AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾ ಕಂಪನಿಗಳು ದಿವಾಳಿ ಎದ್ದರೆ ಗ್ರಾಹಕರ ಹಣಕ್ಕೆ ಏನು ಕಥೆ? ಸುರಕ್ಷತಾ ವ್ಯವಸ್ಥೆ ನಿರ್ಮಿಸುವಂತೆ ಪ್ರಧಾನಿಗೆ ಮನವಿ

ಜೀವ ವಿಮಾ ಸಂಸ್ಥೆಗಳು ದಿವಾಳಿಯಾಗಿಬಿಟ್ಟರೆ ಅವುಗಳ ಗ್ರಾಹಕರ ಇನ್ಷೂರೆನ್ಸ್ ಪ್ಲಾನ್​ಗಳಿಗೆ ಏನು ಆಗುತ್ತದೆ? ಬ್ಯಾಂಕುಗಳಲ್ಲಿ ಗ್ರಾಹಕರ 5 ಲಕ್ಷ ರೂ ಡೆಪಾಸಿಟ್​ಗಳಿಗೆ ವಿಮಾ ಭದ್ರತೆ ಇರುವಂತೆ ವಿಮಾ ಪ್ಲಾನ್​ಗಳಿಗೆ ಏನಿದೆ ಭದ್ರತೆ? ಬಿಜೆಪಿ ಸಂಸದ ಅಜೀತ್ ಮಾಧವರಾವ್ ಗೋಪಚಡೆ ಅವರು ಇಂಥದ್ದೊಂದು ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಗಮನಕ್ಕೂ ತಂದಿದ್ದಾರೆ.

ವಿಮಾ ಕಂಪನಿಗಳು ದಿವಾಳಿ ಎದ್ದರೆ ಗ್ರಾಹಕರ ಹಣಕ್ಕೆ ಏನು ಕಥೆ? ಸುರಕ್ಷತಾ ವ್ಯವಸ್ಥೆ ನಿರ್ಮಿಸುವಂತೆ ಪ್ರಧಾನಿಗೆ ಮನವಿ
ಜೀವ ವಿಮಾImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2026 | 7:04 PM

Share

ನವದೆಹಲಿ, ಅಕ್ಟೋಬರ್ 1: ಬ್ಯಾಂಕುಗಳಲ್ಲಿ ಗ್ರಾಹಕರ ಠೇವಣಿ ರಕ್ಷಿಸಲು ಒಂದು ಕಾನೂನು ಇದೆ. ಜೀವ ವಿಮಾ ಗ್ರಾಹಕರ ಹಣ ರಕ್ಷಿಸಲು ಏನಿದೆ ಕಾನೂನು? ಜನಪ್ರತಿನಿಧಿಯೊಬ್ಬರು ಈ ಪ್ರಶ್ನೆಯನ್ನು ಕೇಳಿದ್ದಾರೆ. ನೇರ ಪ್ರಧಾನಿಯವರಿಗೇ ಪತ್ರ ಬರೆದು ಮನವಿ ಮಾಡಿದ್ದಾರೆ. ಲೈಫ್ ಇನ್ಶೂರೆನ್ಸ್ ಕಂಪನಿಯೊಂದು ದಿವಾಳಿಯಾದರೆ ಅಥವಾ ಕಾರ್ಯನಿರ್ವಹಿಸಲು ವಿಫಲವಾದರೆ, ಲಕ್ಷಾಂತರ ಪಾಲಿಸಿದಾರರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಅವರ ಹಣಕ್ಕೆ ರಕ್ಷಣೆ ನೀಡಲು ಬಲವಾದ ‘ಸೇಫ್ಟಿ ನೆಟ್’ (ಸುರಕ್ಷತಾ ವ್ಯವಸ್ಥೆ) ರೂಪಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸಂಸದ ಅಜೀತ್ ಮಾಧವರಾವ್ ಗೋಪಚಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಪಾಲಿಸಿದಾರರ ಹಿತರಕ್ಷಣೆ: ವಿಮಾ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ, ಸಾಮಾನ್ಯ ಜನರು ಹೂಡಿಕೆ ಮಾಡಿದ ಪ್ರೀಮಿಯಂ ಹಣ ಮತ್ತು ವಿಮಾ ಮೊತ್ತಕ್ಕೆ ಅಪಾಯ ಎದುರಾಗದಂತೆ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಬಹುದಾದ ರಕ್ಷಣಾತ್ಮಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಈ ಪತ್ರದಲ್ಲಿ ವಿನಂತಿಸಲಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಎರಡು ಲಕ್ಷ ಕೋಟಿ ರೂ ದಾಟಿದ ಜಿಎಸ್​ಟಿ ಸಂಗ್ರಹ; ಈ ವರ್ಷ ಇಲ್ಲಿಯವರೆಗೆ ಸಿಕ್ಕಿದ್ದು 12 ಲಕ್ಷ ಕೋಟಿಗೂ ಹೆಚ್ಚು

ಬ್ಯಾಂಕಿಂಗ್ ಮಾದರಿಯ ಸುರಕ್ಷತೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಠೇವಣಿದಾರರ ಹಣಕ್ಕೆ ‘DICGC’ (ಡಿಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್) ಮೂಲಕ ನಿರ್ದಿಷ್ಟ ಪ್ರಮಾಣದ ಭದ್ರತೆ ಇರುವಂತೆಯೇ, ಜೀವ ವಿಮಾ ರಂಗದಲ್ಲೂ ಪಾಲಿಸಿದಾರರ ಹೂಡಿಕೆಗೆ ಬಲವಾದ ಗ್ಯಾರಂಟಿ/ಸುರಕ್ಷತಾ ಚೌಕಟ್ಟು ಅಗತ್ಯವಿದೆ ಎಂಬುದನ್ನು ಒತ್ತಿಹೇಳಲಾಗಿದೆ.

ಶಾಸನಾತ್ಮಕವಾದ ಪಾಲಿಸಿದಾರರ ಭದ್ರತಾ ಯೋಜನೆ ರಚಿಸಬೇಕು. ಲೈಫ್ ಇನ್ಷೂರೆನ್ಸ್, ಲಾಂಗ್ ಟರ್ಮ್ ಮತ್ತು ಜನರಲ್ ಇನ್ಷೂರೆನ್ಸ್ ಪಾಲಿಸಿದಾರರಿಗೆ ಬೇರೆ ಬೇರೆ ಮಟ್ಟದ ಪ್ರೊಟೆಕ್ಷನ್ ನಿಯಮಗಳನ್ನು ರಚಿಸಬಹುದು ಎಂದು ಅಜೀತ್ ಮಾಧವರಾವ್ ಅವರು ಸಲಹೆ ನೀಡಿದ್ದಾರೆ.

ಒಂದು ವೇಳೆ, ಇನ್ಷೂರೆನ್ಸ್ ಕಂಪನಿ ದಿವಾಳಿ ಎದ್ದರೆ, ಅದರೊಂದಿಗೆ ಇರುವ ಸಾರ್ವಜನಿಕರ ಇನ್ಷೂರೆನ್ಸ್ ಪಾಲಿಸಿಗಳನ್ನು ಬೇರೆ ವಿಮಾ ಸಂಸ್ಥೆಗೆ ಸಕಾಲಿಕವಾಗಿ ವರ್ಗಾವಣೆ ಮಾಡುವಂತಹ ಒಂದು ವ್ಯವಸ್ಥೆ ರಚಿಸಬೇಕು ಎಂದೂ ಬಿಜೆಪಿ ಸಂಸದರು ಸೆಪ್ಟೆಂಬರ್ 25ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸುಕನ್ಯಾ ಸಮೃದ್ದಿ, ಕೆವಿಪಿ, ಎನ್​ಎಸ್​ಸಿ, ಪಿಪಿಎಫ್, ಟೈಮ್ ಡೆಪಾಸಿಟ್ ಸ್ಕೀಮ್​ಗಳಿಂದ ಸಿಗುವ ಲಾಭವೆಷ್ಟು? ಇಲ್ಲಿದೆ ಲೆಕ್ಕಾಚಾರ

ಖಾಸಗಿ ವಿಮಾ ವಲಯದ ಬೆಳವಣಿಗೆ: ದೇಶದಲ್ಲಿ ಖಾಸಗಿ ಜೀವ ವಿಮಾ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಂತ್ರಣ ಪ್ರಾಧಿಕಾರವಾದ ‘IRDAI’ ಮೂಲಕ ಪಾಲಿಸಿದಾರರ ಕುಂದುಕೊರತೆ ನಿವಾರಣೆ ಹಾಗೂ ಹಣಕಾಸು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಸಕ್ರೇಬೈಲು ಆನೆ ಬಿಡಾರದಲ್ಲಿ ಶೌರ್ಯ ಆನೆ ಸಾವು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು
ಹುಚ್ಚರನ್ನು ಜೈಲಿಗೆ ಹಾಕ್ತಾರಾ? ಪ್ರಕಾಶ್ ರಾಜ್​ಗೆ ಪ್ರತಾಪ್ ಸಿಂಹ ತಿರುಗೇಟು