ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಮೇಲೆ ಹಲ್ಲೆ ಮಾಡಿದ ಪತಿ ಅಮ್ಜದ್ ಖಾನ್; ಆಸ್ಪತ್ರೆಗೆ ದಾಖಲಾದ ಹೀರೋಯಿನ್

ಲಾಕ್​ಡೌನ್​ ನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ನಂತರ ಈ ದಂಪತಿ ಚೆನ್ನೈನಲ್ಲಿ ನೆಲೆಸಿದ್ದರು. ಈಗ ನಟಿ ವಿವಾದದ ಮೂಲಕ ಸುದ್ದಿ ಆಗಿದ್ದಾರೆ.   

ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಮೇಲೆ ಹಲ್ಲೆ ಮಾಡಿದ ಪತಿ ಅಮ್ಜದ್ ಖಾನ್; ಆಸ್ಪತ್ರೆಗೆ ದಾಖಲಾದ ಹೀರೋಯಿನ್
ಅಮ್ಜದ್-ದಿವ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 06, 2022 | 7:53 PM

ನಟಿ ದಿವ್ಯಾ ಶ್ರೀಧರ್ (Divya Sridhar) ಅವರು ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ಆಕಾಶ ದೀಪ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. 2015ರಲ್ಲಿ ಪ್ರಸಾರ ಕಂಡ ತಮಿಳಿನ ‘ಕೆಳದಿ ಕಣ್ಮಣಿ’ ಧಾರಾವಾಹಿಯ ಸಹ ನಟ ಅಮ್ಜದ್ ಖಾನ್​ (Amjath Khan) ಅವರನ್ನು ದಿವ್ಯಾ ಮದುವೆ ಆಗಿದ್ದರು. ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳು ಬಂದಿದ್ದವು. ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ವಿರುದ್ಧ ಹಲ್ಲೆ, ಕಿರುಕುಳ ಆರೋಪವನ್ನು ದಿವ್ಯಾ ಹೊರಿಸಿದ್ದಾರೆ.

2017ರಿಂದ ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಪ್ರೀತಿ ಮಾಡುತ್ತಿದ್ದರು. ಲಾಕ್​ಡೌನ್​ ವೇಳೆ ಅಮ್ಜದ್ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ದಿವ್ಯಾ ಸಹಾಯ ಮಾಡಿದ್ದರಂತೆ. ಲಾಕ್​ಡೌನ್​ ನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ನಂತರ ಈ ದಂಪತಿ ಚೆನ್ನೈನಲ್ಲಿ ನೆಲೆಸಿದ್ದರು. ಈಗ ನಟಿ ವಿವಾದದ ಮೂಲಕ ಸುದ್ದಿ ಆಗಿದ್ದಾರೆ.

‘ನೀನು ಕನ್ನಡದ ನಟಿ. ನಮ್ಮ ರಾಜ್ಯಕ್ಕೆ ಬಂದು ಏನೂ ಮಾಡೋಕೆ ಆಗುವುದಿಲ್ಲ. ಇಲ್ಲಿ ನನ್ನ ಕಡೆಯವರು ತುಂಬಾ ಜನ ಇದ್ದಾರೆ’ ಎಂದು ಅಮ್ಜದ್ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ದಿವ್ಯಾ ಪರ ವಕೀಲರು ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ದಿವ್ಯಾ ಮೂರು ತಿಂಗಳ ಪ್ರೆಗ್ನೆಂಟ್. ಈ ವಿಚಾರ ಗೊತ್ತಿದ್ದರೂ ಅಮ್ಜದ್ ಹೊಟ್ಟೆಗೆ ಒದ್ದಿದ್ದಾರೆ, ಕಪಾಳಕ್ಕೆ ಹೊಡೆದಿದ್ದಾರೆ. ಸದ್ಯ ದಿವ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ದಿವ್ಯಾ ಹೇಳಿಕೆ ಪಡೆದಿದ್ದಾರೆ. ಅವರು ಆಸ್ಪತ್ರೆಯಿಂದ ಆಚೆಬಂದ ಮೇಲೆ ಪೊಲೀಸರಿಗೆ ದೂರು ಕೊಡುತ್ತೇವೆ’ ಎಂದು ದಿವ್ಯಾ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Lokesh Rajendran: ಖ್ಯಾತ ಕಿರುತೆರೆ ನಟ ಆತ್ಮಹತ್ಯೆ; ಪತ್ನಿಯಿಂದ ಡಿವೋರ್ಸ್​ ನೋಟಿಸ್​ ಬಂದ ಬೆನ್ನಲ್ಲೇ ದುರಂತ ಅಂತ್ಯ

2017ರಿಂದ ದಿವ್ಯಾ-ಅಮ್ಜದ್ ಲಿವಿನ್​ ರಿಲೇಶನ್​​ಶಿಪ್​ನಲ್ಲಿದ್ದರು ಎನ್ನಲಾಗಿದೆ. ಅಮ್ಜದ್ ​​ಗೆ ಕೆಲಸ ಇಲ್ಲದೆ ಇದ್ದಾಗ ಅವರನ್ನು ನೋಡಿಕೊಂಡಿದ್ದು ದಿವ್ಯಾ ಎನ್ನಲಾಗಿದೆ. ದಿವ್ಯಾ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಅಮ್ಜದ್ ಮದುವೆ ಆಗಿದ್ದರು. 2022 ಜೂನ್​ನಲ್ಲಿ ಮುಸ್ಲಿಂ ಧರ್ಮದ ಪ್ರಕಾರ ಮದುವೆ ನಡೆದಿದೆ ಎನ್ನಲಾಗಿದೆ. ಆದರೆ, ಮದುವೆ ವಿಚಾರ ಗುಟ್ಟಾಗಿ ಇಡುವ ಆಲೋಚನೆ ಅಮ್ಜದ್​ಗೆ ಇತ್ತು. ಈಗ ಗರ್ಭಿಣಿ ಆದ ನಂತರದಲ್ಲಿ ಈ ವಿಚಾರವನ್ನು ದಿವ್ಯಾ ಗೆಳತಿಯರ ಜತೆ ಹಂಚಿಕೊಂಡಿದ್ದರು. ಮದುವೆಯ ವಿಚಾರ ರಿವೀಲ್ ಮಾಡಿದ್ದು ಏಕೆ ಎಂದು ಅಮ್ಜದ್ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ