ಸಾನಿಯಾಗೆ ಮನೆಬಿಟ್ಟು ಹೋಗುವಂತೆ ಹೇಳಿದ ರತ್ನಮಾಲಾ: ಅಮ್ಮಮ್ಮನಿಗೆ ಮಿತಿಮೀರಿತು ಮರೆವಿನ ಕಾಯಿಲೆ

ರತ್ನಮಾಲಾಗೆ ತಾನು ನಿಧನ ಹೊಂದಿದ ನಂತರ ತನ್ನ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎಂಬ ಚಿಂತೆ ಅತಿಯಾಗಿ ಕಾಡುತ್ತಿತ್ತು. ಸೊಸೆ ಸಾನಿಯಾಗೆ ಸಂಸ್ಥೆಯ ಚುಕ್ಕಾಣಿ ನೀಡಿದರೆ ಆಕೆ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತಾಳೆ ಎಂಬುದು ಆಕೆಗೆ ಮನದಟ್ಟಾಗಿದೆ.

ಸಾನಿಯಾಗೆ ಮನೆಬಿಟ್ಟು ಹೋಗುವಂತೆ ಹೇಳಿದ ರತ್ನಮಾಲಾ: ಅಮ್ಮಮ್ಮನಿಗೆ ಮಿತಿಮೀರಿತು ಮರೆವಿನ ಕಾಯಿಲೆ
ರತ್ನಮಾಲಾ-ಸಾನಿಯಾ
TV9kannada Web Team

| Edited By: Rajesh Duggumane

Sep 24, 2022 | 7:30 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial)  ರತ್ನಮಾಲಾ ಪಾತ್ರ ಪ್ರಮುಖವಾಗಿ ಕಾಣಿಸಿಕೊಂಡಿದೆ. ಇಡೀ ಮನೆಯಲ್ಲಿ ಎಲ್ಲರನ್ನೂ ಕಂಟ್ರೋಲ್ ಮಾಡುವ ಶಕ್ತಿ ಇರೋದು ರತ್ನಮಾಲಾಗೆ ಮಾತ್ರ. ಆದರೆ, ಈಗ ಅವಳಲ್ಲಿ ಸಮಸ್ಯೆ ಒಂದು ಉದ್ಭವಿಸಿದೆ. ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದ ರತ್ನಮಾಲಾಗೆ (Ratnamala) ಅತಿಯಾಗಿ ಮರೆವಿನ ಕಾಯಿಲೆ ಕಾಡುತ್ತಿದೆ. ಇದು ಸ್ವತಃ ರತ್ನಮಾಲಾ ಗಮನಕ್ಕೂ ಬಂದಿದೆ. ಈ ಬಗ್ಗೆ ಸೊಸೆ ಭುವಿ ಜತೆ ಮಾತನಾಡಿದ್ದಾಳೆ ರತ್ನಮಾಲಾ. ಆದರೆ, ಭುವನೇಶ್ವರಿ ಈ ಸಮಸ್ಯೆಯ ಕುರಿತು ವಿಚಾರ ರಿವೀಲ್ ಮಾಡಿಲ್ಲ.

ರತ್ನಮಾಲಾಗೆ ತಾನು ನಿಧನ ಹೊಂದಿದ ನಂತರ ತನ್ನ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎಂಬ ಚಿಂತೆ ಅತಿಯಾಗಿ ಕಾಡುತ್ತಿತ್ತು. ಸೊಸೆ ಸಾನಿಯಾಗೆ ಸಂಸ್ಥೆಯ ಚುಕ್ಕಾಣಿ ನೀಡಿದರೆ ಆಕೆ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತಾಳೆ ಎಂಬುದು ಆಕೆಗೆ ಮನದಟ್ಟಾಗಿದೆ. ಆಗ ರತ್ನಮಾಲಾ ಮನಸ್ಸಿನಲ್ಲಿ ಬಂದಿದ್ದು ಭುವಿಯ ಹೆಸರು.

ರತ್ನಮಾಲಾ ಮೂಲ ಊರು ಹಸಿರುಪೇಟೆ. ಭುವಿ ಕೂಡ ಅಲ್ಲಿಯವಳೇ. ಈ ಕಾರಣಕ್ಕೆ ಭುವಿಯ ಮೇಲೆ ರತ್ನಮಾಲಾಗೆ ಎಲ್ಲಿಲ್ಲದ ಪ್ರೀತಿ. ಇನ್ನು, ಭುವಿಯ ಶ್ರದ್ಧೆಯನ್ನು ಕಂಡು ರತ್ನಮಾಲಾಗೂ ನಂಬಿಕೆ ಬಂದಿದೆ. ಹೀಗಾಗಿ ಆಕೆಯನ್ನು ಸೊಸೆ ಮಾಡಿಕೊಳ್ಳಬೇಕು ಎಂಬ ಕನಸು ರತ್ನಮಾಲಾ ಅವಳದ್ದಾಗಿತ್ತು. ಅದು ನಿಜವಾಗಿದೆ. ಹರ್ಷನನ್ನು ಭುವಿ ಮದುವೆ ಆಗಿದ್ದಾಳೆ. ಈ ಕಾರಣಕ್ಕೆ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರ ರತ್ನಮಾಲಾಗೆ ಮಾತ್ರ ತಿಳಿದಿದೆ. ಈಗ ಸಾನಿಯಾ ಇಲ್ಲದಿದ್ದರೂ ಮಾಲಾ ಒಡೆತನದ ಕಂಪೆನಿಯನ್ನು ಭುವಿ ಮುನ್ನಡೆಸಿಕೊಂಡು ಹೋಗುತ್ತಾಳೆ ಎಂಬ ನಂಬಿಕೆ ಬಂದಿದೆ. ಅಷ್ಟೇ ಅಲ್ಲ ರತ್ನಮಾಲಾಗೆ ಹೊಸ ಭರವಸೆ ಹುಟ್ಟಿದೆ.

ರತ್ನಾಮಾಲಾಳನ್ನು ಬೀಳಿಸಬೇಕು ಎಂಬುದು ಸಾನಿಯಾ ಆಲೋಚನೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ದುರಾದೃಷ್ಟಕ್ಕೆ ತಾನೇ ಬಿದ್ದು ಗಾಯಮಾಡಿಕೊಂಡಳು. ಈಗ ಸಾನಿಯಾ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ. ‘ರತ್ನಮಾಲಾಗೆ ಮರೆವಿನ ಕಾಯಿಲೆ ಇಲ್ಲ. ಅವಳು ಮರೆತಂತೆ ನಟಿಸುತ್ತಿದ್ದಾಳೆ’ ಎಂಬ ಅನುಮಾನ ಸಾನಿಯಾಳನ್ನು ಕಾಡುತ್ತಿದೆ. ಅತ್ತ ರತ್ನಮಾಲಾಗೆ ನಿಜಕ್ಕೂ ಮರೆವು ಶುರುವಾಗಿದೆ. ಹೀಗಾಗಿ, ಎಣ್ಣೆ ಚಲ್ಲಿದ್ದು ಏಕೆ ಎಂಬ ವಿಚಾರದಲ್ಲಿ ರತ್ನಮಾಲಾ ವಿಚಾರಣೆ ಆರಂಭಿಸಿದ್ದಾರೆ. ಇದನ್ನು ಕೇಳಿ ಸಾನಿಯಾ ತಾಯಿ ಸಿಟ್ಟಾಗಿದ್ದಾಳೆ. ಅಷ್ಟೇ ಅಲ್ಲ ಸಾನಿಯಾ ಜತೆಯೇ ಮನೆಬಿಟ್ಟು ಹೋಗುವ ಬೆದರಿಕೆ ಹಾಕಿದ್ದಾಳೆ. ಇದನ್ನು ಕೇಳಿದ ರತ್ನಮಾಲಾ ‘ನೀವು ಮನೆಬಿಟ್ಟು ಹೋಗುತ್ತೀರಿ ಎಂದಾದರೆ ಹೋಗಬಹುದು. ನಾವು ಇಷ್ಟು ಪ್ರೀತಿಯಿಂದ ನೋಡಿಕೊಂಡ ಹೊರತಾಗಿಯೂ ಅದು ಅರ್ಥ ಆಗದೇ ಇದ್ದರೆ ನಾವೇನು ಮಾಡಲು ಸಾಧ್ಯ’ ಎಂದು ರತ್ನಮಾಲಾ ಪ್ರಶ್ನೆ ಮಾಡಿದ್ದಾಳೆ. ಇದನ್ನು ಕೇಳಿ ಸಾನಿಯಾ ಶಾಕ್ ಆಗಿದ್ದಾಳೆ.

ಇದನ್ನೂ ಓದಿ: ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?

ಮತ್ತೊಂದೆಡೆ ತನಗೆ ಮರೆವಿನ ಕಾಯಿಲೆ ಶುರುವಾಗಿರುವ ಬಗ್ಗೆ ರತ್ನಾಮಾಲಾಗೆ ಅನುಮಾನ ಶುರುವಾಗಿದೆ. ತಾನು ಏನನ್ನೋ ಮರೆಯುತ್ತಿದ್ದೇನೆ ಎಂದು ರತ್ನಮಾಲಾಗೆ ಪದೇಪದೇ ಅನ್ನಿಸುತ್ತಲೇ ಇದೆ. ಈ ಆತಂಕವನ್ನು ಭುವಿ ಎದುರು ರತ್ನಮಾಲಾ ಹೇಳಿಕೊಂಡಿದ್ದಾಳೆ. ‘ನನಗೆ ಯಾವುದೂ ಸರಿ ಇಲ್ಲ ಅನಿಸುತ್ತಿದೆ. ನಾನು ಏನನ್ನೋ ಮರೆಯುತ್ತಿದ್ದೇನೆ. ಏಕೆ ಹೀಗಾಗುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದು ಭುವಿಯ ಎದುರು ರತ್ನಮಾಲಾ ತನ್ನ ನೋವು ತೋಡಿಕೊಂಡಿದ್ದಾಳೆ. ರತ್ನಮಾಲಾಗೆ ನಿಜಕ್ಕೂ ಮರೆವು ಶುರುವಾಗಿದೆಯೇ ಅಥವಾ ಮನೆಯವರನ್ನು ನಂಬಿಸಲು ಅವಳು ಈ ರೀತಿ ಮಾಡುತ್ತಿದ್ದಾಳಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada