AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ

Prashanth Sambargi: ಪ್ರಶಾಂತ್​ ಸಂಬರ್ಗಿ ಸವಾಲು ಹಾಕಿದ್ದಾರೆ. ಅವರಿಗೆ ತಿರುಗೇಟು ನೀಡಲು ಆರ್ಯವರ್ಧನ್​ ಗುರೂಜಿ ಸಜ್ಜಾಗಿದ್ದಾರೆ. ಸಂಬರ್ಗಿ ವರ್ತನೆಯನ್ನು ಮನೆಯ ಇತರೆ ಸದಸ್ಯರು ಖಂಡಿಸಿದ್ದಾರೆ. 

BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
ಪ್ರಶಾಂತ್​ ಸಂಬರ್ಗಿ, ಆರ್ಯವರ್ಧನ್​ ಗುರೂಜಿ, ದರ್ಶ್​
TV9 Web
| Edited By: |

Updated on: Sep 25, 2022 | 3:48 PM

Share

ಪ್ರಶಾಂತ್​ ಸಂಬರಗಿ (Prashanth Sambargi) ಇದ್ದಲ್ಲಿ ಜಗಳ ಖಚಿತ. ಎಲ್ಲರ ಜೊತೆಗೂ ಅವರು ಕಿರಿಕ್​ ಮಾಡಿಕೊಳ್ಳುತ್ತಾರೆ. ಕಳೆದ ಸೀಸನ್​ನಲ್ಲಿ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದಾಗ ಅನೇಕರ ಜತೆ ಜಗಳ ಮಾಡಿಕೊಂಡಿದ್ದರು. ಈಗ ಅವರು ‘ಬಿಗ್​ ಬಾಸ್​ ಕನ್ನಡ 9ನೇ ಸೀಸನ್​’ (Bigg Boss Kannada Season 9) ಸ್ಪರ್ಧಿಯಾಗಿ ಮತ್ತೆ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಆರಂಭದಲ್ಲಿಯೇ ಅವರು ತಮ್ಮ ವರಸೆ ತೋರಿಸಿದ್ದಾರೆ. ಅದರಿಂದಾಗಿ ಪ್ರಶಾಂತ್​ ಸಂಬರ್ಗಿ ಬಗ್ಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಬೇಸರ ಉಂಟಾಗಿದೆ. ಆರ್ಯವರ್ಧನ್​ ಗುರೂಜಿ (Aryavardhan Guruji) ವಿಚಾರದಲ್ಲಿ ಪ್ರಶಾಂತ್​ ಸಂಬರ್ಗಿ ಕಿರಿಕ್​ ತೆಗೆದಿದ್ದಾರೆ. ಅಲ್ಲಿಂದ ಶುರುವಾದ ಜಗಳ ಬೇರೊಂದು ಹಂತಕ್ಕೆ ಹೋಗಿದೆ.

ಒಟ್ಟು 18 ಸ್ಪರ್ಧಿಗಳು ಈ ಬಾರಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಅದರಲ್ಲಿ 9 ಜನರು ಹಳಬರು. ಅಂದರೆ ಈ ಹಿಂದಿನ ಸೀಸನ್​ಗಳಿಂದ 5​ ಹಾಗೂ ಇತ್ತೀಚೆಗೆ ಅಂತ್ಯವಾದ ಬಿಗ್​ ಬಾಸ್​ ಕನ್ನಡ ಒಟಿಟಿ ಆವೃತ್ತಿಯ 4 ಜನರು ಈ ಹೊಸ ಸೀಸನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಳೇ ಸ್ಪರ್ಧಿಗಳ ಗುಣ ಏನೆಂಬುದು ಪ್ರೇಕ್ಷಕರಿಗೆ ಈಗಾಗಲೇ ಗೊತ್ತಾಗಿದೆ. ಕಿರಿಕ್​ ಸ್ವಭಾವದ ಪ್ರಶಾಂತ್​ ಸಂಬರ್ಗಿ ಕಿಂಚಿತ್ತೂ ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಮೊದಲ ದಿನ ಏನೆಲ್ಲ ನಡೆಯಿತು ಎಂಬುದರ ಝಲಕ್​ ತೋರಿಸಲು ‘ಕಲರ್ಸ್​ ಕನ್ನಡ’ ವಾಹಿನಿ ತನ್ನ ಸೋಶಿಯಲ್​ ಮೀಡಿಯಾದಲ್ಲಿ ಒಂದು ಪ್ರೋಮೋ ಹಂಚಿಕೊಂಡಿದೆ. ಎಲ್ಲರೂ ಕುಳಿತು ಮಾತನಾಡುತ್ತಿರುವಾಗ ‘ನಾನು 10 ಲಕ್ಷ ಜನರಿಗೆ ಜೋತಿಷ್ಯ ಹೇಳಿರಬಹುದು’ ಎಂದು ಆರ್ಯವರ್ಧನ್​ ಗುರೂಜಿ ಹೇಳಿದರು. ಅದಕ್ಕೆ ಪ್ರಶಾಂತ್​ ಸಂಬರ್ಗಿ ವಿರೋಧ ವ್ಯಕ್ತಪಡಿಸಿದರು. ‘ಗುರುಗಳೇ 10 ಲಕ್ಷ ಅಂತ ಏನೇನೋ ಮಾತಾಡಬೇಡಿ’ ಎಂದು ತಕರಾರು ತೆಗೆದರು. ಅಲ್ಲಿಂದ ಜಗಳ ತಾರಕಕ್ಕೇರಿತು.

‘ಗುರೂಜಿಯ ನಿಜವಾದ ಹೆಸರು ಆರ್ಯವರ್ಧನ್​ ಅಲ್ಲ. ನಿಜವಾದ ಹೆಸರು ಹೇಳ್ಲಾ?’ ಎಂದು ಪ್ರಶಾಂತ್​ ಸಂಬರ್ಗಿ ಸವಾಲು ಹಾಕಿದ್ದಾರೆ. ಅತ್ತ ಆರ್ಯವರ್ಧನ್​ ಗುರೂಜಿ ಕೂಡ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಪ್ರಶಾಂತ್​ ಸಂಬರ್ಗಿ ಆಡಿದ ಮಾತುಗಳನ್ನೆಲ್ಲ ಕೇಳಿಸಿಕೊಂಡು ಮನೆಯ ಇತರೆ ಸದಸ್ಯರು ಸುಮ್ಮನೆ ಕುಳಿತಿಲ್ಲ. ಅವರ ವರ್ತನೆಯನ್ನು ಖಂಡಿಸಿದ್ದಾರೆ. ಈ ಹಿಂದಿನ ಸೀಸನ್​ನಲ್ಲಿ ಅವರು ತೋರಿಸಿದ ಡಬಲ್​ ಗೇಮ್​ ಬುದ್ಧಿಯ ಬಗ್ಗೆ ಖಂಡನೆ ವ್ಯಕ್ತವಾಗಿದೆ. ‘ಬಿಗ್​ ಬಾಸ್​ನಲ್ಲಿ ಇರುವಾಗ ಚೆನ್ನಾಗಿದ್ದು, ನಂತರ ಹೊರಬಂದ ಬಳಿಕ ಹೆಣ್ಮಕ್ಕಳ ಬಗ್ಗೆ ಕಚಡವಾಗಿ ಮಾತನಾಡುತ್ತಿದ್ದರು’ ಎಂದು ನಟ ದರ್ಶ್​ ಛಾಟಿ ಬೀಸಿದ್ದಾರೆ.

ಶನಿವಾರ (ಸೆ.24) ಅದ್ದೂರಿಯಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಿದೆ. ಪ್ರತಿ ರಾತ್ರಿ 9.30ಕ್ಕೆ ಹೊಸ ಎಪಿಸೋಡ್​ ಬಿತ್ತರ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ