ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇಬ್ಬರು ಹೋರಾಟಗಾರರು; ದೊಡ್ಮನೆಗೆ ರೂಪೇಶ್ ರಾಜಣ್ಣ ಎಂಟ್ರಿ

ಪ್ರಶಾಂತ್ ಸಂಬರ್ಗಿ ಅವರು ಹೋರಾಟಗಾರನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಅವರು ಮತ್ತೆ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ರೂಪೇಶ್ ರಾಜಣ್ಣ​ ಕೂಡ ಅವರಿಗೆ ಜತೆಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇಬ್ಬರು ಹೋರಾಟಗಾರರು; ದೊಡ್ಮನೆಗೆ ರೂಪೇಶ್ ರಾಜಣ್ಣ ಎಂಟ್ರಿ
ರೂಪೇಶ್​-ಪ್ರಶಾಂತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 24, 2022 | 10:16 PM

ಕನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡ ರೂಪೇಶ್ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್ ಕನ್ನಡ  ಸೀಸನ್ 9ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ. ಹಿಂದಿ ಹೇರಿಕೆ ವಿರೋಧಿಸಿ, ಕನ್ನಡ ಉಳಿಸಿ ಬಗ್ಗೆ ಸಾಕಷ್ಟು ಚಳುವಳಿ ಮಾಡಿದ್ದಾರೆ ರೂಪೇಶ್ ರಾಜಣ್ಣ. ಈಗ ಅವರು ಬಿಗ್ ಬಾಸ್​ನಲ್ಲಿ ಯಾವ ರೀತಿಯಲ್ಲಿ ಗಮನ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಶಾಂತ್ ಸಂಬರ್ಗಿ ಅವರು ಹೋರಾಟಗಾರನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಅವರು ಮತ್ತೆ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ರೂಪೇಶ್ ರಾಜಣ್ಣ​ ಕೂಡ ಅವರಿಗೆ ಜತೆಯಾಗಿದ್ದಾರೆ. ಈ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಹೋರಾಟಗಾರರು ಸೇರಿದಂತಾಗಿದೆ.

ತಮ್ಮ ಬಗ್ಗೆ ಮಾಹಿತಿ ನೀಡಿರುವ ರೂಪೇಶ್ ರಾಜಣ್ಣ, ‘ಕನ್ನಡದ ಮೇಲೆ ಮೊದಲೇ ಪ್ರೀತಿ ಇತ್ತು. ಮೊದಲು ಆ್ಯಂಕರ್ ಆಗಿದ್ದೆ. ಸಿನಿಮಾದಲ್ಲಿ ನಟಿಸಿದ್ದೆ. ನಂತರ ಕನ್ನಡದ ಪರವಾಗಿ ಹೋರಾಟ ಆರಂಭಿಸಿದೆ. ಈಗ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ರೂಪೇಶ್ ಎಲ್ಲಾ ಭಾಷೆ ದ್ವೇಷ ಮಾಡ್ತಾರೆ ಎಂಬ ಆರೋಪ ಇದೆ. ಆದರೆ, ನಮ್ಮ ಭಾಷೆ ಮೇಲೆ ಬೇರೆ ಭಾಷೆಯನ್ನು ಹೇರುವುದನ್ನು ಮಾತ್ರ ನಾನು ವಿರೋಧಿಸುತ್ತೇವೆ. ಕನ್ನಡವನ್ನು ಕನ್ನಡ ಎನ್ನಿ, ಕನ್ನಡ್ ಎನ್ನಬೇಡಿ. ಚಿಕ್ಕ ವಯಸ್ಸಲ್ಲಿ ತಂದೆ ಕಳೆದುಕೊಂಡೆ. ಅಮ್ಮ ಮಾತ್ರ ಇದ್ದಿದ್ದು. ಅವರು ನಮ್ಮನ್ನು ಬೆಳೆಸಿ ಇಲ್ಲಿಗೆ ತಂದು ನಿಲ್ಸಿಸಿದ್ದಾರೆ. ನನ್ನ ಹೋರಾಟದ ಜೀವನಕ್ಕೆ ಹೆಂಡತಿ ಬೆಂಬಲವಾಗಿ ನಿಂತಿದ್ದಾಳೆ’ ಎಂದಿದ್ದಾರೆ.

ಇದನ್ನೂ ಓದಿ
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ
Image
Bigg Boss Kannada Season 9: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ 8 ಮಂದಿ ಇವರೇ..!
Image
‘ಬಿಗ್ ಬಾಸ್ ಕನ್ನಡ ಸೀಸನ್ 9’:​ ಮನೆ ಸೇರುವ 18 ಸ್ಪರ್ಧಿಗಳ ಹೆಸರು ಲೀಕ್? ಇಲ್ಲಿದೆ ಫುಲ್ ಲಿಸ್ಟ್
Image
‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?

ಇದನ್ನೂ ಓದಿ: ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?

ರೂಪೇಶ್ ರಾಜಣ್ಣ ಅವರು ಮಿಮಿಕ್ರಿ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರು ಹಲವು ಸ್ಟಾರ್ ನಟರ ಮಿಮಿಕ್ರಿ ಮಾಡುತ್ತಾರೆ. ಇದನ್ನು ಕೂಡ ಅವರು ವೇದಿಕೆ ಮೇಲೆ ಮಾಡಿ ತೋರಿಸಿದ್ದಾರೆ. ಈಗಾಗಲೇ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ಕಾರಣದಿಂದ ದೊಡ್ಮನೆಯಲ್ಲಿ ಡಬಲ್ ರೂಪೇಶ್ ಆಗಿದ್ದಾರೆ.

Published On - 10:15 pm, Sat, 24 September 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ