Lakshana Serial: ಕಥೆಯ ರಿಯಲ್ ವಿಲನ್ ಹುಡುಕಾಟದಲ್ಲಿ ಭೂಪತಿ – ನಕ್ಷತ್ರ, ಯಾರು ಈ ಹೊಸ ವಿಲನ್
ಯಾರು ಈ ಹೊಸ ವಿಲನ್ ಎನ್ನುವ ಸಾವಿರ ಪ್ರಶ್ನೆ ಕಾಡುತ್ತದೆ. ಆಕೆಯ ಹುಡುಕಾಟಕ್ಕೆ ಭೂಪತಿ ಮತ್ತು ನಕ್ಷತ್ರ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಇದರಲ್ಲಿ ಯಶಸ್ವಿಯಾಗುತ್ತಾರ, ಯಾರು ಆಕೆಗೆ ಚಂದ್ರಶೇಖರ್ ಮೇಲೆ ಏನು ದ್ವೇಷ ಎನ್ನುವಂತಹದ್ದನ್ನು ಮುಂದೆ ಕಾದು ನೋಡಬೇಕಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮೌರ್ಯನನ್ನು ಕಿಡ್ನಾಪ್ ಮಾಡಿದ ಸ್ಥಳದ ಸಿಸಿ ಟಿವಿ ದೃಶ್ಯವನ್ನು ಪೋಲಿಸ್ ಭೂಪತಿಯ ಮೊಬೈಲ್‌ಗೆ ಕಳುಹಿಸುತ್ತಾರೆ. ಅದನ್ನು ನೋಡಿದ ಶಕುಂತಳಾದೇವಿ, ಭೂಪತಿ ಹಾಗೂ ನಕ್ಷತ್ರಳಿಗೆ ಶಾಕ್ ಆಗುತ್ತದೆ. ಯಾರು ಈ ಹೆಂಗಸು ಎನ್ನುವ ಗೊಂದಲದ ಪ್ರಶ್ನೆ ಭೂಪತಿಗೆ ಮೂಡುತ್ತದೆ.
ಮೌರ್ಯನಿಗೆ ಆಕೆ ಯಾರೆಂಬುದು ಗೊತ್ತಿರಬಹುದು ಅವರನ್ನೇ ವಿಚಾರಿಸುವ ಎಂದು ನಕ್ಷತ್ರ ಭೂಪತಿಯ ಬಳಿ ಹೇಳುತ್ತಾಳೆ. ಆ ತಕ್ಷಣನೇ ಅವರಿಬ್ಬರು ಮೌರ್ಯನನ್ನು ಕಾಣಲು ಜೈಲಿಗೆ ಹೊಗುತ್ತಾರೆ. ಅಲ್ಲಿ ಅವರನ್ನು ಕಂಡ ಮೌರ್ಯ ಅಮ್ಮ ಬರಲ್ಲಿಲ್ಲವಾ ಎಂದು ಕೇಳಿದಾಗ ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಅಮ್ಮ ಹೇಗೆ ಬರತ್ತಾರೆ ಅಂತಾ ನೀನು ಅಂದುಕೊಂಡಿದ್ದೀಯಾ ಎಂದು ಭೂಪತಿ ಕಟುವಾಗಿ ಹೇಳುತ್ತಾನೆ.
ಅಲ್ಲೇ ಇದ್ದ ನಕ್ಷತ್ರಳನ್ನು ಕಂಡು ಕೋಪಗೊಂಡ ಮೌರ್ಯ, ನನಗೆ ಬೇಕಾದವರೆ ಬರಲಿಲ್ಲ ಇವಳು ಯಾಕೆ ಇಲ್ಲಿಗೆ ಬಂದ್ಲು ಎಂದು ಭೂಪತಿಗೆ ಕೇಳುತ್ತಾನೆ. ಆಗ ನಕ್ಷತ್ರ ನಿಮ್ಮನ್ನು ಕಿಡ್ನಾಪ್ ಮಾಡಿದ ಆ ಹೆಂಗಸು ಯಾರು, ಅವಳ ಮುಖ ನೀವು ನೋಡಿದ್ದೀರಾ ಅಲ್ವಾ, ಯಾರು ಆಕೆ ಅವಳಿಗೇನು ನಿಮ್ಮ ಮೆಲೆ ದ್ವೇಷ ಎಂದು ಮೌರ್ಯನ ಬಳಿ ಕೇಳುತ್ತಾಳೆ. ನಕ್ಷತ್ರಳ ಈ ಮಾತನ್ನು ಕೇಳಿ ಮೌರ್ಯ ಜೋರಾಗಿ ನಕ್ಕು ಅವಳಿಗೆ ನನ್ನ ಮೇಲೆ ಯಾವ ದ್ವೇಷನೂ ಇಲ್ಲ. ಅವಳಿಗೆ ದ್ವೇಷ ಇರುವಂತಹದ್ದು ಆ ಸಿ.ಎಸ್ ಮೇಲೆ ಎಂದು ರೋಷದಿಂದ ಹೇಳಿದಾಗ, ನೀನು ಖಂಡಿತವಾಗಿಯೂ ಆ ಹೆಂಗಸಿನ ಮುಖವನ್ನು ನೋಡಿರುತ್ತೀಯಾ, ಆಕೆಯ ಹೆಸರೇನು ಎಂದು ಭೂಪತಿ ಪ್ರಶ್ನೆ ಮಾಡುತ್ತಾನೆ. ಆ ಹೆಂಗಸಿನ ಮುಖವನ್ನು ನೋಡಿಲ್ಲ. ಆಕೆ ಡೆವಿಲ್ ಅವಳ ಬೇಟೆ ಚಂದ್ರಶೇಖರ್ ಮತ್ತು ಅವನ ಮಗಳು ಅಂತಾ ಮೌರ್ಯ ಹೇಳುತ್ತಾನೆ.
ಮೌರ್ಯನ ಮಾತಿಗೆ ಕೋಪಗೊಂಡು ನನ್ನ ಅಪ್ಪನ ಬಗ್ಗೆ ಇಲ್ಲಸಲ್ಲದ ಮಾತನ್ನು ಆಡಬೇಡಿ. ಆ ಹೆಂಗಸಿಗೆ ಯಾಕೆ ನನ್ನ ತಂದೆಯ ಮೇಲೆ ದ್ವೇಷವಿರಲು ಸಾಧ್ಯ ನೀವು ಸುಳ್ಳು ಹೇಳುತ್ತಿದ್ದೀರಾ ಎಂದು ಹೇಳುತ್ತಾಳೆ ನಕ್ಷತ್ರ. ಅದೇ ವೇಳೆಗೆ ಚಂದ್ರಶೇಖರ್ ಕೂಡಾ ಸ್ಟೇಷನ್‌ಗೆ ಬರುತ್ತಾರೆ. ಅವರನ್ನು ಕಂಡು ಕೋಪಗೊಂಡು ನಿನ್ನ ನೆಮ್ಮದಿಯನ್ನು ಹಾಳು ಮಾಡಲು ಆ ಡೆವಿಲ್ ಹೆಂಗಸು ಅಖಾಡಕ್ಕೆ ಇಳಿದಿದ್ದಾರೆ, ನನ್ನ ದ್ವೇಷವನ್ನು ಆ ಹೆಂಗಸು ಕಂಪ್ಲೀಟ್ ಮಾಡುತ್ತಾಳೆ. ನಾನು ಜೈಲಲ್ಲಿ ಇದ್ದರೂ ನೆಮ್ಮದಿಯಾಗಿಯೇ ಇರುತ್ತೇನೆ ಎಂದು ಹೇಳಿ ಜೋರಾಗಿ ನಗುತ್ತಾನೆ.
ಮೌರ್ಯನ ಮಾತನ್ನು ಕೇಳಿ ಎಲ್ಲರಿಗೂ ಟೆನ್ಶನ್ ಶುರುವಾಗುತ್ತದೆ. ಯಾರು ಈ ಡೆವಿಲ್, ಯಾರು ಈ ಹೊಸ ವಿಲನ್ ಎನ್ನುವ ಸಾವಿರ ಪ್ರಶ್ನೆ ಕಾಡುತ್ತದೆ. ಆಕೆಯ ಹುಡುಕಾಟಕ್ಕೆ ಭೂಪತಿ ಮತ್ತು ನಕ್ಷತ್ರ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಇದರಲ್ಲಿ ಯಶಸ್ವಿಯಾಗುತ್ತಾರ, ಆ ಲೇಡಿ ವಿಲನ್ ಯಾರು ಆಕೆಗೆ ಚಂದ್ರಶೇಖರ್ ಮೇಲೆ ಏನು ದ್ವೇಷ ಎನ್ನುವಂತಹದ್ದನ್ನು ಮುಂದೆ ಕಾದು ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 11:11 am, Fri, 7 October 22