AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​

Aryavardhan Guruji | Roopesh Shetty: ಒಟ್ಟು 42 ದಿನಗಳ ಕಾಲ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ನಡೆಯಿತು. ಅದರಲ್ಲಿ ಚೆನ್ನಾಗಿ ಆಡಿದ 4 ಜನರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಚಾನ್ಸ್​ ಸಿಕ್ಕಿದೆ.

BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​
‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಎಂಟ್ರಿ ಪಡೆದ ಸ್ಪರ್ಧಿಗಳು
TV9 Web
| Updated By: ಮದನ್​ ಕುಮಾರ್​|

Updated on:Sep 16, 2022 | 11:28 PM

Share

2022ರ ವರ್ಷದಲ್ಲಿ ಬಿಗ್​ ಬಾಸ್​ ಪ್ರೇಕ್ಷಕರಿಗೆ ಡಬಲ್​ ಧಮಾಕ. ಇಷ್ಟು ವರ್ಷಗಳ ಕಾಲ ಟಿವಿ ವರ್ಷನ್​ ಶೋ ಮಾತ್ರ ಪ್ರಸಾರ ಆಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಯಿತು. ಅದು ಮುಗಿಯುತ್ತಿದ್ದಂತೆಯೇ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada season 9) ಶುರುವಾಗಲು ಸಕಲ ಸಿದ್ಧತೆ ನಡೆದಿದೆ. ಆ ಶೋನಲ್ಲಿ ರಾಕೇಶ್​ ಅಡಿಗ (Rakesh Adiga), ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ (Sanya Iyer)​ ಅವರು ಸ್ಪರ್ಧಿಸುವುದು ಖಚಿತವಾಗಿದೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಫಿನಾಲೆ ಸೆಪ್ಟೆಂಬರ್​ 16ರ ಸಂಜೆ ನಡೆಯಿತು. ಈ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಅವರು ನಾಲ್ಕು ಜನರ ಹೆಸರನ್ನು ಘೋಷಿಸಿದರು.

ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ಸೋನು ಶ್ರೀನಿವಾಸ್​ ಗೌಡ, ಸಾನ್ಯಾ ಅಯ್ಯರ್​, ಜಶ್ವಂತ್​ ಬೋಪಣ್ಣ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಅವರು ಫಿನಾಲೆ ವಾರದವರೆಗೂ ಪೈಪೋಟಿ ನೀಡಿದರು. ಆದರೆ ಕಡಿಮೆ ವೋಟ್​ ಪಡೆದಿದ್ದರಿಂದ ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ಜಶ್ವಂತ್​ ಬೋಪಣ್ಣ ಹಾಗೂ ಸೋನು ಗೌಡ​ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಯ್ತು. ಇನ್ನುಳಿದ ನಾಲ್ಕು ಜನರು ಟಿವಿ ಸೀಸನ್​ ಪ್ರವೇಶಿಸುವ ಚಾನ್ಸ್​ ಪಡೆದುಕೊಂಡರು.

ಒಟ್ಟು 42 ದಿನಗಳ ಕಾಲ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ನಡೆಯಿತು. ಬೇರೆ ಬೇರೆ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಗಾಯದ ಸಮಸ್ಯೆಯಿಂದ ಲೋಕೇಶ್​ ಮತ್ತು ಅರ್ಜುನ್​ ರಮೇಶ್​ ಅವರು ಅರ್ಧಕ್ಕೇ ಆಟ ನಿಲ್ಲಿಸಬೇಕಾಯಿತು. ಪ್ರತಿ ವಾರ ಎಲಿಮಿನೇಷನ್​ ನಡೆದೇ ಇತ್ತು. ಒಂದು ವಾರ ಡಬಲ್​ ಎಲಿಮಿನೇಷನ್​ ನಡೆದಾಗ ಅಕ್ಷತಾ ಕುಕ್ಕಿ ಹಾಗೂ ಚೈತ್ರಾ ಹಳ್ಳಿಕೇರಿ ಅವರು ದೊಡ್ಮನೆಯಿಂದ ಔಟ್​ ಆಗಿದ್ದರು. ಇಂಥ ಹಲವು ಏಳು-ಬೀಳುಗಳಿಗೆ ಸಾಕ್ಷಿಯಾದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಕಾರ್ಯಕ್ರಮಕ್ಕೆ ಈಗ ತೆರೆ ಬಿದ್ದಿದೆ.

ಇದನ್ನೂ ಓದಿ
Image
BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ
Image
Aryavardhan Guruji: ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು
Image
Aryavardhan Guruji: ಈ ಬಾರಿ ‘ಬಿಗ್ ಬಾಸ್​’ ಗೆಲ್ಲೋರು ಯಾರು? ಮೊದಲ ದಿನವೇ ಭವಿಷ್ಯ ನುಡಿದ ಆರ್ಯವರ್ಧನ್​ ಗುರೂಜಿ

ಸೆಪ್ಟೆಂಬರ್​ 24ರಿಂದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ. ಅದರಲ್ಲಿ ಪ್ರಶಾಂತ್​ ಸಂಬರಗಿ, ದೀಪಿಕಾ ದಾಸ್​, ಅನುಪಮಾ ಗೌಡ ಸೇರಿದಂತೆ 9 ಹಳೇ ಸ್ಪರ್ಧಿಗಳು ಕೂಡ ಇದರಲ್ಲಿ ಭಾಗವಹಿಸುವುದು ಖಚಿತವಾಗಿದೆ. ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಸೀಸನ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕಿಚ್ಚ ಸುದೀಪ್​ ಅವರು ಎಂದಿನ ಖದರ್​ನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:28 pm, Fri, 16 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​