ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರಲ್ಲಿ ಆಯ್ಕೆ ಆದ ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಒಟಿಟಿಯಿಂದ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ

ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ
ರೂಪೇಶ್, ರಾಕೇಶ್​, ಸಾನ್ಯಾ, ಆರ್ಯವರ್ಧನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 24, 2022 | 8:59 PM

‘ಬಿಗ್ ಬಾಸ್​ ಕನ್ನಡ ಒಟಿಟಿ ಸೀಸನ್ 9’ (Bigg Boss Kannada OTT) ಆರಂಭ ಆಗಿದೆ. ಹಲವು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅನೇಕರು ಬಿಗ್ ಬಾಸ್ ಮನೆ ಸೇರಿದ್ದಾರೆ. ಹಳೆಯ ಸ್ಪರ್ಧಿಗಳ ಜತೆ 9 ಹೊಸ ಸ್ಪರ್ಧಿಗಳು ಕೂಡ ಇದ್ದಾರೆ. ಈ ಕಾರಣದಿಂದ ಬಿಗ್ ಬಾಸ್ ಸಾಕಷ್ಟು ಕುತೂಹಲ ಮೂಡಿಸಿದೆ. ‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರಲ್ಲಿ ಆಯ್ಕೆ ಆದ ರಾಕೇಶ್ ಅಡಿಗ (Rakesh Adiga), ಆರ್ಯವರ್ಧನ್ ಗುರೂಜಿ, ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಒಟಿಟಿಯಿಂದ ಟಿವಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು (ಸೆಪ್ಟೆಂಬರ್ 24) ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಇವರನ್ನು ಬರಮಾಡಿಕೊಳ್ಳಲಾಯಿತು. ಅವರ ಮುಂದೆ ಈ ಬಾರಿ ಸಾಕಷ್ಟು ಚಾಲೆಂಜ್​ಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

100 ದಿನಗಳ ಚಾಲೆಂಜ್

‘ಬಿಗ್ ಬಾಸ್ ಒಟಿಟಿ’ ಕೇವಲ 42 ದಿನಗಳ ಸ್ಪರ್ಧೆ ಆಗಿತ್ತು. ಕೆಲವರು ಗಾಯಗೊಂಡು ಮನೆಯಿಂದ ಹೊರ ಹೋದರೆ, ಇನ್ನೂ ಕೆಲವರು ಎಲಿಮಿನೇಟ್ ಆದರು. ಕೆಲವೇ ವಾರಗಳಲ್ಲಿ ಫಿನಾಲೆ ಬಂದಿತ್ತು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಬಿಗ್ ಬಾಸ್ ಕಪ್ ಗೆಲ್ಲಬೇಕು ಎಂದರೆ 100 ದಿನ ಮನೆಯಲ್ಲಿ ಉಳಿದುಕೊಳ್ಳಬೇಕು. ಹೊರ ಜಗತ್ತಿನ ಸಂಪರ್ಕ ಇಲ್ಲದೆ 100 ದಿನ ಇರುವುದು ಅಷ್ಟು ಸುಲಭದ ಮಾತಲ್ಲ. ಇದನ್ನು ಸ್ಪರ್ಧಿಗಳು ಹೇಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ
Image
Bigg Boss Kannada Season 9: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ 8 ಮಂದಿ ಇವರೇ..!
Image
‘ಬಿಗ್ ಬಾಸ್ ಕನ್ನಡ ಸೀಸನ್ 9’:​ ಮನೆ ಸೇರುವ 18 ಸ್ಪರ್ಧಿಗಳ ಹೆಸರು ಲೀಕ್? ಇಲ್ಲಿದೆ ಫುಲ್ ಲಿಸ್ಟ್
Image
‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?

ಅನುಭವಿ ಸ್ಪರ್ಧಿಗಳ ಮಧ್ಯೆ ಫೈಟ್

ಈ ಬಾರಿ ಕೇವಲ ಹಳೆಯ ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಮನೆಗೆ ಬರುತ್ತಿಲ್ಲ. ಇಲ್ಲಿ ಹೊಸ ಸ್ಪರ್ಧಿಗಳು ಕೂಡ ಇದ್ದಾರೆ. ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್ ಅವರಂತಹ ಅನುಭವಿ ಕಂಟೆಸ್ಟಂಟ್​​ಗಳಿದ್ದಾರೆ. ಈ ಕಾರಣಕ್ಕೆ ಇದು ಒಟಿಟಿ ಸ್ಪರ್ಧಿಗಳಿಗೆ ಚಾಲೆಂಜ್ ಎನಿಸಬಹುದು.

ಮನೆಗೆ ಹೊಂದಿಕೊಳ್ಳಬೇಕು

42 ದಿನಗಳ ಕಾಲ ಮನೆಯಲ್ಲೇ ಇದ್ದ ಒಟಿಟಿ ಸ್ಪರ್ಧಿಗಳಿಗೆ ಒಂದು ವಾರಗಳ ಗ್ಯಾಪ್ ಸಿಕ್ಕಿತ್ತು. ಈಗ ಎಲ್ಲರೂ ಮತ್ತೆ ಮನೆ ಒಳಗೆ ಬಂದಿದ್ದಾರೆ. ಹೊಸ ಸ್ಪರ್ಧಿಗಳ ಜತೆ ಇವರು ಹೊಂದಿಕೊಳ್ಳಬೇಕಿದೆ. ಇದನ್ನು ಸ್ಪರ್ಧಿಗಳು ಹೇಗೆ ಮ್ಯಾನೇಜ್ ಮಾಡಿಕೊಂಡು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದು ಟಿವಿ ಸೀಸನ್

ಈ ಮೊದಲು ನಡೆದಿದ್ದು ಒಟಿಟಿ ಸೀಸನ್ ಆಗಿತ್ತು. ಅನೇಕರು ಒಟಿಟಿ ಸೀಸನ್ ನೋಡಿಲ್ಲ. ಈಗ ಹೊಸದಾಗಿ ಟಿವಿಯಲ್ಲಿ ನೋಡುವ ವೀಕ್ಷಕರಿಗೆ ಒಟಿಟಿ ಸ್ಪರ್ಧಿಗಳು ಹೊಸಬರ ರೀತಿಯಲ್ಲೇ ಕಾಣುತ್ತಾರೆ. ಈ ಕಾರಣಕ್ಕೆ ಅವರು ಇಷ್ಟ ಆಗಬಹುದು, ಆಗದೇನು ಇರಬಹುದು.

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ