ಬಿಗ್ ಬಾಸ್​ಗೆ ಎಂಟ್ರಿ ಕೊಟ್ರ ನಟ, ಉದ್ಯಮಿ ದರ್ಶ್ ಚಂದ್ರಪ್ಪ; ಲವ್ ಮಾಡೋದೆ ಇಲ್ಲ ಎಂದ ಸ್ಪರ್ಧಿ

ನಟ ದರ್ಶ್ ಚಂದ್ರಪ್ಪ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 6ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ನಟನೆ ಜತೆಗೆ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದಾರೆ.

ಬಿಗ್ ಬಾಸ್​ಗೆ ಎಂಟ್ರಿ ಕೊಟ್ರ ನಟ, ಉದ್ಯಮಿ ದರ್ಶ್ ಚಂದ್ರಪ್ಪ; ಲವ್ ಮಾಡೋದೆ ಇಲ್ಲ ಎಂದ ಸ್ಪರ್ಧಿ
ದರ್ಶ್
TV9kannada Web Team

| Edited By: Rajesh Duggumane

Sep 24, 2022 | 8:15 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಆರಂಭ ಆಗಿದೆ. ಶನಿವಾರ ಸಂಜೆ ಬಿಗ್ ಬಾಸ್​ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಬಿಗ್ ಬಾಸ್​ ನಿರೂಪಣೆ ಮಾಡಿದ್ದಾರೆ. ನಟ ದರ್ಶ್ ಚಂದ್ರಪ್ಪ (Darsh Chandrappa) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 6ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ನಟನೆ ಜತೆಗೆ ಉದ್ಯಮದಲ್ಲೂ ಅವರು ತೊಡಗಿಕೊಂಡಿದ್ದಾರೆ. ಅವರು ಬಿಗ್ ಬಾಸ್​ನಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ನಟನೆ ಪ್ಯಾಷನ್, ಜೀವನ ನಡೆಸೋಕೆ ಸ್ಟಾರ್ಟಪ್ ಆರಂಭಿಸಿದ್ದೇನೆ. 365 ದಿನವೂ ಆ್ಯಕ್ಟಿಂಗ್ ಮಾಡೋಕೆ ಅವಕಾಶ ಸಿಕ್ಕರೆ ನಾನು ನಟನೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮನೆಯಲ್ಲಿ ಇದ್ದರೂ ಉದ್ಯಮ ನಡೆಯುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ದರ್ಶ್​.

‘ಮಾಡೆಲಿಂಗ್ ಶುರು ಮಾಡಿದ್ದೆ. ಅದನ್ನು ಗಂಭೀರವಾಗಿ ತೆಗೆದುಕೊಂಡೆ. ನಂತರ ಆ್ಯಕ್ಟಿಂಗ್ ಶುರು ಮಾಡಿದೆ. ಧಾರಾವಾಹಿಯಲ್ಲಿ ನಟೋಸಿಕೆ ಚಾನ್ಸ್​ ಸಿಕ್ತು. ಕ್ಯಾಟ್​ಲಾಗ್ ಕಂಪನಿ ಮಾಡಿದ್ದೇನೆ. ಹಲವು ಆಫರ್ ಸಿಕ್ತು. ಈಗ ನಾನೇ ಸ್ಟಾರ್ಟಪ್​ ಶುರು ಮಾಡಿದ್ದೇನೆ. ಇದಕ್ಕೆ ನಾನು ಅಪ್ಪ-ಅಮ್ಮನಿಗೆ ಥ್ಯಾಂಕ್ಸ್ ಹೇಳಬೇಕು. ಅವರು ನನ್ನ ಮೇಲೆ ನಂಬಿಕೆ ಇಟ್ಟರು. ಎಲ್ಲಿ ಹೋದರು ಯಶಸ್ಸು ಗಳಿಸುತ್ತಾನೆ ಎಂಬ ನಂಬಿಕೆ ಅವರಿಗಿದೆ’ ಎಂದಿದ್ದಾರೆ ದರ್ಶ್.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ 19 ವರ್ಷದ ಸೈಕ್ ನವಾಜ್​; ಅವರ ವಿಶೇಷತೆಗಳೇನು?

‘ಬ್ರೇಕಪ್ ಆಯ್ತು. ಆಮೇಲೆ ಮತ್ತೆ ಲವ್ ಮಾಡೋಕೆ ಹೋಗಿಲ್ಲ. ನಾನು ಲವ್ ಸಿನಿಮಾ ನೋಡಲ್ಲ. ಯಾವುದರಲ್ಲಾದರೂ ಕಮಿಟ್​ಮೆಂಟ್​ ಬೇಕು. ಬಿಗ್ ಬಾಸ್ ಒಳ್ಳೆಯ ಜರ್ನಿ ಆಗತ್ತೆ ಅಂದುಕೊಂಡಿದ್ದೇನೆ. ಎಕ್ಸ್​ಪ್ಲೋರ್ ಮಾಡಬೇಕು ಅನ್ನೋದು ನನ್ನ ಆಸೆ. ಬಿಗ್ ಬಾಸ್​ನಿಂದ ಹೊಸ ಬಾಗಿಲು ತೆರೆಯಬಹುದು’ ಎಂದಿರುವ ಅವರು, ಲವ್ ಮಾಡೋದೆ ಇಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ

‘ಬಿಗ್ ಬಾಸ್ ಕನ್ನಡ ಸೀಸನ್ 9’  ಆರಂಭ ಆಗಿದೆ. ಕಿಚ್ಚ ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಶೋ ನಡೆಸಿಕೊಡುತ್ತಿದ್ದಾರೆ. ಅವರು ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ಈ ಸೀಸನ್​ನಲ್ಲಿ ಹೊಸ ಸ್ಪರ್ಧಿಗಳ ಜತೆ ಹಳೆಯ ಸ್ಪರ್ಧಿಗಳೂ ಇರಲಿದ್ದಾರೆ. ಅಂದರೆ, ಈ ಮೊದಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳು ಈ ಬಾರಿ ಇರಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada