AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೊರಗಿದ್ದಾಗ ಎರಡೇ ಬಟ್ಟೆ ಇತ್ತು’; ‘ಬಿಗ್ ಬಾಸ್​​’ಗೆ ಬಂದ ನಂತರದಲ್ಲಿ ಬದಲಾಯ್ತು ನವಾಜ್ ಜೀವನ

ವಿಜಯ ದಶಮಿ ಪ್ರಯುಕ್ತ ಎಲ್ಲರಿಗೂ ಮನೆಯಿಂದ ಬಟ್ಟೆ ಕಳುಹಿಸಲಾಗಿತ್ತು. ಅದೇ ರೀತಿ ನವಾಜ್​ಗೂ ವಿವಿಧ ರೀತಿಯ ಬಟ್ಟೆಗಳು ಬಂದವು. ಅದರಲ್ಲಿ ಯಾವುದನ್ನು ಹಾಕಿಕೊಳ್ಳಬೇಕು ಎಂಬುದೇ ಅವರಿಗೆ ಗೊಂದಲ ಆಯಿತು.

‘ಹೊರಗಿದ್ದಾಗ ಎರಡೇ ಬಟ್ಟೆ ಇತ್ತು’; ‘ಬಿಗ್ ಬಾಸ್​​’ಗೆ ಬಂದ ನಂತರದಲ್ಲಿ ಬದಲಾಯ್ತು ನವಾಜ್ ಜೀವನ
ನವಾಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 06, 2022 | 10:36 PM

‘ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ (BBK 9) ಸೈಕ್ ನವಾಜ್ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ನಾನಾ ಕ್ಷೇತ್ರದವರು ಈ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ಇದರಿಂದ ಮನರಂಜನೆ ಹೆಚ್ಚಿದೆ. ತಮ್ಮದೇ ಶೈಲಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ಫೇಮಸ್ ಆದ ನವಾಜ್ (Nawaz) ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಮೊದಲ ವಾರವೇ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ತುಂಬಾನೇ ಕಷ್ಟ ನೋಡಿ ಬಂದವರು ಅವರು. ಅದನ್ನು ಬಿಗ್ ಬಾಸ್ ಮನೆಯಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದಿದೆ. ಈಗ ಅವರು ಮತ್ತೊಂದು ವಿಚಾರ ಬಿಚ್ಚಿಟ್ಟಿದ್ದಾರೆ.

ನವಾಜ್​ ಬಡತನ ಕಂಡು ಬಂದವರು. ಅವರಿಗೆ ಬಿಗ್ ಬಾಸ್ ಬೇರೆಯದೇ ಲೋಕ ಎಂಬಂತೆ ಫೀಲ್ ಆಗುತ್ತಿದೆ. ಮೊದಲ ವಾರ ಅವರು ಸಾಕಷ್ಟು ಸಿಟ್ಟು ಮಾಡುತ್ತಿದ್ದರು. ಆದರೆ, ಈಗ ಬದಲಾಗಿದ್ದಾರೆ. ಶಾಂತರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ. ಅವರನ್ನು ಟ್ರಿಗರ್ ಮಾಡುವ ಯಾವುದೇ ವಿಚಾರವೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿಲ್ಲ. ಈ ಕಾರಣದಿಂದ ಅವರು ಸೈಲೆಂಟ್ ಆಗಿದ್ದಾರೆ ಎಂದು ಅರುಣ್ ಸಾಗರ್ ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ವಿಜಯ ದಶಮಿ ಪ್ರಯುಕ್ತ ಎಲ್ಲರಿಗೂ ಮನೆಯಿಂದ ಬಟ್ಟೆ ಕಳುಹಿಸಲಾಗಿತ್ತು. ಅದೇ ರೀತಿ ನವಾಜ್​ಗೂ ವಿವಿಧ ರೀತಿಯ ಬಟ್ಟೆಗಳು ಬಂದವು. ಅದರಲ್ಲಿ ಯಾವುದನ್ನು ಹಾಕಿಕೊಳ್ಳಬೇಕು ಎಂಬುದೇ ಅವರಿಗೆ ಗೊಂದಲ ಆಯಿತು. ಈ ಕ್ಷಣವನ್ನು ನೋಡಿ ಅವರು ಸಖತ್ ಖುಷಿಪಟ್ಟರು. ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡರು.

ಇದನ್ನೂ ಓದಿ
Image
‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್
Image
ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
ನೀಲಕುರಂಜಿ ಹೂಗಳ ಸೌಂದರ್ಯಕ್ಕೆ ಮಾರು ಹೋದ ಬಿಗ್ ಬಾಸ್ ಬೆಡಗಿ ದಿವ್ಯಾ ಉರುಡುಗ

ಇದನ್ನೂ ಓದಿ: ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್

‘ಹೊರಗಡೆ ಇದ್ದಾಗ ನನ್ನ ಬಳಿ ಎರಡು ಬಟ್ಟೆ ಮಾತ್ರ ಇತ್ತು. ಎರಡು ಜೀನ್ಸ್, ಎರಡು ಶರ್ಟ್ ಇತ್ತು. ಅದನ್ನೇ ಎಲ್ಲ ಕಡೆಗಳಲ್ಲೂ ಹಾಕಿಕೊಂಡು ಹೋಗ್ತಿದ್ದೆ. ಎಲ್ರೂ ಯಾಕೆ ಬೇರೆ ಬಟ್ಟೆ ಹಾಕಿಕೊಂಡು ಬರಲ್ಲ ಎಂದು ಕೇಳುತ್ತಿದ್ದರು. ಇದು ನನ್ನ ಇಷ್ಟದ ಡ್ರೆಸ್ ಅದಕ್ಕೆ ಹಾಕಿಕೊಂಡು ಬರ್ತೀನಿ ಅಂತಿದ್ದೆ. ಆದರೆ, ನನ್ನತ್ರ ಬಟ್ಟೆಯೇ ಇರಲಿಲ್ಲ. ಈಗ ಇಷ್ಟು ಬಟ್ಟೆ ಕಳುಹಿಸಿದ್ದಾರೆ. ಬಹುಶಃ ಇದನ್ನು ಕಳುಹಿಸಿದ್ದು ನನ್ನ ಫ್ರೆಂಡ್ಸ್ ಅನಿಸುತ್ತದೆ. ಈಗ ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಎಂಬುದೇ ಕನ್ಫ್ಯೂಸ್ ಆಗ್ತಿದೆ’ ಎಂದು ನವಾಜ್ ಸಂತಸ ಹೊರಹಾಕಿದ್ದಾರೆ.

Published On - 10:30 pm, Thu, 6 October 22