AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಕೆಆರ್‌ಎಸ್​ನಲ್ಲಿ ನೀರಿನ ಅಭಾವದ ಭೀತಿ: ಆಲಮಟ್ಟಿ ಭರ್ತಿ!

ತಮಿಳುನಾಡಿಗೆ ನೀರು ಹರಿಸುವ ಆದೇಶದ ಬೆನ್ನಲ್ಲೇ ಕಾವೇರಿ ಕೊಳ್ಳದ ಕೆಆರ್‌ಎಸ್ ಜಲಾಶಯ ಭರ್ತಿಯಾಗದೆ ಆತಂಕ ಮೂಡಿಸಿದೆ. ಆದರೆ ಆಲಮಟ್ಟಿ ಹಾಗೂ ಕಬಿನಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಭರ್ತಿಯ ಹಂತ ತಲುಪಿವೆ. ಕೆಆರ್‌ಎಸ್, ಆಲಮಟ್ಟಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಇಂದಿನ ನೀರಿನ ಮಟ್ಟ ಹಾಗೂ ಒಳಹರಿವು-ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.

Karnataka Dam Water Level: ಕೆಆರ್‌ಎಸ್​ನಲ್ಲಿ ನೀರಿನ ಅಭಾವದ ಭೀತಿ: ಆಲಮಟ್ಟಿ ಭರ್ತಿ!
ಕೆಆರ್‌ಎಸ್​ನಲ್ಲಿ ನೀರಿನ ಅಭಾವದ ಭೀತಿ: ಆಲಮಟ್ಟಿ ಭರ್ತಿ!
ಭಾವನಾ ಹೆಗಡೆ
|

Updated on:Jul 31, 2026 | 12:33 PM

Share

ಮುಖ್ಯಾಂಶಗಳು

  • ತಮಿಳುನಾಡಿಗೆ ನೀರು ಬಿಡುವ ಆದೇಶದ ನಡುವೆ ಕೆಆರ್‌ಎಸ್ ಕಂಗೆಟ್ಟು ನಿಂತಿದೆ.
  • ಕಬಿನಿ ಹಾಗೂ ಆಲಮಟ್ಟಿ ಜಲಾಶಯಗಳಿಗೆ ಅಪಾರ ಪ್ರಮಾಣದ ಒಳಹರಿವು ಹೆಚ್ಚಾಗಿದೆ.
  • ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಪೂರ್ಣ ವಿವರ.

ಬೆಂಗಳೂರು, ಜುಲೈ 31: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಬಿದ್ದ ಬೆನ್ನಲ್ಲೇ ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಕೆಆರ್‌ಎಸ್‌ನಲ್ಲಿ ನೀರಿನ ಅಭಾವ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 90 ಅಡಿ ದಾಟಿದ್ದರೂ ಸಹ, ಸದ್ಯಕ್ಕೆ 92.85 ಅಡಿಯಲ್ಲೇ ಸ್ಥಿರವಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನೂ ಬಹುದೂರ ಸಾಗಬೇಕಿದೆ. ಒಂದು ಕಡೆ ಮಳೆಯ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೇ ಕಂಗೆಟ್ಟಿದ್ದರೆ, ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕೆ ಎದುರಾಗಿದೆ. ಆದರೆ ಕೃಷ್ಣಾ ಕೊಳ್ಳದ ಆಲಮಟ್ಟಿ ಹಾಗೂ ಕಾವೇರಿ ಕೊಳ್ಳದ ಕಬಿನಿ ಮತ್ತು ಹಾರಂಗಿ ಜಲಾಶಯಗಳಿಗೆ ಉತ್ತಮ ಒಳಹರಿವು ಇರುವುದು ಕೊಂಚ ಸಮಾಧಾನ ತಂದಿದೆ.

1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ – ವಿಜಯಪುರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.10 ಮೀಟರ್
  • ಒಳಹರಿವು: 82,743 ಕ್ಯೂಸೆಕ್
  • ಹೊರಹರಿವು: 1,11,308 ಕ್ಯೂಸೆಕ್

ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

2. ಕೆ.ಆರ್.ಎಸ್. ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.85 ಅಡಿ
  • ಒಳಹರಿವು: 7,058 ಕ್ಯೂಸೆಕ್
  • ಹೊರಹರಿವು: 1,706 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 17.708 ಟಿಎಂಸಿ

3. ಕಬಿನಿ ಜಲಾಶಯ (ಮೈಸೂರು)

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 78.38 ಅಡಿ
  • ಒಳಹರಿವು: 9,133 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
  • ಇಂದಿನ ಸಂಗ್ರಹ: 16.12 ಟಿಎಂಸಿ

ವಯನಾಡು ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಕಬಿನಿ ಭರ್ತಿಗೆ ಕೇವಲ 6 ಅಡಿ ಬಾಕಿಯಿದ್ದು, ಇನ್ನೆರಡು ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆಯಿದೆ.

4. ಹಾರಂಗಿ ಜಲಾಶಯ (ಕೊಡಗು/ಕುಶಾಲನಗರ)

  • ಗರಿಷ್ಠ ಮಟ್ಟ: 2,859 ಅಡಿ
  • ಇಂದಿನ ಮಟ್ಟ: 2,857.88 ಅಡಿ
  • ಒಳಹರಿವು: 4,008 ಕ್ಯೂಸೆಕ್
  • ಹೊರಹರಿವು (ನದಿಗೆ):3,700 ಕ್ಯೂಸೆಕ್

5. ಹೇಮಾವತಿ ಜಲಾಶಯ (ಹಾಸನ/ಗೊರೂರು)

  • ಗರಿಷ್ಠ ಮಟ್ಟ: 2,922 ಅಡಿ (37 TMC)
  • ಇಂದಿನ ಮಟ್ಟ: 2,907.75 ಅಡಿ (25.019 TMC)
  • ಒಳಹರಿವು: 5,445 ಕ್ಯೂಸೆಕ್
  • ಹೊರಹರಿವು:500 ಕ್ಯೂಸೆಕ್ (ಕಾಲುವೆಗೆ zero)

ಕಳೆದ ವರ್ಷ ಇದೇ ದಿನ: 2,921 ಅಡಿ, 36.137 TMC ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೇಮಾವತಿಯಲ್ಲಿ ನೀರಿನ ಸಂಗ್ರಹ ಕೊಂಚ ಕಡಿಮೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 am, Fri, 31 July 26

Follow Us
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು