Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿಜಕ್ಕೂ ಲವ್ ಲೆಟರ್ ಬರೆದಿದ್ದು ರಿಷಿನೇ ಎನ್ನವುದು ಗೊತ್ತಾಗಿದೆಯಾ? ಇತ್ತ ವಸುಧರಳನ್ನು ಒಲಿಸಿಕೊಳ್ಳಲು ಗೌತಮ್ ಮತ್ಯಾವ ಪ್ಲಾನ್ ಮಾಡ್ತಾನೆ ಎಂದು ಕಾದುನೋಡಬೇಕು.

Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?
ಜಗತಿ ಕೈ ಸೇರಿದ ಮಗನ ಲವ್ ಲೆಟರ್
TV9kannada Web Team

| Edited By: Rajesh Duggumane

Sep 24, 2022 | 4:18 PM

ಕನ್ನಡ ಕಿರುತೆರೆಯಲ್ಲಿ (Kannada Serial) ಪ್ರಸಾರವಾಗುತ್ತಿರುವ ಅನೇಕ ಧಾರಾವಾಹಿಗಳು ಪ್ರೇಕ್ಷಕರ ಹೃದಯ ಗೆದ್ದಿವೆ. ಆ ಪೈಕಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹೊಂಗನಸು’ (Honganasu) ಧಾರಾವಾಹಿ ಕೂಡ ಒಂದು. ಮಧ್ಯಾಹ್ನ 1.30ರಿಂದ 2.30ರವರೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಕಿರುತೆರೆ ಪ್ರಿಯರ ಗಮನ ಸೆಳೆಯುತ್ತಿದೆ. ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಹೊಂಗನಸು ಅನೇಕ ಟ್ವಿಸ್ಟ್ ಅಂಡ್ ಟರ್ನ್ ಗಳೊಂದಿಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಬಹುತೇಕ ಧಾರಾವಾಹಿಗಳು ಸಂಜೆ ಪ್ರಸಾರ ಪ್ರಾರಂಭಿಸಿದ್ರೆ ಹೊಂಗನಸು ಮಧ್ಯಾಹ್ನದ ಸಮಯಕ್ಕೆ ಪ್ರಸಾರವಾಗುತ್ತಿದೆ. ಡಿಬಿಎಸ್‌ಟಿ ಕಾಲೇಜಿನ ಎಂಡಿ ಹಾಗೂ ಲೆಕ್ಚರ್ ರಿಷಿ ಲವ್ ಲೆಟರ್ ಬರೆದು ಪೇಚಿಕೆ ಸಿಲುಕಿದ್ದಾನೆ. ರಿಷಿ ತನ್ನದೆ ಕಾಲೇಜಿನ ವಿದ್ಯಾರ್ಥಿನಿ ಮಸುಧರಳನ್ನು ಪ್ರೀತಿಸುತ್ತಿದ್ದರೂ ಮನಬಿಚ್ಚಿ ಹೇಳಿಕೊಂಡಿಲ್ಲ. ಪ್ರೀತಿ ಇಲ್ಲ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾನೆ. ತಾನು ಪ್ರೀತಿಸುತ್ತಿರುವ ವಸುಧರಳನ್ನೇ ಆತನ ಗೆಳೆಯ ಗೌತಮ್ ಕೂಡ ಪ್ರೀತಿಸುತ್ತಿದ್ದಾನೆ. ಮಸುಧರ ಬಳಿ ಪ್ರೇಮನಿವೇಧನೆ ಮಾಡಲು ಗೌತಮ್ ಹರಸಾಹಸ ಪಡುತ್ತಿದ್ದಾನೆ. ಅದಕ್ಕೆ ರಿಷಿ ಸಹಾಯ ಪಡೆದು ಲವ್ ಲೆಟರ್ ಬರೆಸಿಕೊಳ್ಳಲು ಯಶಸ್ವಿ ಆಗಿದ್ದಾನೆ.

ಆದರೆ ರಿಷಿ ಬರೆದ ಲವ್ ಲೆಟರ್ ವಸುಧರಗೆ ಸೇರುವ ಮೊದಲೆ ಜಗತಿ ಕೈ ಸೇರಿದೆ. ವಸುಧರಗೆ ಪ್ರಪೋಸ್ ಮಾಡಲು ರಿಷಿ ಬಳಿ ಬೇರೆಯದ್ದೆ ಕಥೆ ಹೇಳಿ, ಆತನ ಬಳಿ ಮಸ್ಕ ಹೊಡೆದು ಲವ್ ಲೆಟರ್ ಬರೆಸಿಕೊಂಡ ಗೌತಮ್ ಅದನ್ನು ಹಿಡಿದು ತಂಬಾ ಖುಷಿಯಿಂದನೇ ಮಸುಧರ ಬಳಿ ತನ್ನ ಪ್ರೀತಿಯನ್ನು ಹೇಳಲು ಹೋಗುತ್ತಾನೆ. ಮಂಡಿಯೂರಿ ಗೌತಮ್ ವಸುಧರಗೆ ಪ್ರಪೋಸ್ ಮಾಡಲು ಜೇಬಿಕೆ ಕೈ ಹಾಕಿ ಲೆಟರ್ ತೆಗೆದು ಕೊಡುತ್ತಾನೆ. ಗೌತಮ್ ವರ್ತನೆಯಿಂದ ಶಾಕ್ ಆದ ಮಸುಧರ ಏನ್ ಸರ್ ಎಂದು ಕೇಳುತ್ತಾಳೆ. ಗೌತಮ್ ಅವಸರದಲ್ಲಿ ಲೆಟರ್ ಕೊಡುವ ಬದಲು ತನ್ನ ಜೇಬಿನಲ್ಲಿದ್ದ ಬಾಚಣಿಗೆಯನ್ನು ಕೊಟ್ಟು ಪ್ರಪೋಸ್ ಮಾಡಿದ್ದ. ಪ್ರೀತಿ ಹೇಳಿಕೊಳ್ಳುವ ಅವಸರದಲ್ಲಿ ಲೆಟರ್ ಕೆಳಗೆ ಬಿದ್ದೊಗಿದ್ದನ್ನು ಗೌತಮ್ ಗಮನಿಸಿಯೇ ಇರಲಿಲ್ಲ. ತಾನು ಪ್ರೀತಿಸುತ್ತಿರುವ ವಸುಧರಗೆ ಗೌತಮ್ ಪ್ರಪೋಸ್ ಮಾಡ್ತಾನಾ ಎಂದು ರಿಷಿ ಕೂಡ ಶಾಕ್ ನಲ್ಲಿಯೇ ನೋಡುತ್ತಿದ್ದ.

ಇತ್ತ ಗೌತಮ್ ಬೀಳಿಸಿಕೊಂಡಿದ್ದ ರಿಷಿ ಬರೆದ ಲವ್ ಲೆಟರ್ ಜಗತಿ ಕೈ ಸೇರಿತ್ತು. ಜಗತಿ ಲವ್ ಲೆಟರ್ ಓದಿ ವಸುಗೆ ಬರೆದ ಲೆಟರ್ ಎಂದು ಶಾಕ್ ಆಗುತ್ತಾಳೆ. ಅಷ್ಟೊತ್ತಿಗೆ ಗೌತಮ್ ಮತ್ತು ರಿಷಿ ಇಬ್ಬರು ಗಾಬರಿಯಲ್ಲಿ ಜಗತಿ ಬಳಿ ಓಡಿ ಬಂದರು. ಜಗತಿ ಜೋರಾಗಿ ಲವ್ ಲೆಟರ್ ಓದಿ ಬರೆದವರಿಗೆ ಹಿಗ್ಗಾಮುಗ್ಗಾ ಬೈದಳು. ಅಷ್ಟೆಯಲ್ಲದೆ ಲೆಟರ್ ಬರೆದಿದ್ದು ಯಾರು ಅಂತ ಗೊತ್ತಾಗಬೇಕೆಂದು ವಾರ್ನಿಂಗ್ ಸಹ ಮಾಡಿದಳು. ಜಗತಿ ಗರಂ ಆಗಿದ್ದು ನೋಡಿ ರಿಷಿ ಗಪ್ ಚುಪ್. ಲವ್ ಲೆಟರ್ ಬರೆದವರನ್ನು ಬಿಡಬಾರದು, ಸರಿಯಾಗಿ ಕಪಾಳಕ್ಕೆ ಹೊಡೆಯಬೇಕು ಎಂದು ಜೋರಾಗಿ ಬೈದಳು. ಅಲ್ಲದೆ ಈ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು, ಅವರಿಗೆ ಶಿಕ್ಷೆ ಕೊಡಬೇಕು ಎಂದು ರಿಷಿ ಬಳಿ ಹೇಳಿ ಅಲ್ಲಿಂದ ಹೊರಟು ಹೋದರು.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿ: ರತ್ನಮಾಲಾಗೆ ಮಿತಿಮೀರುತ್ತಿದೆ ಮರೆವಿನ ಕಾಯಿಲೆ; ವೀಕ್ಷಕರಿಗೆ ಮೂಡಿದೆ ಬೇರೆಯದೇ ಅನುಮಾನ

ಮೋಸ ಮಾಡಿ ಲವ್ ಲೆಟರ್ ಬರೆಸಿಕೊಂಡ ಸ್ನೇಹಿತ ಗೌತಮ್‌ಗೆ ರಿಷಿ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ನನ್ನ ಕಾಲೇಜಿನಲ್ಲಿ ಈ ರೀತಿ ಹುಚ್ಚು ಹುಚ್ಚಾಗಿ ಆಡಿದ್ರೆ ನಾನು ಸುಮ್ಮನೆ ಇರಲ್ಲ ಎಂದು ರಿಷಿ ಗೌತಮ್ ಗೆ ಸ್ಟ್ರಿಕ್ಟ್ ಆಗಿ ವಾರ್ನ್ ಮಾಡಿದ. ಆದರೆ ರಿಷಿ ಮಾತಿಗೆ ಕೇರ್ ಮಾಡದ ಗೌತಮ್ ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ ಪ್ರೀತಿ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಜಗತಿ ಕೂಡ ಲವ್ ಲೆಟರ್ ನೋಡಿ ಅಪ್ ಸೆಟ್ ಆಗಿದ್ದಾಳೆ. ಆದರೆ ತನ್ನ ಪುತ್ರನೇ ಲವ್ ಲೆಟರ್ ಬರೆದಿದ್ದು ಅಂತ ಜಗತಿಗೆ ಗೊತ್ತಾಗಿಲ್ಲ. ಒಂದು ವೇಳೆ ಗೊತ್ತಾದರೆ ಯಾವ ರೀತಿ ರಿಯಾಕ್ಟ್ ಮಾಡುತ್ತಾಳೆ ಎನ್ನುವುದು ಕಾದು ನೋಡಬೇಕು. ಆದರೆ ವಸುಧರಗೆ ರಿಷಿನೆ ಬರೆದಿದ್ದು ಎನ್ನುವ ಅನುಮಾನ ಬಂದಿದೆ. ಯಾಕೆಂದರೆ ತನ್ನನ್ನು ಅರ್ಥ ಮಾಡಿಕೊಂಡವರೇ ಈ ರೀತಿ ಬರೆಯಲು ಸಾಧ್ಯ ಎನ್ನುತ್ತಿದ್ದಾಳೆ ಮಸುಧರ. ನಿಜಕ್ಕೂ ಲವ್ ಲೆಟರ್ ಬರೆದಿದ್ದು ರಿಷಿನೇ ಎನ್ನವುದು ಗೊತ್ತಾಗಿದೆಯಾ? ಇತ್ತ ವಸುಧರಳನ್ನು ಒಲಿಸಿಕೊಳ್ಳಲು ಗೌತಮ್ ಮತ್ಯಾವ ಪ್ಲಾನ್ ಮಾಡ್ತಾನೆ ಎಂದು ಕಾದುನೋಡಬೇಕು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada