‘ಅಂದು ಜೊತೆ ಜೊತೆಯಲಿ ನಾಯಕಿ ಕ್ಷಮೆ ಕೇಳಿದ್ದರು’; ಹಳೆಯ ಘಟನೆ ನೆನೆದ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್

ಕೊವಿಡ್ ಸಂದರ್ಭದಲ್ಲಿ ಮೇಘಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು.

‘ಅಂದು ಜೊತೆ ಜೊತೆಯಲಿ ನಾಯಕಿ ಕ್ಷಮೆ ಕೇಳಿದ್ದರು’; ಹಳೆಯ ಘಟನೆ ನೆನೆದ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 20, 2022 | 3:03 PM

ಜೀ ಕನ್ನಡದಲ್ಲಿ (Zee Kannada) ಪ್ರಸಾರ ಆಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಧಾರಾವಾಹಿಯ ನಾಯಕ ಅನಿರುದ್ಧ ಹಾಗೂ ಧಾರಾವಾಹಿಯ ತಂತ್ರಜ್ಞರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಎರಡು ವರ್ಷಗಳ ಕಾಲ ಅವರನ್ನು ಧಾರಾವಾಹಿಯಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಧಾರಾವಾಹಿಯ ಕಥಾ ನಾಯಕಿ ಮೇಘಾ ಶೆಟ್ಟಿ (Megha Shetty) ಬಗ್ಗೆ ಮಾತನಾಡಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಮೇಘಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜ. ಈಗ ಗೊಂದಲ ಬಗೆಹರಿದಿದೆ. ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ’ ಎಂದು ಮೇಘಾ ಶೆಟ್ಟಿ ಅಂದು ಭರವಸೆ ನೀಡಿದ್ದರು. ಅಂದು ಏನಾಗಿತ್ತು ಎಂಬ ವಿಚಾರದ ಬಗ್ಗೆ ಭಾಸ್ಕರ್ ಈಗ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Aniruddha Press Meet: ಭಿನ್ನಾಭಿಪ್ರಾಯಗಳು ಮನೆಯಲ್ಲಿ ಇದ್ದೇ ಇರುತ್ತೆ, ನನಗೆ ಯಾವುದೇ ದುರಹಂಕಾರ ಇಲ್ಲ: ನಟ ಅನಿರುದ್ಧ
Image
Aniruddha Jatkar: ಜೊತೆ ಜೊತೆಯಲಿ​ ತಂಡದಿಂದ ಅನಿರುದ್ಧ್ ಬ್ಯಾನ್: ನಿಷೇಧಕ್ಕೆ ಅವಕಾಶವಿಲ್ಲ ಎಂದ ಟೆಲಿವಿಷನ್ ಅಸೋಸಿಯೇಷನ್
Image
Megha Shetty:ವೀಕ್ಷಕರ ಬಳಿ ಕ್ಷಮೆ ಕೇಳಿದ ‘ಜೊತೆ ಜೊತೆಯಲಿ’ ನಟಿ ಮೇಘಾ ಶೆಟ್ಟಿ

‘ಕೊವಿಡ್ ಸಂದರ್ಭದಲ್ಲಿ ಶೂಟಿಂಗ್​ಗಾಗಿ ಎಲ್ಲಾ ಧಾರಾವಾಹಿ ಟೀಂ ಹೈದರಾಬಾದ್​ಗೆ ತೆರಳಿತ್ತು. ಆ ಸಂದರ್ಭದಲ್ಲಿ ಆರೂರು ಜಗದೀಶ್ ಅವರು ಕಣ್ಣೀರು ಹಾಕಿದ್ದರು. ಎಲ್ಲಾ ತಂಡದವರು ಸುಗಮವಾಗಿ ಶೂಟಿಂಗ್ ಮಾಡುತ್ತಿದ್ದರು. ಆದರೆ, ಈ ಟೀಂನಿಂದ ಮಾತ್ರ ದೂರು ಬರುತ್ತಿತ್ತು. ಕಥಾನಾಯಕಿಯನ್ನು ಸೀರಿಯಲ್​​ನಿಂದ ತೆಗೆಯಬೇಕು ಎಂದು ನಾವು ಎಲ್ಲರೂ ಸೇರಿ ನಿರ್ಧರಿಸಿದ್ದೆವು. ಅವರಿಗೂ ಆ ಮಾತನ್ನು ಹೇಳಿದ್ದೆವು. ಆದರೆ, ತಪ್ಪಿನ ಅರಿವಾಗಿ ಅವರು ಕ್ಷಮೆ ಕೇಳಿದ್ದರು’ ಎಂದಿದ್ದಾರೆ ಭಾಸ್ಕರ್.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ

ಸದ್ಯ, ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆ ಲೋಕದಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಅನಿರುದ್ಧ್​​ಗೂ ಹಾಗೂ ಧಾರಾವಾಹಿ ತಂಡಕ್ಕೂ ರಾಜಿ ಆಗಲಿದೆಯೇ ಎಂಬುದು ಸದ್ಯದ ಕುತೂಹಲ. ಮತ್ತೆ ನಟಿಸಲು ಸಿದ್ಧರಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಒಂದೊಮ್ಮೆ ಅನಿರುದ್ಧ ಹೊರಗುಳಿದಿದ್ದೇ ಆದಲ್ಲಿ ಬೇರೆ ಕಲಾವಿದರನ್ನು ಇಟ್ಟುಕೊಂಡು ‘ಜೊತೆ ಜೊತೆಯಲಿ’ ಮುನ್ನಡೆಸಲಾಗುತ್ತದೆಯೇ ಎಂಬುದನ್ನೂ ಕಾದು ನೋಡಬೇಕಿದೆ.

Published On - 2:37 pm, Sat, 20 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್