‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಈಗ ಹೆಚ್ಚು ಕಾಣಿಸಿಕೊಳ್ಳದೇ ಇರಲು ಇದೇ ಕಾರಣ
ಸಾರಾ ಅಣ್ಣಯ್ಯ ಅವರು ವರುಧಿನಿ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಏರಿಳಿತ ಇದೆ. ಅದನ್ನು ಅವರು ಸರಿಯಾಗಿ ನಿರ್ವಹಿಸುತ್ತಿದ್ದಾರೆ.
Updated on: Sep 15, 2022 | 5:15 PM

ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ವರುಧಿನಿ ಎಂದೇ ಫೇಮಸ್. ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ ಸಾಕಷ್ಟು ಗಮನ ಸೆಳೆಯುತ್ತಿದೆ. ಈಗ ಅವರು ಧಾರಾವಾಹಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಸುತ್ತಾಟ ಆರಂಭಿಸಿದ್ದಾರೆ.

ಸಾರಾ ಅಣ್ಣಯ್ಯ ಅವರು ವರುಧಿನಿ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಏರಿಳಿತ ಇದೆ. ಅದನ್ನು ಅವರು ಸರಿಯಾಗಿ ನಿರ್ವಹಿಸುತ್ತಿದ್ದಾರೆ.

ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಸಾರಾ ಈಗ ಲೇಹ್-ಲಡಾಕ್ ಟ್ರಿಪ್ನಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಅವರು ಸುತ್ತಾಟದಲ್ಲಿ ಇರುವ ಕಾರಣ ಸಾರಾ ಪಾತ್ರ ತೆರೆಮೇಲೆ ಅಷ್ಟಾಗಿ ಕಾಣಿಸುತ್ತಿಲ್ಲ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂಬ ಹಠಕ್ಕೆ ಸಾರಾ ಇಳಿದಿದ್ದಾರೆ.