- Kannada News Photo gallery Bigg Boss Kannada Season 9 Contestant full list BBK9 18 Contestant Name and BBK 9 Final List
Bigg Boss Kannada 9: ಬಿಗ್ ಬಾಸ್ ಮನೆಯಲ್ಲಿ 11 ಮಂದಿ ಕನ್ಫರ್ಮ್
Bigg Boss Kannada Season 9 Contestant full list: ಈ ನಾಲ್ವರ ಜೊತೆಗೆ ಇದೀಗ ಕೆಲ ಹಳೆಯ ಸ್ಪರ್ಧಿಗಳು ಮತ್ತು ಕೆಲ ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ 18 ಸ್ಪರ್ಧಿಗಳು 11 ಮಂದಿ ಯಾರೆಂಬುದು ಈಗಾಗಲೇ ಖಚಿತವಾಗಿದ್ದಾರೆ. ಅವರೆಂದರೆ...
Updated on:Sep 24, 2022 | 10:12 PM

ಬಿಗ್ ಬಾಸ್ ಸೀಸನ್ 9 ರಂಗೇರಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಬಿಗ್ ಬಾಸ್ ಒಟಿಟಿಯಿಂದ ನಾಲ್ವರು ಸ್ಪರ್ಧಿಗಳು ನೇರ ಎಂಟ್ರಿ ಪಡೆದಿರುವುದು ಕನ್ಫರ್ಮ್ ಆಗಿದೆ.

ಈ ನಾಲ್ವರ ಜೊತೆಗೆ ಇದೀಗ ಕೆಲ ಹಳೆಯ ಸ್ಪರ್ಧಿಗಳು ಮತ್ತು ಕೆಲ ಹೊಸ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ 18 ಸ್ಪರ್ಧಿಗಳು 12 ಮಂದಿ ಯಾರೆಂಬುದು ಈಗಾಗಲೇ ಖಚಿತವಾಗಿದ್ದಾರೆ. ಅವರೆಂದರೆ...

ಕಾವ್ಯಶ್ರೀ ಗೌಡ: ಕಿರುತೆರೆ ನಟಿ ಕಾವ್ಯಶ್ರೀ ಗೌಡ ಸಹ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿವ್ಯಾ ಉರುಡುಗ: ಕಳೆದ ಬಾರಿಯ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡ ದಿವ್ಯಾ ಈ ಬಾರಿ ಕೂಡ ಹಳೆಯ ಸ್ಪರ್ಧಿಗಳ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಅರುಣ್ ಸಾಗರ್: ಈ ಹಿಂದೆ ಬಿಗ್ ಬಾಸ್ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಈ ಬಾರಿ ಕೂಡ ದೊಡ್ಮನೆಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ದೀಪಿಕಾ ದಾಸ್: ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲಿಸ್ಟ್‌ಗಳಲ್ಲಿ ಒಬ್ಬರಾದ ದೀಪಿಕಾ ದಾಸ್ ಈ ಬಾರಿ ಕೂಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರಶಾಂತ್ ಸಂಬರಗಿ: ಕಳೆದ ಬಾರಿಯ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡು ಒಂದಷ್ಟು ವಿವಾದ ಎಬ್ಬಿಸಿದ್ದ ಪ್ರಶಾಂತ್ ಸಂಬರಗಿ ಈ ಬಾರಿ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಅನುಪಮಾ ಗೌಡ: ಹಳೆಯ ಬಿಗ್ ಬಾಸ್ ಸ್ಪರ್ಧಿ ನಟಿ-ನಿರೂಪಕಿ ಅನುಪಮಾ ಗೌಡ ಕೂಡ ಈ ಬಾರಿ ದೊಡ್ನನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಶ್ವರ್ಯಾ ಪಿಸ್ಸೆ: ಭಾರತೀಯ ಸರ್ಕ್ಯೂಟ್ ಮತ್ತು ಆಫ್-ರೋಡ್ ಮೋಟಾರ್ಸೈಕಲ್ ರೇಸರ್ ಐಶ್ವರ್ಯಾ ಪಿಸ್ಸೆ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್

ರೂಪೇಶ್ ಶೆಟ್ಟಿ

ಸಾನ್ಯಾ ಅಯ್ಯರ್

ನಟ ರಾಕೇಶ್ ಅಡಿಗ
Published On - 5:55 pm, Sat, 24 September 22




