‘ಕನ್ನಡತಿ’ ಧಾರಾವಾಹಿ: ರತ್ನಮಾಲಾಗೆ ಮಿತಿಮೀರುತ್ತಿದೆ ಮರೆವಿನ ಕಾಯಿಲೆ; ವೀಕ್ಷಕರಿಗೆ ಮೂಡಿದೆ ಬೇರೆಯದೇ ಅನುಮಾನ

ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ನೆನಪು ಮಾಸುತ್ತಿದೆ. ಮಾಡುತ್ತಿರುವ ಕೆಲಸದ ಮಧ್ಯೆಯೇ ತಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ? ಎಂಬ ಪ್ರಶ್ನೆ ಅವಳನ್ನು ತೀವ್ರವಾಗಿ ಕಾಡುತ್ತಿದೆ.

‘ಕನ್ನಡತಿ’ ಧಾರಾವಾಹಿ: ರತ್ನಮಾಲಾಗೆ ಮಿತಿಮೀರುತ್ತಿದೆ ಮರೆವಿನ ಕಾಯಿಲೆ; ವೀಕ್ಷಕರಿಗೆ ಮೂಡಿದೆ ಬೇರೆಯದೇ ಅನುಮಾನ
ರತ್ನಮಾಲಾ
TV9kannada Web Team

| Edited By: Rajesh Duggumane

Sep 22, 2022 | 8:56 AM

‘ಕನ್ನಡತಿ’ ಧಾರಾವಾಹಿ (Kannadathi Serial) ಹೊಸಹೊಸ ತಿರುವು ಪಡೆದುಕೊಂಡು ಸಾಗ್ತಿದೆ. ಈ ಧಾರಾವಾಹಿ ಹಲವು ವಿಚಾರಗಳಲ್ಲಿ ಮುಖ್ಯಘಟ್ಟ ತಲುಪಿದೆ. ಹರ್ಷ-ಭುವಿ ಮದುವೆ ಆಗಿದೆ. ಇವರನ್ನು ದೂರ ಮಾಡಬೇಕು ಎಂದು ಹಲವರು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಡಿವೋರ್ಸ್ ಕೊಡಿಸಲು ವರುಧಿನಿ ಈಗಾಗಲೇ ರೆಡಿ ಆಗಿದ್ದಾಳೆ. ಮತ್ತೊಂದೆಡೆ ಸಾನಿಯಾ ಕಿತಾಪತಿ ಹೆಚ್ಚುತ್ತಿದೆ. ಈ ಮಧ್ಯೆ ರತ್ನಮಾಲಾಗೆ (Ratnamala) ಮರೆವಿನ ಕಾಯಿಲೆ ಹೆಚ್ಚುತ್ತಿದೆ. ಅವಳಿಗೆ ನಿಜಕ್ಕೂ ಮರೆವು ಶುರುವಾಗಿದೆಯಾ ಅಥವಾ ಸಾನಿಯಾಳನ್ನು ದಾರಿತಪ್ಪಿಸಲು ಈ ರೀತಿ ಮಾಡುತ್ತಿದ್ದಾಳಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಅವಳ ಮರೆವಿನಿಂದ ಅನೇಕ ಸಮಸ್ಯೆಗಳು ಆಗುತ್ತಿರುವುದಂತೂ ಸತ್ಯ.

ರತ್ನಮಾಲಾಗೆ ತೀವ್ರ ಅನಾರೋಗ್ಯ ಕಾಡಿತ್ತು. ಹರ್ಷ ಹಾಗೂ ಭುವಿ ಮದುವೆ ಮುಗಿಯುತ್ತಿದ್ದಂತೆ ರತ್ನಮಾಲಾ ಅಮೆರಿಕಕ್ಕೆ ತೆರಳಿದ್ದಳು. ಅಲ್ಲಿ ಅವಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗಿದೆ. ಈ ಘಟನೆ ನಂತರ ಅಮ್ಮಮ್ಮ ಸಂಪೂರ್ಣವಾಗಿ ಚೇತರಿಕೆ ಕಾಣುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ತಪ್ಪಾಗಿದೆ. ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ. ನೆನಪು ಮಾಸುತ್ತಿದೆ. ಮಾಡುತ್ತಿರುವ ಕೆಲಸದ ಮಧ್ಯೆಯೇ ತಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ? ಎಂಬ ಪ್ರಶ್ನೆ ಅವಳನ್ನು ತೀವ್ರವಾಗಿ ಕಾಡುತ್ತಿದೆ.

ರತ್ನಾಮಾಲಾಳನ್ನು ನೆಲಕೆ ಬೀಳಿಸಬೇಕು ಎಂದು ಸಾನ್ಯಾ ಪ್ಲ್ಯಾನ್ ಒಂದನ್ನು ಮಾಡಿದ್ದಳು. ಆದರೆ, ಆ ಪ್ಲ್ಯಾನ್ ಆಕೆಗೆ ತಿರುಗುಬಾಣವಾಗಿದೆ. ಮೆಟ್ಟಿಲ ಕೆಳಗೆ ಹಾಕಿದ ಎಣ್ಣೆ ಕಾಲಿಗೆ ತಾಗಿ ತಾನೇ ಜಾರಿ ಬಿದ್ದಿದ್ದಾಳೆ. ಇದನ್ನು ನೋಡಿದ ರತ್ನಮಾಲಾ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಯಲ್ಲಿ ಸಾನಿಯಾಗೆ ಚಿಕಿತ್ಸೆ ಕೂಡ ಸಿಕ್ಕಿದೆ. ಆಸ್ಪತ್ರೆಯಲ್ಲಿದ್ದಾಗಲೇ ರತ್ನಮಾಲಾಗೆ ಮರೆವಿನ ಕಾಯಿಲೆ ಮರುಕಳಿಸಿದೆ. ಸಾನಿಯಾ ಚಿಕಿತ್ಸೆ ಪಡೆಯುತ್ತಿರುವಾಗಲೇ ಆಕೆಯನ್ನು ಬಿಟ್ಟು ರತ್ನಮಾಲಾ ಮರಳಿದ್ದಾಳೆ.

ಮನೆಗೆ ಬಂದ ನಂತರವೂ ತಾನು ಸಾನಿಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ, ಅಲ್ಲಿ ಚಿಕಿತ್ಸೆ ಕೊಡಿಸುವಾಗ ಅರ್ಧಕ್ಕೆ ಬಂದೆ ಎಂಬುದು ರತ್ನಮಾಲಾಗೆ ಗೊತ್ತಾಗಿಲ್ಲ. ‘ಸಾನಿಯಾ ಎಲ್ಲಿ ಹೋದಳೋ ಗೊತ್ತಿಲ್ಲ. ಕರೆ ಮಾಡೋಣ ಎಂದರೆ ಮೊಬೈಲ್ ಕೂಡ ಇಲ್ಲಿಯೇ ಬಿಟ್ಟು ಹೋಗಿದ್ದಾಳೆ’ ಎಂದು ಸಾನಿಯಾ ಪತಿ ಆದಿ ಹೇಳಿದ್ದಾನೆ. ಆಗಲೂ ರತ್ನಮಾಲಾಗೆ ನಿಜ ವಿಚಾರ ಗೊತ್ತಾಗಿಲ್ಲ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸಾನಿಯಾ; ತಣಿಯಲೇ ಇಲ್ಲ ಅಮ್ಮಮ್ಮನ ಕೋಪ

ರತ್ನಮಾಲಾಗೆ ಮರೆವಿನ ಕಾಯಿಲೆ ಶುರುವಾಗಿದೆ ಎಂಬ ಬಗ್ಗೆ ಸಾನಿಯಾಗೆ ಅನುಮಾನ ಮೂಡಿದೆ. ಇದನ್ನು ತಿಳಿದುಕೊಳ್ಳಲು ಆಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ, ಆ ವಿಚಾರ ಮಾತ್ರ ಗೊತ್ತಾಗುತ್ತಿಲ್ಲ. ಪ್ರತಿ ಬಾರಿ ಇದನ್ನು ರತ್ನಮಾಲಾ ಸುಳ್ಳು ಮಾಡುತ್ತಲೇ ಬರುತ್ತಿದ್ದಾಳೆ. ಈ ಕಾರಣಕ್ಕೆ ಸಾನಿಯಾ ಗೊಂದಲಕ್ಕೆ ಒಳಗಾಗಿದ್ದಾಳೆ. ಈಗ ರತ್ನಮಾಲಾ ಆಸ್ಪತ್ರೆಯಿಂದ ಏಕಾಏಕಿ ಹೊರ ಹೋಗಿರುವ ಘಟನೆಯಿಂದ ಸಾನಿಯಾಗೆ ನಿಜ ವಿಚಾರ ಗೊತ್ತಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಸಾನಿಯಾಳ ದಾರಿ ತಪ್ಪಿಸಲು ರತ್ನಮಾಲಾ ಮಾಡುತ್ತಿರುವ ಹೊಸ ಐಡಿಯಾನಾ ಎಂಬ ಬಗ್ಗೆಯೂ ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada