​ ನಟನೆಯ ‘ಶಿವ 143’ ಸಿನಿಮಾವನ್ನು ಶಿವರಾಜ್​ಕುಮಾರ್​ ನೋಡಿದ್ದಾರೆ. ಬಳಿಕ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

TV9kannada Web Team

| Edited By: Madan Kumar

Aug 29, 2022 | 8:44 AM

ರಾಮ್​ಕುಮಾರ್​ ಮತ್ತು ಪೂರ್ಣಿಮಾ ದಂಪತಿಯ ಪುತ್ರ ಧೀರೇನ್​ ರಾಮ್​ಕುಮಾರ್​ (Dheeren Ramkumar) ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ‘ಶಿವ 143’ (Shiva 143) ಬಿಡುಗಡೆ ಆಗಿದೆ. ಡಾ. ರಾಜ್​ಕುಮಾರ್​ ಕುಟುಂಬದಿಂದ ಬಂದಿರುವ ಈ ಹೊಸ ಹೀರೋಗೆ ಜನಮೆಚ್ಚುಗೆ ಸಿಗುತ್ತಿದೆ. ಅವರ ನಟನೆಯನ್ನು ನೋಡಿದ ಕೆಲವರು ‘ಜೂನಿಯರ್​ ಶಿವಣ್ಣ’ ಎಂದು ಬಣ್ಣಿಸುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ಶಿವರಾಜ್​ಕುಮಾರ್​ (Shivarajkumar) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಅವನು ಜೂನಿಯರ್​ ಶಿವಣ್ಣ ಆಗೋದು ಬೇಡ. ಧೀರೇನ್​ ಆಗಿಯೇ ಗುರುತಿಸಿಕೊಳ್ಳಲಿ. ಅವನು ನಮ್ಮ ಕುಟುಂಬದ ಯಾರನ್ನೂ ಕಾಪಿ ಮಾಡಿಲ್ಲ’ ಎಂದು ಶಿವಣ್ಣ ಹೇಳಿದ್ದಾರೆ. ‘ಶಿವ 143’ ಚಿತ್ರ ಹೇಗಿದೆ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

 

Follow us on

Click on your DTH Provider to Add TV9 Kannada