Lakshana: ಅಣ್ಣಂದಿರ ಬುದ್ಧಿ ಮಾತಿನಿಂದಾದರೂ ಪೊಲೀಸರಿಗೆ ಶರಣಾಗುತ್ತಾನಾ ಮೌರ್ಯ?
ಅಣ್ಣಂದಿರ ಬುದ್ಧಿ ಮಾತಿಗಾದರೂ ಕರಗಿ ಮೌರ್ಯ ಪೋಲಿಸರಿಗೆ ಶರಣಾಗುತ್ತಾನಾ ಅಥವಾ ತನ್ನದೇನೂ ತಪ್ಪಿಲ್ಲ, ನಕ್ಷತ್ರಳಿಗೆ ಇನ್ನೂ ತೊಂದರೆ ಕೊಡುತ್ತೇನೆ ಎಂದು ಅಲ್ಲಿಂದ ಓಡಿಹೋಗುತ್ತಾನಾ ಅಂತ ಮುಂದೆ ಕಾದು ನೋಡಬೇಕಾಗಿದೆ.
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಲಕ್ಷಣ ಸೀರಿಯಲ್ ತನ್ನ ರೋಚಕ ಕಥೆಯಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಕಥಾನಾಯಕಿ ನಕ್ಷತ್ರಳ ಪಾಲಿಗೆ ಭೂಪತಿಯ ತಮ್ಮ ಮೌರ್ಯ ವೈರಿಯಾಗಿದ್ದಾನೆ. ನಕ್ಷತ್ರಳನ್ನು ಸಾಯಿಸುವ ಉದ್ದೇಶವನ್ನಿಟ್ಟುಕೊಂಡು ಆಕೆಗೆ ಅನೇಕ ಬಾರಿ ಅಪಾಯ ತಂದೊಡ್ಡಿದ್ದಾನೆ. ಈ ಮೌರ್ಯನ ಆಟಕ್ಕೆ ಹೇಗಾದರೂ ತೆರೆ ಎಳೆಯಬೇಕು ಎಂಬ ನಿಟ್ಟಿನಲ್ಲಿ ಭೂಪತಿ ನಕ್ಷತ್ರಳ ಕಿಡ್ನಾಪ್ ನಾಟಕವನ್ನು ಆಡಬೇಕಾಗುತ್ತದೆ. ಇದಕ್ಕೆ ಸಾಥ್ ನೀಡಿದವನೇ ಭೂಪತಿಯ ಅಣ್ಣ ಶೌರ್ಯ. ಇವರಿಬ್ಬರ ಈ ಪ್ಯಾನ್‌ನಿಂದ ಮೌರ್ಯ ಬಲೆಗೆ ಬಿದ್ದ. ಚಂದ್ರ ಶೇಖರ್ ಮೇಲಿನ ದ್ವೇಷಕ್ಕೆ ನಕ್ಷತ್ರಳನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಪಟ್ಟು ಹಿಡಿದು ನಿಂತ ಸಂದರ್ಭದಲ್ಲಿ ಅವರ ತಾಯಿ ಶಕುಂತಳಾ ದೇವಿ ಅಲ್ಲಿಗೆ ಬಂದು ಮೌರ್ಯನ ಕಪಾಳಕ್ಕೆ ಎರಡು ಬಾರಿಸಿ ನನ್ನ ಮಗನಾಗಿ ಈ ರೀತಿ ಕೆಟ್ಟ ಕೆಲಸ ಮಾಡಿದ್ದೀಯಾ ನಿನ್ನನ್ನು ನಾನು ಕ್ಷಮಿಸುವುದಿಲ್ಲ, ದಯವಿಟ್ಟು ಪೋಲಿಸರಿಗೆ ಸೆರೆಂಡರ್ ಆಗಿ ಬಿಡು ಎಂದು ಹೇಳುತ್ತಾರೆ.
ತಾಯಿಯ ಮಾತಿಗೂ ಡೊಂಟ್ ಕೇರ್ ಎನ್ನದ ಮೌರ್ಯ ತಾನು ಮಾಡಿದ್ದೇ ಸರಿ, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ನನ್ನ ಅಮ್ಮನಿಗೆ ಅನ್ಯಾಯ ಮಾಡಿದ ಆ ಚಂದ್ರಶೇಖರ್‌ನನ್ನು ಸಮ್ಮನೆ ಬಿಡಲ್ಲ, ಅವನ ಮಗಳ ಸಾವನ್ನು ಕಂಡು ವಿಲ ವಿಲ ಒದ್ದಾಡಬೇಕು. ಆ ಸಿ.ಎಸ್ ನರಳುವುದನ್ನು ನೋಡಿ ನಾನು ಖುಷಿ ಪಡಬೇಕು ಎಂದು ಹೇಳಿ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ತಪ್ಪಾ ಎಂದು ತನ್ನ ತಾಯಿಗೆ ಮರು ಪ್ರಶ್ನೆಯನ್ನು ಮಾಡುತ್ತಾನೆ.
ಹೇಗಿದ್ದರೂ ಪೋಲಿಸರಿಗೆ ಸರೆಂಡರ್ ಆಗಬೇಕಲ್ವಾ, ನಕ್ಷತ್ರಳನ್ನು ಸಾಯಿಸಿಯೇ ಜೈಲಿಗೆ ಹೋಗುತ್ತೇನೆ ಎಂದು ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ಆಕೆಯ ಮೇಲೆ ಎಸೆಯಲು ಬರುತ್ತಾನೆ. ಆ ಸಂದರ್ಭದಲ್ಲಿ ಭೂಪತಿ ಮೌರ್ಯನ ಕಪಾಳಕ್ಕೆ ಬಾರಿಸಿ ಚಿಕ್ಕಂದಿನಿಂದಲೂ ಅಣ್ಣನ ಪ್ರೀತಿ ನೋಡಿದ್ದೀಯಾ ಈಗ ಅಣ್ಣನ ಕೋಪನೂ ನಿನಗೆ ಕಾಣುತ್ತೇ , ನಿನ್ನನ್ನು ಸರಿ ದಾರಿಗೆ ತರಲೂ ನಾವೇ ನಿನಗೆ ಪಾಠ ಕಲಿಸುತ್ತೇವೆ ಎಂದು ಹೇಳಿ ಶಕುಂತಲಾ ದೇವಿ, ನಕ್ಷತ್ರ ಹಾಗೂ ಶ್ವೇತಾಳನ್ನು ಅಲ್ಲಿಂದ ಹೊರಗಡೆ ಕಳುಹಿಸುತ್ತಾನೆ. ಈಗ ಹೇಗೆ ನಿನ್ನ ಅಣ್ಣಂದಿರ ಕೈಯಿಂದ ತಪ್ಪಿಸಿಕೊಳ್ಳುತ್ತೀಯಾ ನಾನು ನೋಡುತ್ತೇನೆ ಎಂದು ಭೂಪತಿ ಮೌರ್ಯನಿಗೆ ಚಾಲೆಂಜ್ ಹಾಕುತ್ತಾನೆ.
ಇತ್ತ ಕಡೆ ಚಂದ್ರಶೇಖರ್‌ಗೂ ವಿಷಯ ತಿಳಿದು ಮೌರ್ಯ ಇರುವ ಜಾಗಕ್ಕೆ ಪೋಲಿಸರನ್ನು ಬರುವಂತೆ ಹೇಳಿದ್ದಾರೆ. ಅಣ್ಣಂದಿರ ಬುದ್ಧಿ ಮಾತಿಗಾದರೂ ಕರಗಿ ಮೌರ್ಯ ಪೋಲಿಸರಿಗೆ ಶರಣಾಗುತ್ತಾನಾ ಅಥವಾ ತನ್ನದೇನೂ ತಪ್ಪಿಲ್ಲ, ನಕ್ಷತ್ರಳಿಗೆ ಇನ್ನೂ ತೊಂದರೆ ಕೊಡುತ್ತೇನೆ ಎಂದು ಅಲ್ಲಿಂದ ಓಡಿಹೋಗುತ್ತಾನಾ ಅಂತ ಮುಂದೆ ಕಾದು ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 12:00 pm, Wed, 21 September 22