AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾದಿನಿ ಜತೆ ವಾದ ಮಾಡುವ ಮುನ್ನ ಈ ಸಂಗತಿಗಳು ನಿಮ್ಮ ಮನದಲ್ಲಿರಲಿ

ಸಂಬಂಧಗಳೆಂದರೆ ಹಾಗೆ ಒಂದೇ ರೀತಿ ಇರುವುದಿಲ್ಲ, ಹಾಗೆಯೇ ಮದುವೆಗೂ ಮುನ್ನ ಅತ್ತಿಗೆಯನ್ನು ಪ್ರೀತಿ ಮಾಡುವ ನಾದಿನಿ ಮದುವೆಯಾದ ತಕ್ಷಣ ನಿಮ್ಮನ್ನು ದ್ವೇಷಿಸಲು ಶುರುಮಾಡಿದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗೆಯೇ ಅತ್ತಿಗೆ ಕೂಡ ಮದುವೆಯ ಬಳಿಕ ಬದಲಾಗಬಹುದು.

TV9 Web
| Updated By: ನಯನಾ ರಾಜೀವ್

Updated on: Sep 15, 2022 | 3:44 PM

ಸಂಬಂಧಗಳೆಂದರೆ ಹಾಗೆ ಒಂದೇ ರೀತಿ ಇರುವುದಿಲ್ಲ, ಹಾಗೆಯೇ ಮದುವೆಗೂ ಮುನ್ನ ಅತ್ತಿಗೆಯನ್ನು ಪ್ರೀತಿ ಮಾಡುವ ನಾದಿನಿ ಮದುವೆಯಾದ ತಕ್ಷಣ ನಿಮ್ಮನ್ನು ದ್ವೇಷಿಸಲು ಶುರುಮಾಡಿದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗೆಯೇ ಅತ್ತಿಗೆ ಕೂಡ ಮದುವೆಯ ಬಳಿಕ ಬದಲಾಗಬಹುದು.

ಸಂಬಂಧಗಳೆಂದರೆ ಹಾಗೆ ಒಂದೇ ರೀತಿ ಇರುವುದಿಲ್ಲ, ಹಾಗೆಯೇ ಮದುವೆಗೂ ಮುನ್ನ ಅತ್ತಿಗೆಯನ್ನು ಪ್ರೀತಿ ಮಾಡುವ ನಾದಿನಿ ಮದುವೆಯಾದ ತಕ್ಷಣ ನಿಮ್ಮನ್ನು ದ್ವೇಷಿಸಲು ಶುರುಮಾಡಿದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗೆಯೇ ಅತ್ತಿಗೆ ಕೂಡ ಮದುವೆಯ ಬಳಿಕ ಬದಲಾಗಬಹುದು.

1 / 5
ನಿಮ್ಮಂತೆಯೇ ಆಕೆ ಕೂಡ ಒಂದು ಮನೆಯ ಮಗಳು ಎಂಬುದು ಮರೆಯಬೇಡಿ
ನಾವು ನಮ್ಮ ತವರು ಮನೆಗೆ ಹೋದಾಗ ಮತ್ತೆ ಮಕ್ಕಳಾಗಿಬಿಡುತ್ತೀವಿ. ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ನಮಗೆ ಬೇಕಾದ ಬಟ್ಟೆಗಳನ್ನು ಧರಿಸುವುದು, ಇಂಥದ್ದೇ ಅಡುಗೆಯಾಗಬೇಕು ಎಂದು ಅಮ್ಮನಿಗೆ ಆರ್ಡರ್ ಮಾಡುವುದು. ಆದರೆ ಗಂಡನ ಮನೆಯಲ್ಲಿ ಹಾಗಿರುವುದಿಲ್ಲ ಏಕೆ.  ನಾದಿನಿಗೆ ಸಿಗುವ ಸ್ವಾತಂತ್ರ್ಯ ನಿಮಗೆ ಸಿಗುವುದಿಲ್ಲ, ನಿಮ್ಮನ್ನು ಮಗಳೆಂದು ಭಾವಿಸುವುದಿಲ್ಲ. ಆದರೆ ನಾದಿನಿಯು  ಕೂಡ ನನ್ನ ರೀತಿಯೇ, ಒಂದು ಮನೆಯ ಮಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ನಿಮ್ಮಂತೆಯೇ ಆಕೆ ಕೂಡ ಒಂದು ಮನೆಯ ಮಗಳು ಎಂಬುದು ಮರೆಯಬೇಡಿ ನಾವು ನಮ್ಮ ತವರು ಮನೆಗೆ ಹೋದಾಗ ಮತ್ತೆ ಮಕ್ಕಳಾಗಿಬಿಡುತ್ತೀವಿ. ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ನಮಗೆ ಬೇಕಾದ ಬಟ್ಟೆಗಳನ್ನು ಧರಿಸುವುದು, ಇಂಥದ್ದೇ ಅಡುಗೆಯಾಗಬೇಕು ಎಂದು ಅಮ್ಮನಿಗೆ ಆರ್ಡರ್ ಮಾಡುವುದು. ಆದರೆ ಗಂಡನ ಮನೆಯಲ್ಲಿ ಹಾಗಿರುವುದಿಲ್ಲ ಏಕೆ. ನಾದಿನಿಗೆ ಸಿಗುವ ಸ್ವಾತಂತ್ರ್ಯ ನಿಮಗೆ ಸಿಗುವುದಿಲ್ಲ, ನಿಮ್ಮನ್ನು ಮಗಳೆಂದು ಭಾವಿಸುವುದಿಲ್ಲ. ಆದರೆ ನಾದಿನಿಯು ಕೂಡ ನನ್ನ ರೀತಿಯೇ, ಒಂದು ಮನೆಯ ಮಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

2 / 5
ನಿಮ್ಮ ಪತಿ ಸಿಟ್ಟಾಗಬಹುದು
ಅವರು ನಿಮ್ಮ  ಸಂಗಾತಿಯಾಗಿರಬಹುದು, ನಿಮ್ಮ ನಿಮ್ಮ ಜೀವನದ ಪ್ರೀತಿಯಾಗಿರಬಹುದು ಆದರೆ ಅವನು ಅವಳ ಸಹೋದರನೂ ಆಗಿದ್ದಾನೆ! ನಿಮ್ಮ ಸ್ವಂತ ಒಡಹುಟ್ಟಿದವರ ಮೇಲೆ ಯಾರಾದರೂ ಕಿರುಚಲು ಪ್ರಾರಂಭಿಸಿದರೆ ನೀವು ಅದನ್ನು ಇಷ್ಟಪಡುತ್ತೀರಾ? ಈ ಸನ್ನಿವೇಶದಲ್ಲಿ ಉತ್ತಮ ಪರಿಹಾರವೆಂದರೆ ನೀವು ಶಾಂತವಾಗಿರುವುದು, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದು ಮತ್ತು ಅದು ಕೆಲಸ ಮಾಡದಿದ್ದರೆ, ನಿಮ್ಮ ಪತಿಯೊಂದಿಗೆ ಮಾತನಾಡಿ, ಬಹುಶಃ ನೀವು ಅವಳನ್ನು ಇನ್ನೊಂದು ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡಬಹುದು. ಮಧ್ಯಪ್ರವೇಶಿಸಲು ಅವನನ್ನು ಕೇಳಬೇಡಿ.

ನಿಮ್ಮ ಪತಿ ಸಿಟ್ಟಾಗಬಹುದು ಅವರು ನಿಮ್ಮ ಸಂಗಾತಿಯಾಗಿರಬಹುದು, ನಿಮ್ಮ ನಿಮ್ಮ ಜೀವನದ ಪ್ರೀತಿಯಾಗಿರಬಹುದು ಆದರೆ ಅವನು ಅವಳ ಸಹೋದರನೂ ಆಗಿದ್ದಾನೆ! ನಿಮ್ಮ ಸ್ವಂತ ಒಡಹುಟ್ಟಿದವರ ಮೇಲೆ ಯಾರಾದರೂ ಕಿರುಚಲು ಪ್ರಾರಂಭಿಸಿದರೆ ನೀವು ಅದನ್ನು ಇಷ್ಟಪಡುತ್ತೀರಾ? ಈ ಸನ್ನಿವೇಶದಲ್ಲಿ ಉತ್ತಮ ಪರಿಹಾರವೆಂದರೆ ನೀವು ಶಾಂತವಾಗಿರುವುದು, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದು ಮತ್ತು ಅದು ಕೆಲಸ ಮಾಡದಿದ್ದರೆ, ನಿಮ್ಮ ಪತಿಯೊಂದಿಗೆ ಮಾತನಾಡಿ, ಬಹುಶಃ ನೀವು ಅವಳನ್ನು ಇನ್ನೊಂದು ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡಬಹುದು. ಮಧ್ಯಪ್ರವೇಶಿಸಲು ಅವನನ್ನು ಕೇಳಬೇಡಿ.

3 / 5
ನಿಮಗೆ ಕೋಪ ಬರುವಂತಹ ಮಾತನ್ನಾಡಬಹುದು
ಆಕೆಯ ಮನೆಯ ಮುದ್ದು ಮಗಳಾಗಿರುವುದರಿಂದ, ನಿಮ್ಮೆಡೆಗೆ ಬಾಣವನ್ನು ತಿರುಗಿಸುವ ಸಾಧ್ಯತೆ ಇರುತ್ತದೆ. ಆಕೆ ತನ್ನ ಕೋಣೆಗೆ ಹೋಗಿ ಕೂಗಬಹುದು, ವಸ್ತುಗಳನ್ನು ಎಸೆಯಬಹುದು, ಅಳಬಹುದು. ಆದರೆ ನೀವು ಶಾಂತವಾಗಿರಬೇಕು.

ನಿಮಗೆ ಕೋಪ ಬರುವಂತಹ ಮಾತನ್ನಾಡಬಹುದು ಆಕೆಯ ಮನೆಯ ಮುದ್ದು ಮಗಳಾಗಿರುವುದರಿಂದ, ನಿಮ್ಮೆಡೆಗೆ ಬಾಣವನ್ನು ತಿರುಗಿಸುವ ಸಾಧ್ಯತೆ ಇರುತ್ತದೆ. ಆಕೆ ತನ್ನ ಕೋಣೆಗೆ ಹೋಗಿ ಕೂಗಬಹುದು, ವಸ್ತುಗಳನ್ನು ಎಸೆಯಬಹುದು, ಅಳಬಹುದು. ಆದರೆ ನೀವು ಶಾಂತವಾಗಿರಬೇಕು.

4 / 5
ಆಕೆಗೆ ನಿಮಗಿಂತಲೂ ಅಸುರಕ್ಷತೆಯ ಭಾವ ಕಾಡುತ್ತಿರಬಹುದು
ಆಕೆ ಹುಟ್ಟಿದಾಗಿನಿಂದ ಇಲ್ಲಿಯೇ ಇದ್ದವಳು, ಮನೆಯವರೆಲ್ಲರೂ ಮುದ್ದು ಮಾಡಿ ಬೆಳೆಸಿರುತ್ತಾರೆ, ಅತ್ತಿಗೆ ಬಂದ ಮೇಲೆ ತನ್ನನ್ನು ದೂರವಿಟ್ಟರೆ ಎನ್ನುವ ಭಾವ ಆಕೆಯನ್ನು ಕಾಡುತ್ತಿರುತ್ತದೆ, ಹಾಗಾಗಿ ಅಸುರಕ್ಷತೆಯ ಭಾವ ಆಕೆಗಿರಬಹುದು.

ಆಕೆಗೆ ನಿಮಗಿಂತಲೂ ಅಸುರಕ್ಷತೆಯ ಭಾವ ಕಾಡುತ್ತಿರಬಹುದು ಆಕೆ ಹುಟ್ಟಿದಾಗಿನಿಂದ ಇಲ್ಲಿಯೇ ಇದ್ದವಳು, ಮನೆಯವರೆಲ್ಲರೂ ಮುದ್ದು ಮಾಡಿ ಬೆಳೆಸಿರುತ್ತಾರೆ, ಅತ್ತಿಗೆ ಬಂದ ಮೇಲೆ ತನ್ನನ್ನು ದೂರವಿಟ್ಟರೆ ಎನ್ನುವ ಭಾವ ಆಕೆಯನ್ನು ಕಾಡುತ್ತಿರುತ್ತದೆ, ಹಾಗಾಗಿ ಅಸುರಕ್ಷತೆಯ ಭಾವ ಆಕೆಗಿರಬಹುದು.

5 / 5
Follow us