‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಆರ್ಯವರ್ಧನ್ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರು. ಈಗ ಅವರು ಹೊರ ಹೋದ ಕಾರಣ, ಆರ್ಯವರ್ಧನ್​ಗೆ ಅಪಘಾತವಾದಂತೆ ತೋರಿಸಲಾಗಿದೆ. ಧಾರಾವಾಹಿಗೆ ಬೇರೆ ಕಲಾವಿದ ಬರೋದು ಪಕ್ಕಾ ಆಗಿದೆ.

‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್
ಅನಿರುದ್ಧ್​
TV9kannada Web Team

| Edited By: Rajesh Duggumane

Sep 09, 2022 | 6:26 PM

ನಟ ಅನಿರುದ್ಧ್​ (Anirudh Jatkar) ಹಾಗೂ ‘ಜೊತೆ ಜೊತೆಯಲಿ’ ತಂಡದ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮಾತುಕತೆಯಲ್ಲಿ ಈ ವಿಚಾರ ಬಗೆಹರಿಯದ ಕಾರಣ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಎರಡು ವರ್ಷಗಳ ಕಾಲ ಕಿರುತೆರೆಯಲ್ಲಿ ಅವರಿಗೆ ಯಾರೂ ಅವಕಾಶ ನೀಡಬಾರದು ಎಂದು ಘೋಷಿಸಲಾಗಿದೆ. ‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಿಂದ ಅನಿರುದ್ಧ್ ಹೊರಹೋದ ಹಲವು ದಿನಗಳ ನಂತರ ಅವರು ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಆರ್ಯವರ್ಧನ್ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರು. ಈಗ ಅವರು ಹೊರ ಹೋದ ಕಾರಣ, ಆರ್ಯವರ್ಧನ್​ಗೆ ಅಪಘಾತವಾದಂತೆ ತೋರಿಸಲಾಗಿದೆ. ಮುಖಕ್ಕೆ ತೀವ್ರ ಏಟು ಬಿದ್ದ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದು ಅನಿವಾರ್ಯ ಎಂದು ತೋರಿಸಲಾಗಿದೆ. ಈ ಮೂಲಕ ಧಾರಾವಾಹಿಗೆ ಬೇರೆ ಕಲಾವಿದ ಬರೋದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಅನಿರುದ್ಧ್ ಅವರು ಹೊಸ ಪೋಸ್ಟ್ ಹಾಕಿದ್ದಾರೆ.

‘ನನ್ನ ಮೇಲೆ ನಿಮಗಿರುವ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶ, ಟ್ವೀಟ್, ಕರೆ, ಪತ್ರ, ಪ್ರತಿಭಟನೆ, ಪತ್ರಿಕಾಗೋಷ್ಠಿ, ಪ್ರಾರ್ಥನೆಗಳ ಮೂಲಕ ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ. ಅದಕ್ಕೆ ನಾನು ಚಿರಋುಣಿ’ ಎಂದು ಪತ್ರ ಆರಂಭಿಸಿದ್ದಾರೆ ಅನಿರುದ್ಧ್​.

ಇದನ್ನೂ ಓದಿ: Aniruddh Jatkar: ಅನಿರುದ್ಧ್​ ಪರ ನಿಂತ ಮಹಿಳಾ ಅಭಿಮಾನಿಗಳು; ‘ಜೊತೆ ಜೊತೆಯಲಿ’ ನಿರ್ಮಾಪಕರ ವಿರುದ್ಧ ಫ್ಯಾನ್ಸ್​ ಗರಂ

‘ತಮ್ಮ ಪ್ರಯತ್ನಗಳಿಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ.  ಅಮಿತಾಭ್ ಬಚ್ಚನ್ ಅವರ ತಂದೆ ಮಹಾನ್‌ ಕವಿ ಹರಿವಂಶ್‌ ರಾಯ್ ಬಚ್ಚನ್ ಅವರು ಹೇಳುತ್ತಿದ್ದರು, ‘ಮನ್‌ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್‌ ವೋ ಭಗವಾನ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್‌ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ’ (ನಮ್ಮ ಇಚ್ಛಾನುಸಾರ ಆದರೆ ಒಳ್ಳೆಯದು. ಆಗದೇ ಇದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತದೆ ಹಾಗೂ ದೇವರು ನಮಗಾಗಿ ಒಳ್ಳೆಯದನ್ನೇ ಮಾಡುತ್ತಾನೆ). ಸ್ವಲ್ಪ ತಾಳ್ಮೆಯಿಂದ ಇರೋಣ. ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರುತ್ತದೆ ಎಂಬ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ. ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’ ಎಂದು ಅನಿರುದ್ಧ್​ ಅವರು ಪತ್ರ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada