BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ

Bigg Boss Kannada Season 9: ನಾಮಿನೇಟ್​ ಆದವರಿಗೆ ಖಂಡಿತವಾಗಿಯೂ ಢವಢವ ಶುರುವಾಗಿರುತ್ತದೆ. ಪ್ರತಿ ಟಾಸ್ಕ್​ ಕೂಡ ಚೆನ್ನಾಗಿ ಆಡಲೇ ಬೇಕಾಗುತ್ತದೆ.

BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
ಬಿಗ್ ಬಾಸ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 25, 2022 | 11:03 PM

ಸುಮಾರು ನೂರು ದಿನಗಳ ಕಾಲ ಬಿಗ್​ ಬಾಸ್​ (Bigg Boss Kannada) ರಿಯಾಲಿಟಿ ಶೋ ನಡೆಯಲಿದೆ. ಫಿನಾಲೆವರೆಗೂ ಸ್ಪರ್ಧಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಟ್ರೋಫಿ ಗೆಲ್ಲಬೇಕು ಅಂತಲೇ ಪ್ರತಿಯೊಬ್ಬರೂ ಪೈಪೋಟಿ ನೀಡುತ್ತಾರೆ. ಮೊದಲ ವಾರವೇ ಎಲಿಮಿನೇಟ್​ ಆಗಿಬಿಟ್ಟರೆ ನಿಜಕ್ಕೂ ಬೇಸರ ಆಗುತ್ತದೆ. ಹಾಗಂತ ಎಲಿಮಿನೇಷನ್​ (Bigg Boss Elimination) ತಪ್ಪಿಸಲು ಸಾಧ್ಯವಿಲ್ಲ. ಒಬ್ಬರಲ್ಲಾ ಒಬ್ಬರು ಎಲಿಮಿನೇಟ್​ ಆಗಲೇಬೇಕು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಆರಂಭ ಆಗಿದೆ. ಇದರಲ್ಲಿ ಮೊದಲ ವಾರವೇ ಯಾರು ಔಟ್​ ಆಗುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. 18 ಜನರು ಈಗ ಸ್ಪರ್ಧೆ ನಡೆಸುತ್ತಿದ್ದಾರೆ. ಅಚ್ಚರಿ ಎಂದರೆ ಮೊದಲ ವಾರ ಬರೋಬ್ಬರಿ 12 ಜನರು ನಾಮಿನೇಟ್​ ಆಗಿದ್ದಾರೆ.

ಕಿಚ್ಚ ಸುದೀಪ್​ ಅವರ ಸಾರಥ್ಯದಲ್ಲಿ ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ ಮೂಡಿಬರುತ್ತಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಶೋನಲ್ಲಿ ಒಟ್ಟು 18 ಜನರಿಗೆ ಅವಕಾಶ ಸಿಕ್ಕಿದೆ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್​ ಸಂಬರ್ಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕ್ಯಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ.

ನಾಮಿನೇಟ್​ ಆದವರಿಗೆ ಖಂಡಿತವಾಗಿಯೂ ಢವಢವ ಶುರುವಾಗಿರುತ್ತದೆ. ಪ್ರತಿ ಟಾಸ್ಕ್​ ಕೂಡ ಚೆನ್ನಾಗಿ ಆಡಲೇ ಬೇಕಾಗುತ್ತದೆ. ಮನೆಯ ಸದಸ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ವೀಕ್ಷಕರನ್ನು ಎಷ್ಟರಮಟ್ಟಿಗೆ ಮನರಂಜಿಸುತ್ತಾರೆ ಎಂಬುದೆಲ್ಲವೂ ಪರಿಗಣನೆಗೆ ಬರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಆಟ ಆಡಲು ಎಲ್ಲರೂ ಸಜ್ಜಾಗಿದ್ದಾರೆ.

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Image
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Image
BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​

‘ಮೊದಲ ವಾರವೇ ನಾಮಿನೇಟ್​ ಆಗಬಾರದು ಎಂದುಕೊಂಡಿದ್ದೆ. ಆದರೆ ಆಗಿ ಹೋಯ್ತು’ ಎಂದು ರೂಪೇಶ್​ ರಾಜಣ್ಣ ಬೇಸರ ಮಾಡಿಕೊಂಡಿದ್ದಾರೆ. ಇನ್ನುಳಿದ ಸ್ಪರ್ಧಿಗಳಾದ ರಾಕೇಶ್​ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್​, ನೇಹಾ ಗೌಡ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ.

ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಈ ಬಾರಿ ಬಿಗ್​ ಬಾಸ್​ನಲ್ಲಿ ಪರಿಚಯಿಸಲಾಗಿದೆ. ಹೊಸಬರನ್ನು ಮತ್ತು ಹಳಬರನ್ನು ಜೋಡಿಯಾಗಿಸಿ ಟಾಸ್ಕ್​ಗಳನ್ನು ಆಡಿಸಲಾಗುತ್ತಿದೆ. ಮೊದಲ ದಿನ ನಡೆದ ಟಾಸ್ಕ್​ನಲ್ಲಿ ಪ್ರಶಾಂ​ತ್ ಸಂಬರ್ಗಿ ಹಾಗೂ ವಿನೋದ್​ ಗೊಬ್ಬರಗಾಲ ಜೋಡಿ ವಿನ್​ ಆಗಿದೆ. ‘ಫಸ್ಟ್​ ಟಾಸ್ಕ್​ ಗೆದ್ದಿದ್ದಕ್ಕಾಗಿ ಐಸ್​ ಕ್ರೀಮ್​ ಅಥವಾ ಏನಾದರೂ ಕೊಡಿ’ ಎಂದು ಬಿಗ್​​ ಬಾಸ್​ ಬಳಿ ಪ್ರಶಾಂತ್​ ಸಂಬರ್ಗಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:03 pm, Sun, 25 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ