ಒಂದೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ನಟಿ ಮಯೂರಿ

‘ಅಶ್ವಿನಿ ನಕ್ಷತ್ರದ’ ಮೂಲಕ ಗುರುತಿಸಿಕೊಂಡಿದ್ದ ನಟಿ ಮಯೂರಿ ಕ್ಯಾತಾರಿ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 9’ಕ್ಕೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಹರಿದಾಡಿತ್ತು.

ಒಂದೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ನಟಿ ಮಯೂರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 24, 2022 | 6:56 PM

‘ಅಶ್ವಿನಿ ನಕ್ಷತ್ರದ’ (Ashwini Nakshatra Movie) ಮೂಲಕ ಗುರುತಿಸಿಕೊಂಡಿದ್ದ ನಟಿ ಮಯೂರಿ ಕ್ಯಾತಾರಿ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 9’ಕ್ಕೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಹರಿದಾಡಿತ್ತು. ಈಗ ಅದು ಖಚಿತವಾಗಿದೆ. ಅವರ ಎಂಟ್ರಿಯಿಂದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಕಿರುತೆರೆಯ ‘ಅಶ್ವಿನಿ ನಕ್ಷತ್ರ’ ಸೀರಿಯಲ್​ ಮೂಲಕ ಹೆಚ್ಚು ಖ್ಯಾತಿ ಪಡೆದ ಮಯೂರಿ, ನಂತರ ಸಿನಿಮಾಗೂ ಕಾಲಿಟ್ಟರು. ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಗಮನಾರ್ಹ ಪಾತ್ರ ಮಾಡಿದರು. ಶಶಾಂಕ್ ನಿರ್ದೇಶನದ ‘ಕೃಷ್ಣ ಲೀಲಾ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ‘ಪೊಗರು’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ತಂಗಿಯಾಗಿ ಅವರು ನಟಿಸಿದ್ದಾರೆ. 2020ರ ಜೂನ್​ನಲ್ಲಿ ತಮ್ಮ ಬಹುಕಾಲದ ಗೆಳಯ ಅರುಣ್​ ಜೊತೆ ಬೆಂಗಳೂರಿನ ದೇವಸ್ಥಾನದಲ್ಲಿ ಮಯೂರಿ ಹಸೆಮಣೆ ಏರಿದ್ದರು. 2021ರ ಮಾರ್ಚ್​ ತಿಂಗಳಲ್ಲಿ ಅವರು ಗಂಡುಮಗುವಿಗೆ ಜನ್ಮ ನೀಡಿದರು.

‘ನನಗೆ ನನ್ನ ಕುಟುಂಬವೇ ಪ್ರಪಂಚ. ನನ್ನ ಮಗುವಿಗೆ ಈಗ ಕೇವಲ ಒಂದೂವರೆ ವರ್ಷ. ಅವನನ್ನು ಬಿಟ್ಟು ಹೇಗೆ ಇರುತ್ತೀನೋ ಎಂಬುದು ಗೊತ್ತಿಲ್ಲ. ನಾನು ಹೊಸ ಚಾಲೆಂಜ್ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಮಯೂರಿ ಹೇಳಿಕೊಂಡಿದ್ದಾರೆ. ಮಯೂರಿಯನ್ನು ಕಳುಹಿಸಲು ಇಡೀ ಕುಟುಂಬ ಬಂದಿತ್ತು. ಮಗು ಕೂಡ ವೇದಿಕೆ ಏರಿತ್ತು. ಮಗು ಬಿಟ್ಟು ಹೊರಡುವಾಗ ಮಯೂರಿ ಭಾವುಕರಾದರು.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 9’:​ ಮನೆ ಸೇರುವ 18 ಸ್ಪರ್ಧಿಗಳ ಹೆಸರು ಲೀಕ್? ಇಲ್ಲಿದೆ ಫುಲ್ ಲಿಸ್ಟ್

ಮಗು ಜನಿಸಿದ್ದ ಸಂದರ್ಭದಲ್ಲಿ ಫೋಟೋ ಹಂಚಿಕೊಂಡಿದ್ದ ಮಯೂರಿ, ‘ಗಂಡುಮಗು ಜನಿಸಿದೆ. ನಮ್ಮ ಮನೆಗೆ ಪುಟಾಣಿ ಆಗಮಿಸಿದ್ದಾನೆ. ಈ ಸುಮಧುರವಾದ ಅನುಭವವನ್ನು ಹೇಳಿಕೊಳ್ಳಲು ಪದಗಳೇ ಇಲ್ಲ. ಇನ್ನೊಂದು ಸುಂದರ ಪಯಣವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

Published On - 6:44 pm, Sat, 24 September 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್