ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?

ಗೊಂಬೆ ಎಂದೇ ಫೇಮಸ್ ಆದವರು ನೇಹಾ ಗೌಡ. ಈಗ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದಾರೆ.

ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
ನೇಹಾ-ವಿನೋದ್
TV9kannada Web Team

| Edited By: Rajesh Duggumane

Sep 24, 2022 | 9:40 PM

‘ಮಜಾ ಭಾರತ’ (Majaa Bharatha) ಖ್ಯಾತಿಯ ಮಂಜು ಪಾವಗಡ (Manju Pavagada) ಅವರು ಬಿಗ್ ಬಾಸ್ 8ನೇ ಸೀಸನ್​​ಗೆ ಎಂಟ್ರಿಕೊಟ್ಟಿದ್ದರು. ಅವರು ಮನೆ ಒಳಗೆ ಬಂದು ಎಲ್ಲರನ್ನೂ ನಗಿಸಿದ್ದರು. ಅವರು ವಿನ್ನರ್ ಕೂಡ ಆದರು. ಈ ಬಾರಿ ‘ಮಜಾ ಭಾರತ’ ಖ್ಯಾತಿಯ ವಿನೋದ್ ಗೊಬ್ಬರಗಾಲ ಅವರು ಬಿಗ್​ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಕೂಡ ಮಂಜು ರೀತಿ ನಗಿಸಿ ಮೋಡಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಕಾರಣದಿಂದಲೂ ವಿನೋದ್ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ನೇಹಾ ಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾರೆ.

‘ಮಜಾ ಭಾರತ’ ಮೊದಲಾದ ಶೋಗಳ ಮೂಲಕ ಎಲ್ಲರ ಗಮನ ಸೆಳೆದ ವಿನೋದ್ ಅವರು ಬಿಗ್ ಬಾಸ್​ ಸೀಸನ್​ 9ಕ್ಕೆ ಬಂದಿದ್ದಾರೆ. ತಮ್ಮ ಬಗ್ಗೆ ವಿನೋದ್ ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಮೊದಲು ನೋಡೋಕೆ ಚೆನ್ನಾಗಿರಲಿಲ್ಲ. ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯನ ತರ ಇದ್ದೆ. ಎಲ್ಲರೂ ನನಗೆ ಕಪ್ಪೆ ಎನ್ನುತ್ತಿದ್ದರು. ಆರಂಭದಲ್ಲಿ ಕೋಪ ಬರುತ್ತಿತ್ತು. ಆದರೆ, ಈಗ ಅಭ್ಯಾಸ ಆಗಿದೆ’ ಎಂದಿದ್ದಾರೆ ಅವರು.

ಬಿಗ್ ಬಾಸ್​ ಮನೆಗೆ ಹೋಗೋದೇ ಒಂದು ಚಾಲೆಂಜ್. ಅಲ್ಲಿ ಹೋದಮೇಲೆ ಒಂದಷ್ಟು ಚಾಲೆಂಜ್​, ಟಾಸ್ಕ್​ ಕೊಡಲಾಗುತ್ತದೆ. ಸುದೀಪ್ ಕೂಡ ವಿನೋದ್​ಗೆ ಒಂದು ಟಾಸ್ಕ್​ ನೀಡಿದ್ದಾರೆ. ‘ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದಾಗ ವಿಟಿ ಹಾಕುತ್ತಾರೆ. ಆದರೆ, ನಿಮಗೆ ವಿಟಿ ಹಾಕಲ್ಲ. ಮನೆ ಒಳಗೆ ಹೋಗಿ ಎಲ್ಲಾ ಸ್ಪರ್ಧಿಗಳಿಗೆ ಈ ಬಗ್ಗೆ ಕೇಳಿ. ರಾತ್ರಿ ಮಲಗುವ ಸಂದರ್ಭದಲ್ಲಿ ಒಂದು ಸ್ಪರ್ಧಿಯನ್ನು ಕಿಚನ್​ಗೆ ಕರೆದುಕೊಂಡು ಹೋಗಿ ಈ ಬಗ್ಗೆ ಅರ್ಧಗಂಟೆ ಕೇಳಬೇಕು ಎಂದು ಟಾಸ್ಕ್​ ನೀಡಿದ್ದಾರೆ ಸುದೀಪ್.

ನೇಹಾ ಗೌಡ

ಇದನ್ನೂ ಓದಿ

ಗೊಂಬೆ ಎಂದೇ ಫೇಮಸ್ ಆದವರು ನೇಹಾ ಗೌಡ. ಈಗ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿರೋದು ವಿಶೇಷ. ಇದು ಫ್ಯಾನ್ಸ್​ಗೆ ಖುಷಿ ನೀಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada