‘ಟಿಆರ್​ಪಿ ಕುಸಿಯಲು ಅನಿರುದ್ಧ್​ ಕಾರಣ, ಅವರು ಧಾರಾವಾಹಿಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಲ್ಲ’: ನಿರ್ಮಾಪಕ

‘ಅನಿರುದ್ಧ್​ ಅವರಿಂದ ಶೂಟಿಂಗ್​ಗೆ ತುಂಬಾ ಅಡಚಣೆ ಆಗಿದೆ. ಎದುರು ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್​ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು’ ಎಂದು ಆರೂರು ಜಗದೀಶ್ ಹೇಳಿದ್ದಾರೆ.  

‘ಟಿಆರ್​ಪಿ ಕುಸಿಯಲು ಅನಿರುದ್ಧ್​ ಕಾರಣ, ಅವರು ಧಾರಾವಾಹಿಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಲ್ಲ’: ನಿರ್ಮಾಪಕ
ಜಗದೀಶ್​-ಅನಿರುದ್ಧ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 20, 2022 | 7:37 PM

ಅನಿರುದ್ಧ್ (Aniruddha Jatkar) ಅವರನ್ನು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಗಿಡುವ ಬಗ್ಗೆ ಇಂದು (ಆಗಸ್ಟ್ 20) ಘೋಷಣೆ ಮಾಡಲಾಯಿತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿ ಅನಿರುದ್ಧ್ ಸ್ಪಷ್ಟನೆ ನೀಡಿದ್ದರು. ‘ಧಾರಾವಾಹಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನಾನು ಮತ್ತೆ ನಟಿಸಲು ಸಿದ್ಧ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿರ್ಮಾಪಕ ಆರೂರು ಜಗದೀಶ್ (Aroor Jagadish) ಅವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

‘ಅನಿರುದ್ಧ್​ ಅವರಿಂದ ಶೂಟಿಂಗ್​ಗೆ ತುಂಬಾ ಅಡಚಣೆ ಆಗಿದೆ. ಎದುರು ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್​ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು’ ಎಂದು ಆರೂರು ಜಗದೀಶ್ ಹೇಳಿದ್ದಾರೆ.

‘ನಮ್ಮ ಮಧ್ಯೆ ಮನಸ್ತಾಪ ಇರಲಿಲ್ಲ. ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. 24 ಗಂಟೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ನಿರ್ಮಾಪಕರಿಗೆ ಸಾಥ್ ಕೊಡಬೇಕು ಎಂದು ಅವರಿಗೆ ಯಾವಾಗಲೂ ಅನಿಸಿಲ್ಲ. ಕೊವಿಡ್ ಟೈಮ್​ನಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ.15 ಕಟ್ ಮಾಡಿದ್ದೆವು. ಆಗ ನಾನು ಆಸ್ಪತ್ರೆಯಲ್ಲಿ ಇದ್ದೆ. ಅವರು ನನ್ನ ಸ್ಯಾಲರಿ ಯಾಕೆ ಕಟ್ ಮಾಡಿದ್ರಿ ಅಂತ ಕಾಲ್ ಮಾಡಿ ಕೂಗಾಡಿದ್ರು. ಸೆಟ್​ನಲ್ಲೂ ಬಂದು ಕೂಗಾಡಿದರು. ನನ್ನ ದುಡ್ಡು ತಿಂದು ಬುದಕುತ್ತಿದ್ದಾರೆ ಅಂತ ಕೂಗಾಡಿದ್ದರು. ಅದನ್ನು ಕೇಳಿ ಬೇಸರ ಆಯ್ತು’ ಎಂದಿದ್ದಾರೆ ಜಗದೀಶ್.

ಇದನ್ನೂ ಓದಿ
Image
‘ಅಂದು ಜೊತೆ ಜೊತೆಯಲಿ ನಾಯಕಿ ಕ್ಷಮೆ ಕೇಳಿದ್ದರು’; ಹಳೆಯ ಘಟನೆ ನೆನೆದ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್
Image
Aniruddha Press Meet: ಭಿನ್ನಾಭಿಪ್ರಾಯಗಳು ಮನೆಯಲ್ಲಿ ಇದ್ದೇ ಇರುತ್ತೆ, ನನಗೆ ಯಾವುದೇ ದುರಹಂಕಾರ ಇಲ್ಲ: ನಟ ಅನಿರುದ್ಧ
Image
Aniruddha Jatkar: ಜೊತೆ ಜೊತೆಯಲಿ​ ತಂಡದಿಂದ ಅನಿರುದ್ಧ್ ಬ್ಯಾನ್: ನಿಷೇಧಕ್ಕೆ ಅವಕಾಶವಿಲ್ಲ ಎಂದ ಟೆಲಿವಿಷನ್ ಅಸೋಸಿಯೇಷನ್
Image
Megha Shetty:ವೀಕ್ಷಕರ ಬಳಿ ಕ್ಷಮೆ ಕೇಳಿದ ‘ಜೊತೆ ಜೊತೆಯಲಿ’ ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ: ‘ಜೊತೆ ಜೊತೆಯಲಿ ಧಾರಾವಾಹಿ 2-3 ತಿಂಗಳಲ್ಲಿ ಮುಗಿಯಲಿದೆ’: ಅನಿರುದ್ಧ್​

‘ನನಗಾಗಿರುವ ಪ್ರತಿ ನೋವನ್ನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಹೇಳೋಕೆ ಹೋದ್ರೆ ತುಂಬಾ ಇದೆ. ನನಗೆ ಇನ್ನು ಆರೋಗ್ಯ ಹಾಳುಮಾಡಿಕೊಳ್ಳಲು ಇಷ್ಟವಿಲ್ಲ. ಅವರನ್ನು ಈ ಸೀರಿಯಲ್​ನಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಸಲ್ಲ. ನನಗೆ ಗೌರವ ಸಿಕ್ಕಿಲ್ಲ. ಅವರು ಮಾತಿನಲ್ಲಿ ಹೇಳುವಂತೆ ಕೃತಿಯಲ್ಲಿ ಇಲ್ಲ. ಅನೇಕ ಬಾರಿ ಶೂಟಿಂಗ್​ನಿಂದ ಅರ್ಧಕ್ಕೆ ಹೊರಹೋಗಿದ್ದಾರೆ. ಇದರಿಂದ ನನಗೆ ನಷ್ಟ ಉಂಟಾಗಿದೆ’ ಎಂದು ಜಗದೀಶ್ ಆರೋಪಿಸಿದ್ದಾರೆ.

‘ಕ್ಯಾರವಾನ್ ಇಲ್ಲ ಎಂದು ಶೂಟಿಂಗ್​​ಇಂದ ಎದ್ದು ಹೋಗಿದ್ದರು. ಹೆಣ್ಣು ಮಕ್ಕಳ ಕೇರ್ ನಾವು ತೆಗೆದುಕೊಳ್ಳುತ್ತೇವೆ. ಆ ಬಗ್ಗೆ ಅವರಿಗೆ ಯಾಕೆ ಚಿಂತೆ? ನನಗೆ ಆಗಿರೋ ಅವಮಾನ, ನೋವಿಗೆ ನಟರೇ ಸ್ಪಂದಿಸಲಿಲ್ಲ ಅಂದರೆ ಹೇಗೆ? ಈ ಸೀರಿಯಲ್ ಮಧ್ಯಭಾಗದಲ್ಲಿ ಟಿಆರ್​ಪಿ ಕಡಿಮೆ ಆಗಲು ಅವರೇ ಕಾರಣ. ಈ ಧಾರಾವಾಹಿ ನಿಲ್ಲಲು ಅವರೇ ಕಾರಣ’ ಎಂದಿದ್ದಾರೆ ಜಗದೀಶ್.

Published On - 7:16 pm, Sat, 20 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ