Lakshana Serial: ಮಗನ ತಪ್ಪಿಗೆ ನಕ್ಷತ್ರಳನ್ನೇ ನೇರ ಹೊಣೆ ಮಾಡಿದ ಶಕುಂತಲಾ ದೇವಿ
ದು:ಖದಲ್ಲಿದ್ದ ಶಕುಂತಳಾ ದೇವಿಗೆ ಸಮಧಾನ ಮಾಡಲು ಬಂದ ನಕ್ಷತ್ರಳಿಗೆ ನಿನು ನನ್ನ ಕಣ್ಣ ಮುಂದೆ ಕಾಣಿಸಬೇಡ. ನನ್ನ ಮಗನ ಈ ಪರಿಸ್ಥಿತಿಗೆ ನೀನೆ ಕಾರಣ, ನಿನ್ನಿಂದಲೇ ನಮ್ಮ ಮನೆಯ ನೆಮ್ಮದಿ ಹಾಳಾಗಿದ್ದು. ನೀನೊಬ್ಬಳು ನಮ್ಮ ಜೀವನಕ್ಕೆ ಬಂದಿಲ್ಲ ಎಂದಿದ್ದರೆ ನಮ್ಮ ಮನೆಯವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಜನರ ಮೆಚ್ಚುಗೆ ಪಾತ್ರವಾದ ಧಾರಾವಾಹಿಗಳ ಪೈಕಿ ಲಕ್ಷಣ ಧಾರವಾಹಿಯು ಒಂದು. ವಿಶಿಷ್ಟ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಥಾ ನಾಯಕಿಯಾದ ನಕ್ಷತ್ರಳ ಪ್ರಾಣಕ್ಕೆ ಕಂಟಕವಾಗಿದ್ದ ಮೌರ್ಯನನ್ನು ಹೇಗಾದರೂ ಪೊಲೀಸರು ಹಿಡಿದು ಜೈಲಿಗೆ ಹಾಕಿದ್ದಾರೆ. ಮಗನ ಈ ಪರಿಸ್ಥಿತಿ ಕಂಡು ನೋವಲ್ಲಿದ್ದಾಳೆ ಶಕುಂತಲಾ ದೇವಿ.
ತನ್ನಿಂದ ಆದ ತಪ್ಪಿಗೆ ಶಕುಂತಳಾ ದೇವಿ ಬಳಿ ಕ್ಷಮೆ ಕೇಳಿದ್ದಾರೆ ಚಂದ್ರಶೇಖರ್. ಆದರೆ ಅದಕ್ಕೆ ಒಪ್ಪದ ಭೂಪತಿಯ ತಾಯಿ ನಿಮ್ಮಿಂದಾಗಿ ಹೋದ ನನ್ನ ಮನೆಯ ಪ್ರತಿಷ್ಠೆ ಮತ್ತೆ ಬರುತ್ತಾ. ಇದೆಲ್ಲಾ ನಿಮ್ಮಿಂದನೇ ಆದದ್ದು, ನಮ್ಮನ್ನು ಇನ್ನಾದರೂ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಾಳೆ. ಭೂಪತಿ ಕೂಡಾ ಅದೇ ಮಾತನ್ನು ಸಿ.ಎಸ್ಗೆ ಹೇಳಿ ನಿಮ್ಮ ಮಗಳಿಗೆ ಯಾವ ತೊಂದರೆ ಬರದಂತೆ ನಾನು ನೊಡಿಕೊಳ್ಳುತ್ತೇನೆ. ದಯವಿಟ್ಟು ನಮ್ಮ ತಂಟೆಗೆ ಬರಬೇಡಿ ಎಂದು ಹೇಳುತ್ತಾನೆ. ಈ ಸಂದರ್ಭದಲ್ಲಿ ತನ್ನ ತಂದೆಗೆ ಇಷ್ಟೆಲ್ಲಾ ಅವಮಾನ ಆದರೂ ಏನು ಹೇಳಲಾಗದ ಪರಿಸ್ಥಿತಿಯಲ್ಲಿದ್ದಾಳೆ ನಕ್ಷತ್ರ.
ಅಳುತ್ತಾ ಮನೆಗೆ ಬಂದ ಶಕುಂತಳಾ ದೇವಿ ಭೂಪತಿ ಒಬ್ಬನೇ ನನ್ನ ಮಗ. ಉಳಿದ ಮೂರು ಮಕ್ಕಳು ನನಗೆ ಮೋಸ ಮಾಡಿದ್ರು, ಮಕ್ಕಳಿಗೆ ಬುದ್ಧಿ ಕಲಿಸುವಲ್ಲಿ ನಾನೇ ಎಡವಿದ್ದೇನೆ ಎಂದು ದು:ಖ ಪಡುತ್ತಾಳೆ. ದು:ಖದಲ್ಲಿದ್ದ ಶಕುಂತಳಾ ದೇವಿಗೆ ಸಮಧಾನ ಮಾಡಲು ಬಂದ ನಕ್ಷತ್ರಳಿಗೆ ನಿನು ನನ್ನ ಕಣ್ಣ ಮುಂದೆ ಕಾಣಿಸಬೇಡ. ನನ್ನ ಮಗನ ಈ ಪರಿಸ್ಥಿತಿಗೆ ನೀನೆ ಕಾರಣ, ನಿನ್ನಿಂದಲೇ ನಮ್ಮ ಮನೆಯ ನೆಮ್ಮದಿ ಹಾಳಾಗಿದ್ದು. ನೀನೊಬ್ಬಳು ನಮ್ಮ ಜೀವನಕ್ಕೆ ಬಂದಿಲ್ಲ ಎಂದಿದ್ದರೆ ನಮ್ಮ ಮನೆಯವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳುತ್ತಾಳೆ.
ಭೂಪತಿಯ ತಾಯಿಯ ಈ ಕಟು ಮಾತಿಗೆ ನಕ್ಷತ್ರಳಿಗೆ ತುಂಬಾ ನೋವುಂಟಾಗುತ್ತದೆ. ನನ್ನದೇನು ತಪ್ಪಿಲ್ಲಾ ಎಂದು ಮನೆಯವರಿಗೆಲ್ಲ ಯಾವಾಗ ಗೊತ್ತಗುತ್ತದೋ ಎಂದು ಮನದಲ್ಲೇ ಕೊರಗುತ್ತಾಳೆ ನಕ್ಷತ್ರ. ಇತ್ತ ಕಡೆ ಮಿಲ್ಲಿಯ ತಾಯಿ ಮಿಲ್ಲಿಗೆ ಕಾಲ್ ಮಾಡಿದ ಡೆವಿಲ್ ಇಸ್ ಬ್ಯಾಕ್, ಇನ್ನು ಮುಂದೆ ಅಸಲಿ ಆಟ ಶುರುವಾಗುತ್ತದೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮಿಲ್ಲಿ ಮೌರ್ಯನಿಗಿಂತ ಹತ್ತು ಪಟ್ಟು ಹೆಚ್ಚು ನೀನು ಚಂದ್ರಶೇಖರ್ ಕುಟುಂಬಕ್ಕೆ ಟಾರ್ಚರ್ ಕೊಡಬೇಕು ಎಂದು ಹೇಳುತ್ತಾಳೆ. ಈ ಇಬ್ಬರಿಂದ ಸಿ.ಎಸ್ ಕುಟುಂಬಕ್ಕೆ ಇನ್ಯಾವ ಕಂಟಕ ಒದಗಿ ಬರುತ್ತದೋ ಎಂದು ಮುಂದೆ ಕಾದು ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 11:02 am, Sat, 24 September 22