Aliens: “ನಮ್ಮ ಬಳಿ ಅವುಗಳ ವಿಡಿಯೋ ಇದೆ, ಆದರೆ ಬಹಿರಂಗಪಡಿಸಲ್ಲ” ಯುಎಸ್ ನೌಕಾಪಡೆ ಹೀಗಂದಿದ್ಯಾಕೆ?

ಏಲಿಯನ್​ಗಳ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ಅಮೆರಿಕ ಎದುರಿಸುತ್ತಲೇ ಇದೆ. ಈ ನಡುವೆ ಯುಎಸ್ ನೌಕಾಪಡೆಯು ಅನ್ಯಗ್ರಹ ಜೀವಿಗಳ ವೀಕ್ಷಣೆಯ ಹಲವಾರು ವಿಡಿಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದೆ.

TV9 Web
| Updated By: Rakesh Nayak Manchi

Updated on: Sep 15, 2022 | 7:03 AM

ವಿಶ್ವದಲ್ಲಿ ಏಲಿಯನ್ಸ್​ ಇವೆಯೇ ಎಂಬ ಪ್ರಶ್ನೆಗೆ. ವಿಜ್ಞಾನಿಗಳು ಉತ್ತರವನ್ನು ಹುಡುಕಲು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಇಲ್ಲಿಯವರೆಗೆ ಯಾವುದೇ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಲಿಯನ್​ಗಳ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ಅಮೆರಿಕ ಎದುರಿಸುತ್ತಲೇ ಇದೆ. ಈ ನಡುವೆ ಯುಎಸ್ ನೌಕಾಪಡೆಯು ಈ ವಿಚಾರದಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗ ಮಾಡಿದೆ. ಆ ಮೂಲಕ ವಿಶ್ವದಲ್ಲಿ ಏಲಿಯನ್​ಗಳ ಬಗ್ಗೆ ಚರ್ಚೆ ತೀವ್ರಗೊಂಡಿದೆ.

Aliens news US Navy made a surprise statement about UFO

1 / 5
ಅನ್ಯಗ್ರಹ ಜೀವಿಗಳ ವೀಕ್ಷಣೆಯ ಹಲವಾರು ವಿಡಿಯೋಗಳು ತಮ್ಮ ಬಳಿ ಇವೆ ಎಂದು ಯುಎಸ್ ನೌಕಾಪಡೆ ಹೇಳಿಕೊಂಡಿದೆ. ಆದರೆ ಈ ವೀಡಿಯೊಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ, ಏಕೆಂದರೆ ಇವುಗಳು ನಮ್ಮ ದೇಶಕ್ಕೆ ಬೆದರಿಕೆ ಹಾಕಬಹುದು. ಹೀಗಾಗಿ ವೀಡಿಯೊಗಳನ್ನು ಜಗತ್ತಿಗೆ ತೋರಿಸಲು ಸಾಧ್ಯವಿಲ್ಲ ಎಂದು ನೌಕಾಪಡೆ ಹೇಳಿಕೊಂಡಿದೆ.

Aliens news US Navy made a surprise statement about UFO

2 / 5
Aliens news US Navy made a surprise statement about UFO

2020 ರಲ್ಲಿ ಯುಎಸ್ ರಕ್ಷಣಾ ಇಲಾಖೆಯು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿತ್ತು. ಈ ಕೆಲವು ಕ್ಲಿಪ್​ಗಳು ಸೋರಿಕೆಯಾದ ಕಾರಣ ಈ ವೀಡಿಯೊಗಳನ್ನು ಸಚಿವಾಲಯವು ಡಿಕ್ಲಾಸಿಫೈ ಮಾಡಿದೆ.

3 / 5
Aliens news US Navy made a surprise statement about UFO

ಯುಎಸ್ ಸರ್ಕಾರದ ಪಾರದರ್ಶಕ ವೆಬ್‌ಸೈಟ್ ಬ್ಲ್ಯಾಕ್ ವಾಲ್ಟ್ ಈ ವೀಡಿಯೊಗಳನ್ನು ಬಿಡುಗಡೆ ಮಾಡುವಂತೆ ಮಾಹಿತಿ ಸ್ವಾತಂತ್ರ್ಯ ಕಾಯಿದೆ (FOIA) ಅಡಿಯಲ್ಲಿ ವಿನಂತಿಸಿದೆ. ಆದರೆ ನೌಕಾಪಡೆ ವಿಡಿಯೋ ಬಿಡುಗಡೆ ಮಾಡಲು ನಿರಾಕರಿಸಿದೆ.

4 / 5
Aliens news US Navy made a surprise statement about UFO

ನೌಕಾಪಡೆಯು ಈ ವೀಡಿಯೊಗಳನ್ನು ಸಾರ್ವಜನಿಕಗೊಳಿಸದೆ ರಹಸ್ಯ ದಾಖಲೆಗಳ ವರ್ಗದಲ್ಲಿ ಇರಿಸುತ್ತದೆ. ನೌಕಾಪಡೆಯ FOIA ಕಚೇರಿಯ ಉಪನಿರ್ದೇಶಕ ಗ್ರೆಗೊರಿ ಕ್ಯಾಸನ್, ಈ ವೀಡಿಯೊಗಳು ವರ್ಗೀಕೃತ ಡೇಟಾವನ್ನು ಒಳಗೊಂಡಿವೆ ಎಂದು ಹೇಳುತ್ತಾರೆ.

5 / 5
Follow us
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್