AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್​ನಲ್ಲಿ ಎರಡು ಲಕ್ಷ ಕೋಟಿ ರೂ ದಾಟಿದ ಜಿಎಸ್​ಟಿ ಸಂಗ್ರಹ; ಈ ವರ್ಷ ಇಲ್ಲಿಯವರೆಗೆ ಸಿಕ್ಕಿದ್ದು 12 ಲಕ್ಷ ಕೋಟಿಗೂ ಹೆಚ್ಚು

ಸೆಪ್ಟೆಂಬರ್ 2026 ರಲ್ಲಿ ಭಾರತದ ಒಟ್ಟು ಜಿಎಸ್‌ಟಿ ಸಂಗ್ರಹವು ಶೇ. 14.7 ರಷ್ಟು ಏರಿಕೆಯಾಗಿದ್ದು, ₹2,03,521 ಕೋಟಿಗೆ ತಲುಪಿದೆ. ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಜಿಎಸ್​ಟಿ ಆದಾಯ ₹12.46 ಲಕ್ಷ ಕೋಟಿ ಆಗಿದೆ. ಅತಿಹೆಚ್ಚು ಜಿಎಸ್​ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಮುಂದುವರಿದಿದೆ. ಕರ್ನಾಟಕ ಸೇರಿದಂತೆ ದೇಶದ ಜಿಎಸ್‌ಟಿ ಆದಾಯದ ಸಂಪೂರ್ಣ ವಿವರ ಇಲ್ಲಿದೆ.

ಸೆಪ್ಟೆಂಬರ್​ನಲ್ಲಿ ಎರಡು ಲಕ್ಷ ಕೋಟಿ ರೂ ದಾಟಿದ ಜಿಎಸ್​ಟಿ ಸಂಗ್ರಹ; ಈ ವರ್ಷ ಇಲ್ಲಿಯವರೆಗೆ ಸಿಕ್ಕಿದ್ದು 12 ಲಕ್ಷ ಕೋಟಿಗೂ ಹೆಚ್ಚು
ಜಿಎಸ್​ಟಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2026 | 1:03 PM

Share

ನವದೆಹಲಿ, ಅಕ್ಟೋಬರ್ 1: ಸರ್ಕಾರಕ್ಕೆ ಒಟ್ಟು ಜಿಎಸ್‌ಟಿ (GST) ಆದಾಯ ಸಂಗ್ರಹದಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, 2026ರ ಸೆಪ್ಟೆಂಬರ್ ಅವಧಿಯಲ್ಲಿ ₹2,03,521 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ (ಸೆಪ್ಟೆಂಬರ್ 2025 ರಲ್ಲಿ ₹1,77,365 ಕೋಟಿ) ಹೋಲಿಸಿದರೆ ಜಿಎಸ್‌ಟಿ ಆದಾಯದಲ್ಲಿ ಶೇ. 14.7 ರಷ್ಟು ಗಣನೀಯ ಪ್ರಗತಿ ದಾಖಲಾಗಿದೆ. ರೀಫಂಡ್​ಗಳನ್ನು ಕಳೆದು ನಿವ್ವಳ ಜಿಎಸ್​ಟಿ ಆದಾಯದಲ್ಲಿ ಶೇ. 18ರಷ್ಟು ಹೆಚ್ಚಳ ಆಗಿದೆ. ₹1,76,520 ಕೋಟಿ ನಿವ್ವಳ ಜಿಎಸ್ಟಿ ಆದಾಯ ಸರ್ಕಾರಕ್ಕೆ ಸಿಕ್ಕಿದೆ.

ಇನ್ನು, ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಒಟ್ಟು ಜಿಎಸ್​ಟಿ ₹12.46 ಲಕ್ಷ ಕೋಟಿ ದಾಟಿದೆ. ನಿವ್ವಳ ಜಿಎಸ್​ಟಿ ಆದಾಯ ₹10.66 ಲಕ್ಷ ಕೋಟಿ ದಾಖಲಾಗಿದೆ.

2026ರ ಸೆಪ್ಟೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ ವಿವರ

  • ಆಂತರಿಕ ವಹಿವಾಟುಗಳಿಂದ (Domestic Revenue) ₹1,37,996 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಶೇ. 10.1 ರಷ್ಟು ಪ್ರಗತಿ ಕಾಣಿಸಿದೆ.
  • ಸರಕುಗಳ ಆಮದಿನ ಮೇಲಿನ ಜಿಎಸ್‌ಟಿ (Import Revenue) ಸಂಗ್ರಹವು ₹65,525 ಕೋಟಿಗೆ ತಲುಪಿದ್ದು, ಶೇ. 25.9 ರಷ್ಟು ಭಾರಿ ಏರಿಕೆ ದಾಖಲಿಸಿದೆ.

ಇದನ್ನೂ ಓದಿ: LPG Cylinder Price Hike: ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೆಚ್ಚಿದ ಹೊರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಹೆಚ್ಚಳ

ಸೆಪ್ಟೆಂಬರ್​ನಲ್ಲಿ ದಾಖಲಾದ ವಿವಿಧ ಜಿಎಸ್​ಟಿಗಳು

ಒಟ್ಟು ಜಿಎಸ್​ಟಿ ಸಂಗ್ರಹ: ₹2,03,521

  • ಸಿಜಿಎಸ್‌ಟಿ (CGST): ₹37,762 ಕೋಟಿ
  • ಎಸ್‌ಜಿಎಸ್‌ಟಿ (SGST): ₹45,363 ಕೋಟಿ
  • ಐಜಿಎಸ್‌‌ಟಿ (IGST): ₹1,20,396 ಕೋಟಿ

ಒಟ್ಟು ರಿಫಂಡ್ (Total Refunds): ₹27,001 ಕೋಟಿ ಪಾವತಿಸಲಾಗಿದ್ದು, ನಿವ್ವಳ ಜಿಎಸ್‌ಟಿ ಆದಾಯವು (Net GST Revenue) ₹1,76,520 ಕೋಟಿಗೆ ತಲುಪಿದೆ.

ಕರ್ನಾಟಕದಲ್ಲಿ ಜಿಎಸ್‌ಟಿ ಸಂಗ್ರಹದ ಸಾಧನೆ

ಕರ್ನಾಟಕ ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ಉತ್ತಮ ಸಾಧನೆ ಮುಂದುವರಿಸಿದೆ. ಆಮದು ಸರಕು ಹೊರತುಪಡಿಸಿ, ಕರ್ನಾಟಕದ ಆಂತರಿಕ ಜಿಎಸ್‌ಟಿ ಆದಾಯವು ₹13,884 ದಾಖಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ₹12,001 ಜಿಎಸ್​ಟಿ ಪಡೆಯಲಾಗಿತ್ತು. ಶೇ. 16ರಷ್ಟು ಜಿಎಸ್​ಟಿ ಸಂಗ್ರಹ ಹೆಚ್ಚಿಸಿದ ರಾಜ್ಯ.

ರಾಜ್ಯ ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ ಹಂಚಿಕೆ ಸೇರಿದಂತೆ (Post-Settlement SGST) ಕರ್ನಾಟಕವು 2026ರ ಸೆಪ್ಟೆಂಬರ್​​ನಲ್ಲಿ ₹8,094 ಕೋಟಿ ಆದಾಯ ಪಡೆದಿದ್ದು, ಶೇ. 14 ರಷ್ಟು ಹೆಚ್ಚಳ ದಾಖಲಿಸಿದೆ.

ಇದನ್ನೂ ಓದಿ: 3ನೇ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಘೋಷಣೆ; ವಿವಿಧ ಸ್ಕೀಮ್​ಗಳ ಬಡ್ಡಿದರದಲ್ಲಿ ಇಲ್ಲ ಬದಲಾವಣೆ

ಸೆಪ್ಟೆಂಬರ್​ನಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹಿಸಿದ ರಾಜ್ಯಗಳು

  1. ಮಹಾರಾಷ್ಟ್ರ: ₹29,986 ಕೋಟಿ
  2. ಕರ್ನಾಟಕ: ₹13,884 ಕೋಟಿ
  3. ಗುಜರಾತ್: ₹12,222 ಕೋಟಿ
  4. ತಮಿಳುನಾಡು: ₹10,188 ಕೋಟಿ
  5. ಹರ್ಯಾಣ: ₹10,097 ಕೋಟಿ

ಅತಿಹೆಚ್ಚು ಜಿಎಸ್​ಟಿ ಸೆಟಲ್ಮೆಂಟ್ ಪಡೆದ ರಾಜ್ಯಗಳು

  1. ಮಹಾರಾಷ್ಟ್ರ: ₹16,881 ಕೋಟಿ
  2. ಗುಜರಾತ್: ₹8,167 ಕೋಟಿ
  3. ಕರ್ನಾಟಕ: ₹8,094 ಕೋಟಿ
  4. ತಮಿಳುನಾಡು: ₹7,320 ಕೋಟಿ
  5. ಉತ್ತರಪ್ರದೇಶ: ₹7,277 ಕೋಟಿ

ದೇಶದ ಹಬ್ಬದ ಋತುವಿನ ವ್ಯಾಪಾರ-ವಹಿವಾಟುಗಳು ಚುರುಕುಗೊಂಡಿರುವುದು ಮತ್ತು ಆರ್ಥಿಕ ಚಟುವಟಿಕೆಗಳು ಸಕ್ರಿಯವಾಗಿರುವುದು ಈ ಭರ್ಜರಿ ಜಿಎಸ್‌ಟಿ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More